ಒಣಗಿದ ಹೂವಿನಿಂದ, ತೊಟ್ಟಿಕ್ಕುವ ನಲ್ಲಿಯವರೆಗೆ: ಕೂಡಲೇ ವಾಸ್ತು ದೋಷ ನಿವಾರಿಸಿ

First Published | Oct 24, 2021, 4:18 PM IST

ಕೆಲವೊಮ್ಮೆ ಮನೆಯಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ, ಆದರೆ ವಿರಸವಿರುತ್ತದೆ. ಪರಸ್ಪರ ಪ್ರೀತಿ ಉಳಿಯುವುದಿಲ್ಲ. ಕೆಲವೊಮ್ಮೆ ಪ್ರಗತಿ (progress) ನಿಲ್ಲುತ್ತದೆ. ಹಣ ಬರುತ್ತದೆ ಆದರೆ ಬದುಕಲು ಸಾಧ್ಯವಿಲ್ಲ. ರೋಗಗಳು ಮತ್ತು ದುಃಖಗಳು ಇತ್ಯಾದಿಗಳು ಸುತ್ತುವರೆದಿರುತ್ತವೆ. ಇದಕ್ಕೆ ಮನೆಯ ವಾಸ್ತು ಸರಿಯಾಗಿ ಇರದೇ ಇರುವುದು ಕಾರಣ ಇರಬಹುದು.

ಹೌದು ಮನೆಯ ಹಲವು ಸಮಸ್ಯೆಗಳಿಗೆ ವಾಸ್ತು ದೋಷ (vastu dosha) ಕಾರಣ ಇರಬಹುದು. ಅದಕ್ಕಾಗಿಯೇ ಇಲ್ಲಿ ಮನೆಗೆ ಸಂಬಂಧಿಸಿದ ವಾಸ್ತುವಿನ 15 ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಅನುಸರಿಸಬೇಕು. ಇದರಿಂದ ಮನೆಯಲ್ಲಿ ನೆಮ್ಮದಿ , ಅಭಿವೃದ್ಧಿ ಸಾಧ್ಯ. 

ಮನೆಯ ಮುಖ್ಯ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿಡಿ. ಅಲ್ಲದೆ ಮನೆಯಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಬೇಕು. ಮನೆಯಲ್ಲಿ ದೇವಾಲಯ ಸ್ಥಾಪನೆಯಾದರೆ ಅಲ್ಲಿ ಧೂಪ ಇತ್ಯಾದಿ ನೀಡಿ. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.
 

Tap to resize

ಅಡುಗೆ ಮನೆಯನ್ನು (kitchen)  ಸ್ವಚ್ಛವಾಗಿಡಿ. ಯಾವಾಗಲೂ ಗೋಮಾತೆಗೆ ಮೊದಲ ರೊಟ್ಟಿ, ಚಪಾತಿ ನೀಡಿ. ವಾರಕ್ಕೊಮ್ಮೆ  ಮನೆ ಪೂರ್ತಿಯಾಗಿ ಧೂಪ ಹಾಕಿಸಿ, ಇದರಿಂದ ನೆಗೆಟಿವ್ ಎನರ್ಜಿ (negative enargy) ದೂರವಾಗುತ್ತೆ.

ಅಲಂಕಾರಕ್ಕಾಗಿ ಇಟ್ಟ ಹೂವು ಯಾವಾಗಲೂ ಫ್ರೆಶ್ ಆಗಿರಬೇಕು.  ಒಣಗಿದ ಹೂವುಗಳನ್ನು (dry flower) ಮನೆಯಲ್ಲಿ ಇಡಬಾರದು. ಒಂದೇ ಸಾಲಿನಲ್ಲಿ ಮನೆಗೆ ಎಂದಿಗೂ 3 ಬಾಗಿಲುಗಳು (doors) ಇರಬಾರದು. ಇದರಿಂದ ಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

ಮನೆಯ ಆಗ್ನೇಯ ಮೂಲೆಯಲ್ಲಿ ಹಸಿರು (greenery) ತುಂಬಿದ ಚಿತ್ರವನ್ನು ಇಡಬೇಕು.ಪ್ರಕೃತಿ, ಜಲಪಾತ ಯಾವುದೇ ಚಿತ್ರಗಳನ್ನು ಇಡಬಹುದು. ಮುರಿದ ವಸ್ತುಗಳು, ಬೇಡವಾದ  ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ.

ಮನೆಯಲ್ಲಿ ದುಂಡಗಿನ ಅಂಚುಗಳ ಪೀಠೋಪಕರಣಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ನಲ್ಲಿಗಳು ತೊಟ್ಟಿಕ್ಕಬಾರದು. ನೀರಿನ ಟಪ್ ಟಪ್ ಶಬ್ಡ ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತದೆ. ತುಳಸಿ ಗಿಡವು ಪೂರ್ವ ದಿಕ್ಕಿನಲ್ಲಿ ಅಥವಾ ಪೂಜಾ ಸ್ಥಳದ ಸಮೀಪದಲ್ಲಿರಬೇಕು.

ಮನೆಯಲ್ಲಿ ಯಾವತ್ತೂ ಕಪ್ಪು ನೇಮ್ ಪ್ಲೇಟ್ ಗಳನ್ನು (name plate) ಸ್ಥಾಪಿಸಬಾರದು.
ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೀರಿನ ಒಳಚರಂಡಿ ಆರ್ಥಿಕವಾಗಿ ಶುಭಕರವಾಗಿದೆ.
ಯಾವಾಗಲೂ ಬಾತ್ ರೂಮ್ ಅನ್ನು ಸ್ವಚ್ಛವಾಗಿಡಿ. ನೀರನ್ನು ವ್ಯರ್ಥ ಮಾಡಬೇಡಿ. ಇಲ್ಲಿಂದ ದುರ್ವಾಸನೆ ಬೀರಬಾರದು.

Latest Videos

click me!