ಈ ದಿಕ್ಕಿಗೆ ಮುಖ ಮಾಡಿ ಊಟ ಮಾಡಿದ್ರೆ ಬಡತನ ಖಚಿತ!

First Published | Jan 19, 2023, 12:52 PM IST

ವಾಸ್ತು ಶಾಸ್ತ್ರವು ಮನೆಯಲ್ಲಿ ನಡೆಯುವ ಎಲ್ಲಾ ಕೆಲಸಗಳ ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಳುವ ವಿಜ್ಞಾನ. ಮನೆ ನಿರ್ಮಾಣದಿಂದ ಹಿಡಿದು, ನಾವು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು ಮತ್ತು ಯಾವ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಬಾರದು ಎಂಬ ಮಾಹಿತಿಯನ್ನು ಸಹ ವಾಸ್ತು ಶಾಸ್ತ್ರದಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ. 

ವಾಸ್ತು ಶಾಸ್ತ್ರದಲ್ಲಿ (Vastu shashtra), ಪ್ರಕೃತಿಯ ನಿಯಮಗಳು ಮತ್ತು ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದೆ. ತಿನ್ನುವ ಸಮಯದಲ್ಲಿ, ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ತಪ್ಪು ಅಥವಾ ಅಜ್ಞಾನದಿಂದಾಗಿ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ಕೆಲವು ತಪ್ಪುಗಳು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆ ಸಮಯದಲ್ಲಿ ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ನೋಡೋಣ-

ಆಹಾರವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ತಿನ್ನಬಾರದು.

ಊಟದ ಸಮಯದಲ್ಲಿ ದಿಕ್ಕಿನ (Direction) ಬಗ್ಗೆ ಕಾಳಜಿ ವಹಿಸಿ, ಇಲ್ಲದಿದ್ದರೆ ಅದು ಆರೋಗ್ಯವನ್ನು (Health) ಹಾಳು ಮಾಡುತ್ತೆ. ವಾಸ್ತು ನಿಯಮಗಳ ಪ್ರಕಾರ, ಆಹಾರವನ್ನು ದಕ್ಷಿಣ ದಿಕ್ಕಿಗೆ (South direction) ಮುಖ ಮಾಡಿ ತಿನ್ನಬಾರದು ಎಂದು ಹೇಳಲಾಗುತ್ತೆ. ಅದು ಯಾಕೆ ಅನ್ನೋದನ್ನು ನೋಡೋಣ.. 

Tap to resize

ದಕ್ಷಿಣ ದಿಕ್ಕನ್ನು ಯಮನ ದಿಕ್ಕು (direction of Yama) ಎಂದು ಪರಿಗಣಿಸಲಾಗುತ್ತೆ. ಈ ದಿಕ್ಕಿನಲ್ಲಿ ಆಹಾರ ಸೇವಿಸೋದರಿಂದ ಜೀವಿತಾವಧಿ ಕಡಿಮೆಯಾಗುತ್ತೆ. ಆದ್ದರಿಂದ, ದಕ್ಷಿಣ ದಿಕ್ಕಿಗೆ ಮುಖವನ್ನು ಮಾಡಿ ಆಹಾರ ತಿನ್ನೋದರಿಂದ ಗಂಭೀರ ಕಾಯಿಲೆಗಳು ಸುತ್ತುವರೆಯಬಹುದು, ಹಾಗಾಗಿ ಎಚ್ಚರವಹಿಸಿ.

