Vastu
ವಾಸ್ತು ಪ್ರಕಾರ, ಕೆಟ್ಟದ್ದರ ಸಂಕೇತವಾಗಿರುವ ಯಾವುದೇ ಚಿತ್ರಗಳನ್ನು ಎಂದಿಗೂ ಮನೆಯಲ್ಲಿಡಬಾರದು. ಇಟ್ಟರೆ ಮನೆಯಲ್ಲಿ ನಾಶಕ್ಕೆ ಕಾರಣವಾಗಬಹುದು. ವಾಸ್ತು ಪ್ರಕಾರ ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ನೆಮ್ಮದಿ ಸಂತೋಷ ತುಂಬಲು ಸಾಧ್ಯವಾಗುತ್ತದೆ.
Vastu
ನಟರಾಜ
ನಟರಾಜನ ರೂಪವಿರುವ ಶಿವನ ವಿಗ್ರಹವನ್ನು (shiva statue) ಎಂದಿಗೂ ಮನೆಯಲ್ಲಿ ಇಡಬಾರದು. ಶಿವನು ತಾಂಡವ ಮಾಡಿದಾಗ ವಿನಾಶ ಉಂಟಾಗುತ್ತದೆ ಎಂದು ನಂಬಲಾಗಿದೆ. ಇದನ್ನು ಮನೆಯಲ್ಲಿ ಇಡುವುದು ಸಹ ವಿನಾಶದ ಸಂಕೇತ ಎಂದು ನಂಬಲಾಗಿದೆ. ಆದುದರಿಂದ ಸಾಧ್ಯವಾದಷ್ಟು ಇದನ್ನು ಅವಾಯ್ಡ್ ಮಾಡಿ.
Vastu
ಕೆಟ್ಟ ಗಡಿಯಾರ
ನೀವು ಎಂದಿಗೂ ಮನೆಯಲ್ಲಿ ಕೆಟ್ಟ ಅಥವಾ ಸ್ಥಗಿತಗೊಂಡ ಗಡಿಯಾರವನ್ನು (clock) ಇಟ್ಟುಕೊಳ್ಳಬಾರದು. ಇದು ಮನೆಗೆ ನಕಾರಾತ್ಮಕತೆ ತರುತ್ತದೆ. ಗಡಿಯಾರವು ಜೀವನ ಮುಂದೆ ಹೋಗುತ್ತಿರುವ ಸಂಕೇತವಾಗಿದೆ. ಆದುದರಿಂದ ನಿಂತು ಹೋದ ಗಡಿಯಾರ ಮನೆಯಲ್ಲಿ ಇಡಬೇಡಿ. ಇದರಿಂದ ನಿಮ್ಮ ಜೀವನವು ನಿಲ್ಲುತ್ತದೆ.
Vastu
ಮುಳ್ಳಿನ ಸಸ್ಯ
ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಇಟ್ಟುಕೊಳ್ಳುವುದು ಪ್ರಗತಿಗೆ ಅಡ್ಡಿಯಾಗುತ್ತದೆ. ಕ್ಯಾಕ್ಟಸ್ (cactus) ಸೇರಿ ಯಾವುದೇ ರೀತಿಯ ಮುಳ್ಳಿನ ಸಸ್ಯಗಳನ್ನು ಮನೆಯಲ್ಲಿ ಇಡದಿರಿ, ಇದು ನಕಾರಾತ್ಮಕ ಪರಿಣಾಮ ಬೀರುವ ಸಂಕೇತವಾಗಿದೆ. ಇದರಿಂದ ಜೀವನದಲ್ಲಿ ಕಷ್ಟ ಸಂಭವಿಸುತ್ತದೆ.
Vastu
ಜೇಡರ ಬಲೆ
ನೀವು ಮನೆಯಲ್ಲಿ ಜೇಡರ ಬಲೆಗಳನ್ನು ನೋಡಿದರೆ, ಅವುಗಳನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು. ಏಕೆಂದರೆ ಅವು ನಕಾರಾತ್ಮಕತೆಯನ್ನು ತರುತ್ತವೆ. ಮನೆಯಲ್ಲಿ ಜೇಡರ ಬಲೆ (spider web)ಇದ್ದರೆ ಲಕ್ಷ್ಮಿ ದೇವಿ ಮನೆಗೆ ಆಗಮಿಸುವುದಿಲ್ಲ. ಆದುದರಿಂದ ಜೇಡರ ಬಲೆಯನ್ನು ಕೂಡಲೇ ಕ್ಲೀನ್ ಮಾಡುವುದು ಉತ್ತಮ.
Vastu
ಮುರಿದ ಪೀಠೋಪಕರಣಗಳು
ಮನೆಯಲ್ಲಿ ಇರುವ ಮುರಿದ ಪೀಠೋಪಕರಣಗಳು (furniture) ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತವೆ. ಆದುದರಿಂದ ಮನೆಯಲ್ಲಿ ಮುರಿದ ಪೀಠೋಪಕರಣಗಳು ಇದ್ದರೆ ಕೂಡಲೇ ಅದನ್ನು ಸ್ಥಳಾಂತರಿಸಿ, ಇಲ್ಲವೇ ಗುಜರಿಗೆ ಹಾಕಿ. ಖಂಡಿತವಾಗಿ ಅದನ್ನು ಮನೆಯಿಂದ ಹೊರ ಹಾಕಿ.
Vastu
ಮುಳುಗುವ ಸೂರ್ಯ
ನೀವು ಎಂದಿಗೂ ಮನೆಯಲ್ಲಿ ಮುಳುಗುವ ಸೂರ್ಯನ (sun set) ಚಿತ್ರವನ್ನು ಇಡಬಾರದು. ಇದು ನಕಾರಾತ್ಮಕತೆ ತರುತ್ತದೆ. ಮುಳುಗುವ ಸೂರ್ಯ ಎಂದರೆ ಕೊನೆಯಾಗುವ ಸಂಕೇತವಾಗಿದೆ. ಆದುದರಿಂದ ಯಾವತ್ತೂ ಮುಳುಗುವ ಸೂರ್ಯನ ಚಿತ್ರವನ್ನು ಖಂಡಿತವಾಗಿ ಇಡಬೇಡಿ.