ವಾಟ್ಸಪ್ ಬಳಕೆದಾರರಿಗೆ ಸಿಹಿಸುದ್ದಿ ಬಂದಿದೆ. ಇನ್ಮುಂದೆ WhatsApp ನಲ್ಲೇ ಕರೆಂಟ್, ಗ್ಯಾಸ್, ನೀರಿನ ಬಿಲ್ ಪೇ ಮಾಡಬಹುದು. ಬಿಲ್ ಪೇ ಮಾಡಲು ಯಾವುದೇ ಆಫೀಸ್‌ಗೆ ಅಲೆದಾಡಬೇಕಿಲ್ಲ, ನೀವಿದ್ದಲ್ಲೇ ವಾಟ್ಸಪ್ ಮೂಲಕವೇ ಪೇ ಮಾಡಬಹುದುದಾಗಿದೆ. ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
WhatsApp Bill Pay: ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್
ಭಾರತದ ಕೋಟ್ಯಂತರ ವಾಟ್ಸಾಪ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿಯೊಂದು ಬಂದಿದೆ. ಇನ್ನು ಮುಂದೆ ನಿಮ್ಮ ಮನೆಗೆ ಬರುವ ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್‌ಗಳನ್ನು ಪಾವತಿಸಲು ಬೇರೆ ಯಾವುದೇ ಆಫೀಸ್‌ಗೆ, ಆಪ್‌ಗೆ ಹೋಗಬೇಕಾಗಿಲ್ಲ. ಮೆಟಾ ಮಾಲೀಕತ್ವದ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್‌ನಲ್ಲೇ ನೇರವಾಗಿ ಈ ಬಿಲ್‌ಗಳನ್ನು ಪಾವತಿಸುವ ಹೊಸ ಫೀಚರ್ ಅನ್ನು ಪರಿಚಯಿಸಿದೆ.
24
ವಾಟ್ಸಪ್‌ನಿಂದಲೇ ಗ್ಯಾಸ್, ನೀರಿನ ಬಿಲ್ ಪಾವತಿ
ಈ ಹೊಸ ಸೌಲಭ್ಯವು ವಾಟ್ಸಾಪ್ ಪೇಮೆಂಟ್ಸ್ (WhatsApp Pay) ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ಬಳಕೆದಾರರು ಚಾಟ್ ಮಾಡುವಷ್ಟೇ ಸುಲಭವಾಗಿ ತಮ್ಮ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಬಹುದಾಗಿದೆ. ಇದು ಬಳಕೆದಾರರಿಗೆ ಮತ್ತೊಂದು ಅನುಕೂಲಕರ ಆಯ್ಕೆಯಾಗಿರುವುದಂತೂ ನಿಜ.
34
ಹಂತ ಹಂತವಾಗಿ ಎಲ್ಲರಿಗೂ ಲಭ್ಯ
ಈ ಹೊಸ ಬಿಲ್ ಪಾವತಿ ಸೌಲಭ್ಯವನ್ನು ಸದ್ಯಕ್ಕೆ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದು ವಾಟ್ಸಾಪ್ ತಿಳಿಸಿದೆ. ಅಂದರೆ, ಸದ್ಯಕ್ಕೆ ಕೆಲವೇ ಬಳಕೆದಾರರಿಗೆ ಈ ಆಯ್ಕೆ ಕಾಣಿಸಿಕೊಳ್ಳಬಹುದು. ಆದರೆ, ಮುಂದಿನ ಕೆಲವೇ ವಾರಗಳಲ್ಲಿ ಭಾರತದಲ್ಲಿರುವ ಎಲ್ಲಾ ಆಂಡ್ರಾಯ್ಡ್ (Android) ಮತ್ತು ಐಓಎಸ್ (iOS) ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಲಿದೆ.
ಕಂಪನಿಯ ಪ್ರಕಾರ, ಈ ಸೌಲಭ್ಯವನ್ನು ಕ್ರಮೇಣವಾಗಿ ವಿಸ್ತರಿಸಲಾಗುತ್ತಿದ್ದು, ಅತಿ ಶೀಘ್ರದಲ್ಲೇ ಪ್ರತಿಯೊಬ್ಬ ವಾಟ್ಸಾಪ್ ಬಳಕೆದಾರನೂ ಇದರ ಪ್ರಯೋಜನ ಪಡೆಯಲಿದ್ದಾನೆ. ಈ ಮೂಲಕ ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ವಾಟ್ಸಾಪ್ ಮುಂದಾಗಿದೆ. ಬಳಕೆದಾರರು ತಮ್ಮ ವಾಟ್ಸಾಪ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಈ ಹೊಸ ಫೀಚರ್ ಬಂದಿದೆಯೇ ಎಂದು ಪರೀಕ್ಷಿಸಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.