ಹಾಸಿಗೆಯಲ್ಲಿ ಕುಳಿತು ತಿನ್ನಬೇಡಿ (Do not eat on bed)

ನೀವು ಎಂದಿಗೂ ಹಾಸಿಗೆಯಲ್ಲಿ ಕುಳಿತು ತಿನ್ನಬಾರದು. ಇದು ಮನೆಯಲ್ಲಿ ಆರ್ಥಿಕತೆಯ ಕೊರತೆಗೆ ಕಾರಣವಾಗುತ್ತೆ. ವ್ಯಕ್ತಿಯ ಮೇಲಿನ ಖರ್ಚು ಮತ್ತು ಸಾಲ ಹೆಚ್ಚಾಗುತ್ತೆ. ಹಾಗಾಗೇ ಹಾಸಿಗೆ ಮೇಲೆ ಕೂತು ತಿನ್ನಬೇಡಿ. 

ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಿ

ವಸಿಷ್ಠ ಸ್ಮೃತಿಯಲ್ಲಿ ಪ್ರದ್ಮುಖೋದದ್ಮುಖೋ ವಾಪಿ ತಥಾ ಪ್ರದ್ಮುಖನ್ನಾನಿ ಭುಂಜಿತ್ ಎಂದು ಹೇಳಲಾಗಿದೆ - ಇದರರ್ಥ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸೋದು ತುಂಬಾ ಒಳ್ಳೆಯದು ಎಂದು.

ಉತ್ತರ ಮತ್ತು ಪೂರ್ವ ಈ ಎರಡೂ ದಿಕ್ಕುಗಳನ್ನು ದೇವರ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ದಿಕ್ಕಿಗೆ ಎದುರಾಗಿ ಆಹಾರ ಸೇವಿಸುವ ಮೂಲಕ, ಲಕ್ಷ್ಮಿ ದೇವಿ ಮನೆಯಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ವ್ಯಕ್ತಿಯ ಒತ್ತಡ ನಿವಾರಣೆಯಾಗಲಿದೆ (stress control). ಪೂರ್ವ ದಿಕ್ಕಿನಲ್ಲಿ ಆಹಾರ ಸೇವಿಸೋದರಿಂದ ಜೀರ್ಣಕಾರಿ ಶಕ್ತಿ ಉತ್ತಮವಾಗಿರಲಿದೆ. ರೋಗಗಳಿಂದ ಮುಕ್ತಿ ಪಡೆಯುತ್ತೀರಿ.

ಆಹಾರವನ್ನು ತಟ್ಟೆಯಲ್ಲಿ ಎಂದಿಗೂ ಬಿಡಬೇಡಿ (do not waste food)

ನಿಮಗೆ ಸಾಧ್ಯವಾದಷ್ಟು ಆಹಾರವನ್ನು ತಟ್ಟೆಯಲ್ಲಿ ತೆಗೆದುಕೊಂಡು ತಿನ್ನಬೇಕು. ಆಹಾರವನ್ನು ಸುಮ್ಮನೆ ತಟ್ಟೆಯಲ್ಲಿ ಬಿಟ್ಟಾಗ ಆಹಾರವನ್ನು ಅವಮಾನಿಸಿದಂತಾಗುತ್ತೆ. ಇದು ಹಣ ಮತ್ತು ಆಹಾರದ ಕೊರತೆಗೆ ಕಾರಣವಾಗುತ್ತೆ. ಹಾಗಾಗಿ ಆಹಾರವನ್ನು ಎಂದಿಗೂ ತಟ್ಟೆಯಲ್ಲಿ ಬಿಡಬಾರದು.  

ಮಣ್ಣಿನ ಮಡಕೆ ಬಳಸಿ

ಧರ್ಮಗ್ರಂಥಗಳಲ್ಲಿ ಮಣ್ಣಿನ ಮಡಕೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡೋದು ಮತ್ತು ತಿನ್ನೋದು ಶೇಕಡಾ 100 ರಷ್ಟು ಪೋಷಕಾಂಶಗಳನ್ನು ಒದಗಿಸುತ್ತೆ. ಅದೃಷ್ಟವು ಆರೋಗ್ಯದೊಂದಿಗೆ ಬರುತ್ತೆ ಎಂದು ಸಹ ಹೇಳಲಾಗುತ್ತೆ.

Latest Videos

click me!