ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ಜೆಡಿಎಸ್ ಮುಖಂಡೆ ಪುತ್ರ ಚಿರಾಗ್ ಕೋಠಾರಕರ್ ಅರೆಸ್ಟ್

Published : Jan 29, 2026, 09:10 PM IST

ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ರಿಶೆಲ್ ಸಾವಿಗೆ ಕಾರಣವಾಗಿದ್ದ ಆರೋಪಿ ಚಿರಾಗ್ ಕೋಠಾರಕರ್‌ನನ್ನು ಪೊಲೀಸರು 20 ದಿನಗಳ ಹುಡುಕಾಟದ ಬಳಿಕ ಅರೆಸ್ಟ್ ಮಾಡಿದ್ದಾರೆ.

PREV
16
ಆರೋಪಿ ಚಿರಾಗ್ ಅರೆಸ್ಟ್

ಕದ್ರಾದ ಕೆಪಿಸಿ ಕಾಲೋನಿಯ ವಿದ್ಯಾರ್ಥಿನಿ ರಿಶೆಲ್ ಡಿಸೋಜಾ ಆತ್ಮ***ತ್ಯೆ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಪುತ್ರ ಚಿರಾಗ್ ಕೋಠಾರಕರ್ ಕಿರುಕುಳಕ್ಕೆ ಬೇಸತ್ತೆ ತಮ್ಮ ಮಗಳು ದುರಂತ ಅಂತ್ಯಕಂಡಿದ್ದಾಳೆ ಎಂದು ರಿಶೆಲ್ ತಾಯಿ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದರು. ಪೊಲೀಸರ ನಿರ್ಲಕ್ಷ್ಯದ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌ಗೂ ಮನವಿ ಪತ್ರ ಸಲ್ಲಿಕೆ ಮಾಡಲಾಗಿತ್ತು. ಘಟನೆ ಗಂಭೀರತೆ ಪಡೆಯುತ್ತಿದ್ದಂತೆ ಚುರುಕಾದ ಪೊಲೀಸರು 20 ದಿನಗ ಬಳಿಕ ಆರೋಪಿ ಚಿರಾಗ್ ಕೋಠಾರಕರ್ ಅರೆಸ್ಟ್ ಮಾಡಿದ್ದಾರೆ.

26
ಚೆನ್ನೈನಲ್ಲಿ ಚಿರಾಗ್ ಬಂಧಿಸಿದ ಪೊಲೀಸ್

ರಿಶೆಲ್ ಡಿಸೋಜಾ ದುರಂತ ಅಂತ್ಯಕಾಣುತ್ತಿದ್ದಂತೆ ಇತ್ತ ಚಿರಾಗ್ ಕೋಠಾರಕರ್ ನಾಪತ್ತೆಯಾಗಿದ್ದ. ಕಳೆದ 20 ದಿನಗಳಿಂದ ಪೊಲೀಸರು ಚಿರಾಗ್ ಹುಡುಕಾಟ ಆರಂಭಿಸಿದ್ದರು. ಇತ್ತ ಚಿರಾಕ್ ಉತ್ತರ ಕನ್ನಡದಿಂದ ಪರಾರಿಯಾಗಿ ಚೆನ್ನೈಗೆ ತೆರಳಿದ್ದ. ಚೆನ್ನೈನಲ್ಲಿ ಸಂಬಂಧಿಕರ ಜೊತೆ ತಂಗಿದ್ದ ಚಿರಾಗ್‌ನನ್ನು ಪೊಲೀಸರು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.

36
ಚೆನ್ನೈನಿಂದ ಕಾರವಾರಕ್ಕೆ ಚಿರಾಗ್

ಆರೋಪಿ ಚಿರಾಗ್ ಬಂಧಿಸುವಂತೆ ಕಾರವಾರದಲ್ಲಿ ಕ್ರಿಶ್ಚಿಯನ್ ಸಂಘಟನೆ ಪ್ರತಿಭಟನೆ ನಡೆಸಿತ್ತು. ಇತ್ತ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿ ಎ.ಎಸ್.ಪಿ ಕೃಷ್ಣಮೂರ್ತಿ ನೇತೃತ್ವದ ನಾಲ್ಕು ತಂಡಗಳು ಕಾರ್ಯಾಚರೆ ತೀವ್ರಗೊಳಿಸಿತ್ತು. ಚಿರಾಗ್ ಬಂಧಿಸಿದ ಪೊಲೀಸರು ಕಾರವಾರಕ್ಕೆ ಕರೆತರುತ್ತಿದ್ದಾರೆ.

46
ಪ್ರೀತಿ ಹೆಸರಲ್ಲಿ ಕಿರುಕುಳ ಆರೋಪ

ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್ ಕಿರುಕುಳಕ್ಕೆ ಬೇಸತ್ತ ತಮ್ಮ ಮಗಳು ಈ ನಿರ್ಧಾರ ಮಾಡಿದ್ದಾರೆ. ಗಗನಸಖಿ ಕೋರ್ಸ್ ಮುಗಿಸಿ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದ್ದ ಪುತ್ರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಾಯಿ ಆರೋಪಿಸಿದ್ದರು. ಪ್ರೀತಿಸುವಂತೆ ಪದೇ ಪದೇ ಪೀಡಿಸುತ್ತಿದ್ದ. ಈ ಕುರಿತು ರಿಶೆಲ್ ಹೇಳಿಕೊಂಡಿದ್ದರು. ಹೀಗಾಗಿ ಸಾಕಷ್ಟು ಬಾರಿ ಪುತ್ರಿಗೆ ಸಮಾಧಾನ ಹೇಳಿದ್ದೇವು ಎಂದು ರಿಶೆಲ್ ತಾಯಿ ಹೇಳಿದ್ದರು.

56
ಯುವತಿ ದೇಹದ ಮೇಲೆ ಗಾಯದ ಗುರುತು

ತಾಯಿ ನೀಡಿದ ದೂರು ಹಾಗೂ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ, ಮಗಳ ದೇಹದ ಮೇಲೆ ಗಾಯದ ಗುರುತುಗಳಿವೆ. ಹೀಗಾಗಿ ಸಂಪೂರ್ಣ ತನಿಖೆ ನಡೆಯಬೇಕು. ಚಿರಾಗ್ ಹೇಯ ಕೃತ್ಯದಿಂದ ಮಾನಸಿಕವಾಗಿ ನೊಂದು ಮಗಳು ಈ ನಿರ್ಧಾರ ಮಾಡಿದ್ದಾಳೆ ಎಂದು ತಾಯಿ ಕಣ್ಣೀರಿಟ್ಟಿದ್ದರು.

66
ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

ಆರೋಪಿ ಚಿರಾಗ್ ತಾಯಿ ಜೆಡಿಎಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿದ್ದಾರೆ. ಹೀಗಾಗಿ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂದು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದರು.

Read more Photos on
click me!

Recommended Stories