ಕನಸಿನ ವಿಜ್ಞಾನದ ಪ್ರಕಾರ, ಪ್ರತಿಯೊಂದು ಕನಸಿಗೂ ಕೆಲವು ಅರ್ಥವಿದೆ. ಇದರಲ್ಲಿ, ಪ್ರತಿಯೊಂದು ಕನಸುಗಳನ್ನು(Dreams) ವಿವರವಾಗಿ ವಿವರಿಸಲಾಗಿದೆ. ಕೆಲವು ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಕೆಲವು ಜನರು ಆಗಾಗ್ಗೆ ಕೆಲವು ಪ್ರಾಣಿ ಅಥವಾ ಪಕ್ಷಿಯ ಬಗ್ಗೆ ಕನಸು ಕಾಣುತ್ತಾರೆ. ಈ ಕನಸುಗಳಲ್ಲಿ ಕೆಲವು ಮಂಗಳಕರವೆಂದು ಪರಿಗಣಿಸಲಾಗುತ್ತೆ ಮತ್ತು ಕೆಲವು ಅಶುಭವಾಗಿವೆ. ಅಶುಭ ಸ್ವಪ್ನಗಳು ಅಹಿತಕರವಾದದ್ದನ್ನು ಸೂಚಿಸಿದರೆ, ಒಳ್ಳೆಯ ಕನಸುಗಳು ಕೆಲವು ಒಳ್ಳೆಯ ಸುದ್ದಿಯನ್ನು ತರುತ್ತವೆ. ಕನಸಿನಲ್ಲಿ ನೀವು ನವಿಲನ್ನು ನೋಡಿದ್ದರೆ, ನಿಮ್ಮ ಅದೃಷ್ಟವು ಶೀಘ್ರದಲ್ಲೇ ಹೊಳೆಯಲಿದೆ ಎಂದು ಅರ್ಥಮಾಡಿಕೊಳ್ಳಿ. ಕನಸಿನ ವಿಜ್ಞಾನ ಪ್ರಕಾರ, ಕನಸಿನಲ್ಲಿ ನವಿಲನ್ನು ನೋಡುವುದು ಎಂದರೇನು ಎಂದು ಇಲ್ಲಿ ತಿಳಿಯೋಣ.