ಮದುವೆಯ ನಂತರ ಪತಿ ಜೊತೆ ಅಂಕಿತಾ ಲೋಖಂಡೆಯ ರೊಮ್ಯಾಂಟಿಕ್ ಹೋಳಿ!

First Published | Mar 17, 2022, 11:06 AM IST

ಟಿವಿ ಧಾರಾವಾಹಿ ಪವಿತ್ರಾ ರಿಶ್ತಾ ಅವರ ನಟಿ ಅಂಕಿತಾ ಲೋಖಂಡೆ(Ankita Lokhande) ಈ ದಿನಗಳಲ್ಲಿ ಪತಿ ವಿಕ್ಕಿ ಜೈನ್ (Vicky Jain) ಅವರೊಂದಿಗೆ ಟಿವಿ ರಿಯಾಲಿಟಿ ಶೋ 'ಸ್ಮಾರ್ಟ್ ಜೋಡಿ'ಯಲ್ಲಿ (Smart Jodi) ಕಾಣಿಸಿಕೊಂಡಿದ್ದಾರೆ. ಈ ನಡುವೆ ಅಂಕಿತಾ ಲೋಖಂಡೆ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ಪತಿ ವಿಕ್ಕಿ ಜೈನ್ ಅವರೊಂದಿಗೆ ಹೋಳಿ (HOli) ಆಡುತ್ತಿದ್ದಾರೆ. 

ವಾಸ್ತವವಾಗಿ, ದಂಪತಿಗಳು ಸ್ಮಾರ್ಟ್ ಜೋಡಿಯ ಸೆಟ್‌ಗಳಲ್ಲಿ ಹೋಳಿಯನ್ನು ಆಡಿದರು. ಈ ಸಮಯದಲ್ಲಿ, ವಿಕ್ಕಿ ಜೈನ್ ಮೊದಲು ಗುಲಾಬಿ ಬಣ್ಣವನ್ನು ಅಂಕಿತಾ ಕೆನ್ನೆಗೆ ತನ್ನ ಕೆನ್ನೆಯಿಂದ ಬಳಿದರು. ಇದಾದ ನಂತರ ಅಂಕಿತಾ ಪತಿಗೆ ಬಣ್ಣ ಬಳಿಯಲು ಯತ್ನಿಸಿದಾಗ ಆತನ ಮೇಲೆ ಬಿದ್ದಿದ್ದಾರೆ.

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಮದುವೆಯ ನಂತರ ತಮ್ಮ ಮೊದಲ ಹೋಳಿಯನ್ನು ಆಚರಿಸುತ್ತಿದ್ದಾರೆ.  ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಸ್ಮಾರ್ಟ್ ಜೋಡಿಯ ಸೆಟ್‌ಗಳಲ್ಲಿ ಸಾಕಷ್ಟು ಎಂಜಾಯ್‌ ಮಾಡಿದರು. 

Tap to resize

ನಟ ಭಾಗ್ಯಶ್ರೀ ಕೂಡ ಪತಿಯೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಸ್ಟಾರ್ ಪ್ಲಸ್ ಶೋ ಸ್ಮಾರ್ಟ್ ಜೋಡಿಯಲ್ಲಿ ಹೋಳಿ ವಿಶೇಷ ಸಂಚಿಕೆ ಈ ಭಾನುವಾರ ಬರಲಿದೆ. ಇದರಲ್ಲಿ, ಕಾರ್ಯಕ್ರಮದ ಜೋಡಿಗಳು ಪರಸ್ಪರ ಹೋಳಿ ಆಡುವುದನ್ನು ಕಾಣಬಹುದು. ಚಾನೆಲ್ ಪ್ರೋಮೋವನ್ನು ಸಹ ಬಿಡುಗಡೆ ಮಾಡಿದೆ.

ಇದರಲ್ಲಿ ಅಂಕಿತಾ ಲೋಖಂಡೆ-ವಿಕ್ಕಿ ಜೈನ್ ಹೊರತುಪಡಿಸಿ, ಭಾಗ್ಯಶ್ರೀ ಮತ್ತು ಅವರ ಪತಿ ಹಿಮಾಲಯ ದಾಸನಿ ಕೂಡ ರೊಮ್ಯಾಂಟಿಕ್ ಶೈಲಿಯಲ್ಲಿ ಹೋಳಿ ಆಡುತ್ತಿದ್ದಾರೆ. ಅದೇ ಸಮಯದಲ್ಲಿ ಹಿನ್ನಲೆಯಲ್ಲಿ ‘ಲಹು ಮೌತ್ ಲಗ್ ಗಯಾ’ ಹಾಡು ಕೇಳಿಸುತ್ತದೆ.

ಖ್ಯಾತ ರಿಯಾಲಿಟಿ ಶೋ 'ನಾಚ್ ಬಲಿಯೇ' ಮಾದರಿಯಲ್ಲಿ 'ಸ್ಮಾರ್ಟ್ ಜೋಡಿ' ಎಂಬ ಹೊಸ ಡ್ಯಾನ್ಸ್ ರಿಯಾಲಿಟಿ ಶೋ ಆರಂಭವಾಗಿದೆ. ಸ್ಮಾರ್ಟ್ ಜೋಡಿಯಲ್ಲಿ, ಅಂಕಿತಾ ಲೋಖಂಡೆ-ವಿಕ್ಕಿ ಜೈನ್ ಹೊರತುಪಡಿಸಿ, ಟಿವಿಯ ಪ್ರಸಿದ್ಧ ಹೋಸ್ಟ್‌ಗಳು ಮತ್ತು ನಟರಾದ ಅರ್ಜುನ್ ಬಿಜಲಾನಿ-ನೇಹಾ ಬಿಜಲಾನಿ, ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ, ಮೊನಾಲಿಸಾ ಮತ್ತು ವಿಕ್ರಾಂತ್, ದೀಪಿಕಾ ಕಕ್ಕರ್, ಶೋಯೆಬ್ ಇಬ್ರಾಹಿಂ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.

Latest Videos

click me!