ಚೆಂದದ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡೋದು ಅನಿವಾರ್ಯ

First Published | Jan 19, 2023, 5:39 PM IST

ವಾಸ್ತು ಶಾಸ್ತ್ರವು ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಿರುವ ಭಾರತೀಯ ಕಲೆ. ವಾಸ್ತು ಶಾಸ್ತ್ರವು ದಿಕ್ಕು ಮತ್ತು ಅದರ ಶಕ್ತಿಗಳಿಗೆ ಸಂಬಂಧಿಸಿದೆ. ಇದರ ಸಹಾಯದಿಂದ, ವಾತಾವರಣದಲ್ಲಿರುವ ಅಂಶಗಳು ನೀರು, ಬೆಂಕಿ, ಗಾಳಿಯ ನಡುವೆ ಸಾಮರಸ್ಯವನ್ನು ಸ್ಥಾಪಿಸಲಾಗುತ್ತೆ. ಮನೆಯ ಸರಿಯಾದ ವಾಸ್ತುಶಿಲ್ಪವು ಕುಟುಂಬ ಜೀವನದಲ್ಲಿ ಮತ್ತು ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯ ತರುವ ಕೆಲಸ ಮಾಡುತ್ತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ. 

ಮನೆಯಲ್ಲಿ ಸರಿಯಾದ ವಾಸ್ತುವಿನ ಕೊರತೆಯಿಂದಾಗಿ ನಕಾರಾತ್ಮಕ ಶಕ್ತಿ(Negative energy) ಉತ್ಪತ್ತಿಯಾಗುತ್ತೆ. ಇದರಿಂದಾಗಿ ಜನರು ಮಾನಸಿಕ ಒತ್ತಡ (Mental Stress) ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಮನೆಗಾಗಿ ಕೆಲವು ವಿಶೇಷ ವಾಸ್ತು ಸಲಹೆಗಳನ್ನು ತಿಳಿದುಕೊಳ್ಳೋಣ, ಅದರ ಸಹಾಯದಿಂದ  ಸುತ್ತಲಿನ ಪರಿಸರವನ್ನು ಧನಾತ್ಮಕವಾಗಿಸಬಹುದು ಮತ್ತು ಇದರ ಸಹಾಯದಿಂದ ವೈವಾಹಿಕ ಜೀವನದಲ್ಲಿನ ಘರ್ಷಣೆ ಮತ್ತು ಜಗಳಗಳನ್ನು ನಿವಾರಿಸಬಹುದು.

ವೈವಾಹಿಕ ಜೀವನವನ್ನು ಸಂತೋಷವಾಗಿಡಲು, ನೀಲಿ ಮತ್ತು ನೇರಳೆ ಬಣ್ಣವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಬಳಸಬೇಕು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಸಿಹಿಯಾಗಿಡಲು, ನೈಋತ್ಯ ದಿಕ್ಕಿನಲ್ಲಿ ಮಲಗುವ ಕೋಣೆಯನ್ನು(Bed room) ಮಾಡಿ. 

Tap to resize

ಮಲಗುವ ಕೋಣೆಯ ಗೋಡೆಗಳ ಮೇಲೆ ತಿಳಿ ಮತ್ತು ನೀಲಿ ಬಣ್ಣದ ಶೇಡ್ ಇರುವ ಬಣ್ಣಗಳನ್ನು ಬಳಸಿ. ಇದು ಯಾವಾಗಲೂ ಮಾನಸಿಕ ನೆಮ್ಮದಿ ನೀಡಲು ಸಹಾಯ ಮಾಡುತ್ತೆ.
ಕಬ್ಬಿಣ(Iron) ಅಥವಾ ಇತರ ಯಾವುದೇ ಲೋಹದಿಂದ ಮಾಡಿದ ಹಾಸಿಗೆಯ ಮೇಲೆ ಮಲಗಬೇಡಿ. ಇದು ನೆಗೆಟಿವಿಯನ್ನು ನೀಡುತ್ತೆ.

ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಿ. ಅಡುಗೆಮನೆಯ ಗೋಡೆಗಳ ಮೇಲೆ ಕಿತ್ತಳೆ ಬಣ್ಣ ಬಳಸಿ.
ಲವ್ ಲೈಫ್ ನಲ್ಲಿ(Love life) ಮಾಧುರ್ಯ ಕಾಪಾಡಿಕೊಳ್ಳಲು, ಕೋಣೆಯ ಅಲಂಕಾರದಲ್ಲಿ ಬಳಸಿದ ವಸ್ತುಗಳನ್ನು ಜೋಡಿಯಾಗಿ ಇರಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಹಾಗೆ ಮಾಡೋದರಿಂದ ದಂಪತಿಗಳ ನಡುವಿನ ಪ್ರೀತಿ ಹೆಚ್ಚಾಗುತ್ತೆ.

ದಂಪತಿ ತಮ್ಮ ಫೋಟೋವನ್ನು(Couple photo) ಮಲಗುವ ಕೋಣೆಯ ಪಶ್ಚಿಮ ದಿಕ್ಕಿನಲ್ಲಿ ಇಡಬಹುದು. ನೀಲಿ ಬಣ್ಣದ ಹೂವಿನ ವಿನ್ಯಾಸದ ಬೆಡ್ ಶೀಟ್ ಗಳನ್ನು ಮಲಗುವ ಕೋಣೆಯಲ್ಲಿ ಬಳಸಬೇಕು. ಇದು ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಿಸುತ್ತೆ.

ಹಾಸಿಗೆಯ ಮುಂದೆ ಕನ್ನಡಿಗಳನ್ನು(Mirror) ಇಡಬೇಡಿ. ಕೋಣೆಯಲ್ಲಿರುವ ದೊಡ್ಡ ಕನ್ನಡಿ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತೆ.
ಮನೆಯ ಮಧ್ಯಭಾಗವು ತೆರೆದಿರಬೇಕು ಮತ್ತು ಗಾಳಿಯಾಡುವಂತೆ ಇರಬೇಕು. ಇದು ಸಂಬಂಧಗಳ ನಡುವೆ ಪರಸ್ಪರ ಸಂವಹನವನ್ನು ಉತ್ತೇಜಿಸುತ್ತೆ.

ಮನೆಯ ಈಶಾನ್ಯ ದಿಕ್ಕಿನಲ್ಲಿ ಪೂಜಾ ಮನೆಯನ್ನು(Pooja room) ನಿರ್ಮಿಸಬೇಕು.
ಮನೆಯ ಈಶಾನ್ಯ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. 
ನೀವು ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಮುಂದೆ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಉಂಟಾಗೋದಿಲ್ಲ. ಬೇಕಾದ್ರೆ ಟ್ರೈ ಮಾಡಿ ನೋಡಿ.
 

Latest Videos

click me!