ರೋಗಿಗಳ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲು ಮರೆಯದಿರಿ: ಕೆಲವೊಮ್ಮೆ ರೋಗಕ್ಕೆ ಕಾರಣ ನಮ್ಮ ನಡತೆ. ವಾಸ್ತುಶಾಸ್ತ್ರದಲ್ಲಿ ಇದರ ಬಗ್ಗೆ ಮತ್ತು ಶಾಸ್ತ್ರಗಳ ಮೂಲಕ ತಿಳಿದು
ಬರುತ್ತದೆ. ಅಷ್ಟೇ ಅಲ್ಲ, ಯಾವ ಅಭ್ಯಾಸಗಳು ರೋಗಕ್ಕೆ (health problem)ಕಾರಣವಾಗಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ. ತಿಳಿಯಿರಿ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ಅಥವಾ ವಾಯುವ್ಯ ದಿಕ್ಕಿನಲ್ಲಿ ಕಾಲು ಹಾಕಿ ಮಲಗುತ್ತಿದ್ದರೆ, ಅಥವಾ ಮನೆಯಲ್ಲಿ ಸೋರುವ ನೀರಿನ ಮೂಲವನ್ನು (water source) ಇಟ್ಟಿದ್ದರೆ, ಅದನ್ನು ಕೂಡಲೇ ತಪ್ಪಿಸಿ, ಈ ಪರಿಸ್ಥಿತಿಗಳು ಒಂದೇ ಸಮಯದಲ್ಲಿ ಅನೇಕ ರೋಗಗಳನ್ನು ತರುತ್ತವೆ ಎಂದು ಗುರುತಿಸಲಾಗಿದೆ. ಆದುದರಿಂದ ಇಂತಹ ಅಭ್ಯಾಸಗಳನ್ನು ತಪ್ಪಿಸಿ.
ಈ ಅಭ್ಯಾಸವು ಭಯಾನಕ ತಲೆ ನೋವಿಗೆ ಕಾರಣವಾಗುತ್ತದೆ: ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಕಸದ ರಾಶಿ ಇದ್ದರೆ ಅಥವಾ ನೀವು ಬಳಸದ ಗೃಹೋಪಯೋಗಿ ವಸ್ತುಗಳನ್ನು ಇಟ್ಟುಕೊಂಡರೆ, ಅವುಗಳನ್ನು ತಕ್ಷಣವೇ ಸರಿಪಡಿಸಿ. ಇಲ್ಲವಾದರೆ ತೀವ್ರ ನೋವಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಈ ಅಭ್ಯಾಸದಿಂದ ಬಿಪಿ ಹೆಚ್ಚುತ್ತೆ : ವಾಸ್ತು ಶಾಸ್ತ್ರದ ಪ್ರಕಾರ ಅಗ್ನಿ ಕೋನದಲ್ಲಿ ಮಲಗುವ ಅಭ್ಯಾಸವಿದ್ದರೆ ತಕ್ಷಣ ಬದಲಾಯಿಸಿ. ಈ ಅಭ್ಯಾಸವು ಬಿಪಿ ಕಾಯಿಲೆಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಯಾವುದೇ ವ್ಯಕ್ತಿ ಹೀಗೆ ಮಾಡಿದರೆ ಬಿಪಿ (blood pressure) ಕಾಯಿಲೆಯಿಂದ ಬಳಲುತ್ತಾ ಇರಬಹುದು. ಅಲ್ಲಿ ಬೆಡ್ ರೂಮ್ ಇದ್ದರೆ ಕೂಡಲೇ, ಬದಲಾಯಿಸಿ ಬೇರೆ ಕಡೆ ಶಿಫ್ಟ್ ಮಾಡಿ.
ಈ ಅಭ್ಯಾಸ ಕೂಡಲೇ ಬದಲಾಯಿಸಿ : ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಆರೋಗ್ಯಕ್ಕೆ ಸಂಬಂಧಿಸಿದ ಅಥವಾ ಮಕ್ಕಳಾಗದಿರುವ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವನು ಮನೆಯ ಮಧ್ಯದಲ್ಲಿ ಮಲಗಲು (sleep)ತಯಾರಿ ಮಾಡಬೇಕು. ಹಾಗೆ ಮಾಡುವವರ ಮಕ್ಕಳ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.