ವ್ಯಾಪಾರದಲ್ಲಿ ಲಾಭ, ಯಶಸ್ಸು ಈ ಏಳು ಫೆಂಗ್ ಶುಯಿ

First Published | Feb 26, 2021, 3:30 PM IST

ಫೆಂಗ್ ಶುಯಿ ಪ್ರಕಾರ ವಾಣಿಜ್ಯ ಕಟ್ಟಡಗಳ ಬಾಹ್ಯ ಮತ್ತು ಆಂತರಿಕ ವಿನ್ಯಾಸ ಮತ್ತು ಅಲ್ಲಿ ಇರಿಸಲಾದ ವಸ್ತುಗಳು ವ್ಯಾಪಾರದ ಯಶಸ್ಸು ಮತ್ತು ಸಮೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದೆ. ತಪ್ಪು ಫೆಂಗ್ ಶುಯಿ ಯಿಂದ ತಯಾರಿಸಿದ ಕಟ್ಟಡವು  ಹಗಲಿರುಳು ಶ್ರಮಿಸುತ್ತಿರುವ ಕಠಿಣ ಪರಿಶ್ರಮಕ್ಕೆ ಬೆಲೆ ಇರದಂತೆ ಮಾಡುತ್ತದೆ.  ಆದರೆ ನೈಸರ್ಗಿಕ ಶಕ್ತಿಗಳ ಸರಿಯಾದ ಸಾಮರಸ್ಯದಿಂದ ನಿರ್ಮಿಸಿದ ಕಟ್ಟಡವು ಅದೃಷ್ಟವನ್ನು ತಂದುಕೊಳ್ಳಬಹುದು. ಫೆಂಗ್ ಶುಯಿ ತತ್ವಗಳನ್ನು ವಾಣಿಜ್ಯ ಕಟ್ಟಡಕ್ಕಾಗಿ ಹೇಗೆ ಬಳಸಬೇಕು ಎಂಬುದರ ಕುರಿತು ತಜ್ಞರು ಏನು ಹೇಳುತ್ತಾರೆ ತಿಳಿಯಿರಿ . 

1-ಕ್ಯಾಶ್ ಬಾಕ್ಸ್ ಅಥವಾ ಕ್ಯಾಶ್‌ನ ಸ್ಥಾನವು ಯಾವುದೇ ಕಚೇರಿಯಲ್ಲಿ ಅತ್ಯಂತ ಪ್ರಮುಖ ಭಾಗವಾಗಿದೆ. ಫೆಂಗ್ ಶುಯಿ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಇರಿಸಲಾದ ನಗದು ಪೆಟ್ಟಿಗೆಯು ವ್ಯಾಪಾರವು ಹೆಚ್ಚು ಲಾಭದಲ್ಲಿ ನಡೆಸಲು ಸಹಾಯ ಮಾಡುತ್ತದೆ. ಫೆಂಗ್ ಶುಯಿ ಪ್ರಕಾರ ಕಚೇರಿಯ ಉತ್ತರ ಭಾಗದಲ್ಲಿ ಇರಿಸಲಾದ ನಗದು ಪೆಟ್ಟಿಗೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
2-ಕಟ್ಟಡದ ಹೊರಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವನ್ನು ತಡೆಯಲು ಫೆಂಗ್ ಶುಯಿಯಲ್ಲಿ ಬಗ್ವಾ ಕನ್ನಡಿಯನ್ನು ಇಡಬೇಕೆಂದು ಹೇಳಲಾಗಿದೆ. ಅದನ್ನು ಕಟ್ಟಡದ ಹೊರಭಾಗದಲ್ಲಿ ಹಾಕಬಹುದು.
Tap to resize

