ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಷಣದಿಂದ ಒಂದಲ್ಲ ಒಂದು ವಿಷಯಕ್ಕಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಮೊದಲೇ ತಮ್ಮ ವಿಚಿತ್ರ ಅವತಾರಗಳಿಂದ ಫೇಮಸ್ ಆಗಿರುವ ಈ ನಟಿ,ಈಗ ಇನ್ನೊಂದು ವಿಷಯ ಬಹಿರಂಗ ಪಡಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ರಾಖಿ ಇತ್ತೀಚೆಗೆ ಇತರ ಸ್ಪರ್ಧಿಗಳ ಒಳ ಉಡುಪುಗಳನ್ನು ತೊಳೆಯುವ ತಮ್ಮ ಗೀಳನ್ನು ಬಹಿರಂಗ ಪಡಿಸಿದರು.
ಬಿಗ್ ಬಾಸ್ 14ರ ಕಳೆದ ರಾತ್ರಿಯ ಎಪಿಸೋಡ್‌ನಲ್ಲಿ ರಾಖಿ ಸಾವಂತ್ ಸೀಸನ್ 1ರಲ್ಲಿ ಇತರೆ ಸ್ಪರ್ಧಿಗಳ ಒಳ ಉಡುಪುಗಳನ್ನು ತೊಳೆಯುವ ತಮ್ಮ ಗೀಳಿನ ಬಗ್ಗೆ ಮಾತನಾಡಿ, ಎಲ್ಲರಿಗೂ ಶಾಕ್ ನೀಡಿದ್ದಾರೆ.
ಅಷ್ಟೇ ಅಲ್ಲ ರಾಹುಲ್ ಮಹಾಜನ್ ಅವರಬಾಡಿ ಶೇಮ್ ಸಹ ಮಾಡಿದ್ದಾರೆ.
ಬಿಗ್ ಬಾಸ್ ಮೊದಲ ಸೀಸನ್ ಸಮಯದಲ್ಲಿ ರಾಖಿ ಸಾವಂತ್ ಮನೆಯ ಯಾವ ಕೆಲಸಗಳನ್ನು ಮಾಡುತ್ತಿದ್ದರು ಎಂದು ರಾಹುಲ್ ವೈದ್ಯ ರಾಖಿಯನ್ನು ಕೇಳಿದಾಗ, 'ನಾನು ಎಂದಿಗೂ ಮನೆ ಕೆಲಸಗಳನ್ನು ಮಾಡುತ್ತಿರಲಿಲ್ಲ, ಬದಲಿಗೆ ಇತರ ಸ್ಪರ್ಧಿಗಳ ಒಳ ಉಡುಪುಗಳನ್ನು ವಾಶ್ ಮಾಡುತ್ತಿದ್ದೆ,' ಎಂದು ಹೇಳಿ ಕೊಂಡಿದ್ದಾರೆ.
ತಾನು ಇತರೆ ಸ್ಪರ್ಧಿಗಳ ಒಳ ಉಡುಪುಗಳನ್ನು ತೊಳೆಯುತ್ತಿದ್ದೆ ಮತ್ತು ಅಂತಹ obsession ಹೊಂದುವಲ್ಲಿ ತಪ್ಪೇನೂ ಇಲ್ಲ ಎಂದು ರಾಖಿ ಹೇಳಿದ್ದಾರೆ.
ಹಾಗೆ ಮಾಡುವುದರಿಂದ ಅವರಿಗೆ ತೃಪ್ತಿ ಸಿಕ್ಕಿದೆ ಎಂದು ರಾಖಿ ವ್ಯಕ್ತಪಡಿಸಿದರು.ಅವರ ಈ ಮಾತು ಕೇಳಿ ರಾಹುಲ್ ವೈದ್ಯ ಮತ್ತು ನಿಕ್ಕಿ ತಂಬೋಲಿ ಶಾಕ್ ಆದರು.
ರಾಹುಲ್ ಮಹಾಜನ್‌ರ ಗಡಿಗೆ ಹೊಟ್ಟೆಯ ಕಾರಣದಿಂದ ಅವರು ಅವನಿಗೆ ಆಕರ್ಷಿತರಾಗಿಲ್ಲ ಎಂದರು. ನಂತರ ಅವರನ್ನು ಅಭಿನವ್ ಶುಕ್ಲಾ ಅವರೊಂದಿಗೆ ಹೋಲಿಸಿ, ರಾಹುಲ್‌ಗೆ ಆಬ್ಸ್ ಇಲ್ಲ ಎಂದುಬಾಡಿ ಶೇಮ್ ಮಾಡಿದರು.