ಪ್ರೀತಿಗೆ ಅಡ್ಡಿ ಆಯ್ತಾ ಪೌರೋಹಿತ್ಯ ವೃತ್ತಿ? ಪ್ರಾಣ ಕಳೆದುಕೊಂಡ 24ರ ಯುವಕ ಪವನ್ ಭಟ್

Published : Jan 07, 2026, 08:53 AM IST

ಅಂಕೋಲಾ ಪಟ್ಟಣದಲ್ಲಿ ಪೌರೋಹಿತ್ಯ ವೃತ್ತಿ ಮಾಡುತ್ತಿದ್ದ ಪವನ್ ಭಟ್ ಎಂಬ 24 ವರ್ಷದ ಯುವಕ ಪ್ರೇಮ ವೈಫಲ್ಯದಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಪ್ರೇಯಸಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
14
ಪ್ರೇಮ ವೈಫಲ್ಯ

ಅಂಕೋಲಾ ಪಟ್ಟಣದಲ್ಲಿ ಪೌರೋಹಿತ್ಯ ನಡೆಸಿಕೊಂಡಿದ್ದ ಯುವಕನೋರ್ವ ಪ್ರೇಮ ವೈಫಲ್ಯದ ಹಿನ್ನೆಲೆ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಅಸ್ಲಗದ್ದೆಯಲ್ಲಿ ನಡೆದಿದೆ. ಪವನ್ ಭಟ್ (24) ಆತ್ಮ*ಹತ್ಯೆ ಮಾಡಿಕೊಂಡವನು.

24
ಪೌರೋಹಿತ್ಯ ವೃತ್ತಿ

ಮೃತ ಪವನ್ ಭಟ್ ತಾಲೂಕಿನಲ್ಲಿ ಪೌರೋಹಿತ್ಯ ವೃತ್ತಿ ಮಾಡಿಕೊಂಡಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಮೃತ ಪವನ್ ಭಟ್ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದನು.

34
ಆತ್ಮ*ಹತ್ಯೆಗೆ ಕಾರಣ ಏನು?

ಯುವತಿಯೊಂದಿಗೆ ಮದುವೆ ಕುರಿತು ಕೇಳಿಕೊಂಡಾಗ ಪ್ರೇಯಸಿ ಅದಕ್ಕೆ ನಿರಾಕರಿಸಿದ ಕಾರಣದಿಂದ ಮನನೊಂದು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ. ಪೌರೋಹಿತ್ಯ ವೃತ್ತಿ ಮಾಡಿಕೊಂಡ ನಿನ್ನನ್ನು ಮದುವೆಯಾಗಲ್ಲ ಎಂದು ಯುವತಿ ಹೇಳಿದ್ಳು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಈ ಕಾರಣದಿಂದ ಆತ್ಮ*ಹತ್ಯೆಗೆ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ.

44
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಯ ಮಾಹಿತಿ ದೊರಕಿದ ತಕ್ಷಣ ಸ್ಥಳಕ್ಕೆ ಸಿಪಿಐ ಚಂದ್ರಶೇಖರ್ ಮಠಪತಿ ಹಾಗೂ ಪಿಎಸ್ಐ ಗುರುನಾಥ ಹಾದಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more Photos on
click me!

Recommended Stories