3-ದಕ್ಷಿಣ ದಿಕ್ಕನ್ನು ಫೆಂಗ್ಶುಯಿಯಲ್ಲಿ ವ್ಯಾಪಾರದ ಬೆಳವಣಿಗೆ ಮತ್ತು ಪ್ರಗತಿಯ ದೃಷ್ಟಿಯಿಂದ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ, ಕೆಂಪು ಬಣ್ಣದ ಪೌರಾಣಿಕ ಪಕ್ಷಿ ಫೀನಿಕ್ಸ್ ನ ಮೂರ್ತಿಯನ್ನು ಇಟ್ಟರೆ, ವ್ಯಾಪಾರದ ಘನತೆಯನ್ನು ಹೆಚ್ಚಿಸಲು ಇದು ಪ್ರಯೋಜನಕಾರಿಯಾಗಲಿದೆ ಎನ್ನಲಾಗಿದೆ.
4-ಕಟ್ಟಡದ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಸಂಸ್ಥೆ ಅಥವಾ ಕಂಪನಿಯ ಹೆಸರನ್ನು ಕ್ರೀಮ್ ಅಥವಾ ಬೆಳ್ಳಿಯ ಬಣ್ಣದ ಬೋರ್ಡ್ ಮೇಲೆ ಬರೆಯಬಹುದು.
5-ಫೆಂಗ್ಶುಯಿ ಪ್ರಕಾರ, ಕಟ್ಟಡದ ಮುಖ್ಯ ದ್ವಾರದಲ್ಲಿ ಯಾವುದೇ ತಡೆಗೋಡೆ ಇರಬಾರದು. ಈ ಅಡೆತಡೆಯು ವ್ಯವಹಾರದಲ್ಲಿ ಅಡಚಣೆಗೆ ಕಾರಣವಾಗುತ್ತದೆ.
6-ಮುಖ್ಯ ದ್ವಾರದ ಮುಂದೆ ಸುಮಾರು ಎರಡೂವರೆ ಅಡಿ ಎತ್ತರದಲ್ಲಿ ಲಾಫಿಂಗ್ ಬುದ್ಧನನ್ನು ಇರಿಸಿಕೊಳ್ಳುವುದರಿಂದ ವ್ಯಾಪಾರದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯಲು ಸಹಾಯವಾಗುತ್ತದೆ.
7-ವ್ಯವಹಾರದ ಮಾಲೀಕನ ಆಸನ ವ್ಯವಸ್ಥೆಯು ಪಶ್ಚಿಮ ದಿಕ್ಕು ಅಥವಾ ನೈಋತ್ಯ ದಿಕ್ಕಿನಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅದೇ ಸಮಯದಲ್ಲಿ, ಮಾಲೀಕರ ಕುರ್ಚಿಯು ಇತರ ಕುರ್ಚಿಗಳಿಗಿಂತ ಎತ್ತರದಲ್ಲಿರಬೇಕು ಮತ್ತು ಕುಳಿತುಕೊಳ್ಳುವಾಗ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು.
ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು-1- ಕಚೇರಿ ಅಥವಾ ವಾಣಿಜ್ಯ ಕಟ್ಟಡದಲ್ಲಿ ನಡೆಯದೆ ಇರುವ ಅಥವಾ ಹಾನಿಯಾದ ಗಡಿಯಾರವನ್ನು ಇಡಬೇಡಿ. ಅಲ್ಲದೆ ತುಂಬಾ ಜೋರಾಗಿ ಶಬ್ದ ಮಾಡುವ ಗಡಿಯಾರವನ್ನು ಇಟ್ಟುಕೊಳ್ಳುವುದನ್ನು ತಪ್ಪಿಸಿ. ಪೂರ್ವ ಮತ್ತು ಉತ್ತರ ದಿಕ್ಕನ್ನು ಗಡಿಯಾರಕ್ಕೆ ಶುಭವೆಂದು ಪರಿಗಣಿಸಲಾಗಿದೆ.
2-ವ್ಯಾಪಾರದ ಮಾಲೀಕ ಅಥವಾ ಮುಖ್ಯ ಸ್ಥಾನಗಳನ್ನು ಹೊಂದಿರುವ ಜನರು ಕುಳಿತುಕೊಳ್ಳುವಾಗ ಹಿಂಬದಿಯ ಒಂದು ದೊಡ್ಡ ಕಿಟಕಿಯಿರುವ ಹಾಗೆ ಇರಕೂಡದು. ಇದರಿಂದ ಮಾನಸಿಕ ವಾಗಿ ಅಭದ್ರತೆಯ ಭಾವನೆ ಉಂಟಾಗುತ್ತದೆ.

Latest Videos

click me!