ಟಾಟಾ ಮೋಟಾರ್ಸ್‌ ಉದ್ಯಮಕ್ಕೆ ಅಂಬಾನಿ ಪೈಪೋಟಿ ; ಬೃಹತ್ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್‌ಅಪ್‌ಗೆ ಹೂಡಿಕೆ

First Published Dec 14, 2023, 11:04 AM IST

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಬರೋಬ್ಬರಿ 798800 ಕೋಟಿ ರೂ. ಮೌಲ್ಯದ ಆಸ್ತಿ ಅಂಬಾನಿ ಕುಟುಂಬದ ಬಳಿಯಿದೆ. ಹಾಗೆಯೇ ರತನ್‌ ಟಾಟಾ ಸಹ ಭಾರತದ ಬಿಲಿಯನೇರ್‌ ವ್ಯಕ್ತಿಗಳ ಲಿಸ್ಟ್‌ನಲ್ಲಿದ್ದಾರೆ. ಆದರೆ, ಪ್ರಸ್ತುತ ಮುಕೇಶ್ ಅಂಬಾನಿ, ರತನ್‌ ಟಾಟಾಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಬರೋಬ್ಬರಿ 798800 ಕೋಟಿ ರೂ. ಮೌಲ್ಯದ ಆಸ್ತಿ ಅಂಬಾನಿ ಕುಟುಂಬದ ಬಳಿಯಿದೆ. ಹಾಗೆಯೇ ರತನ್‌ ಟಾಟಾ ಸಹ ಭಾರತದ ಬಿಲಿಯನೇರ್‌ ವ್ಯಕ್ತಿಗಳ ಲಿಸ್ಟ್‌ನಲ್ಲಿದ್ದಾರೆ. ಆದರೆ, ಪ್ರಸ್ತುತ ಮುಕೇಶ್ ಅಂಬಾನಿ, ರತನ್‌ ಟಾಟಾಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.

ಟಾಟಾ ಮೋಟಾರ್ಸ್, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿ)  ಬೃಹತ್‌ ಸ್ಟಾರ್ಟ್‌ಅಪ್‌ಗಳಿಗೆ ಹೆಸರುವಾಸಿಯಾಗಿದೆ. ಎಲೆಕ್ಟ್ರಿಕ್ ವೆಹಿಕಲ್ ಮೇಲಿನ ಈ ಬೃಹತ್‌ ಅವಲಂಬನೆಗೆ, ಎಲೆಕ್ಟಿಕ್‌ ವಾಹನಗಳ ಹೆಚ್ಚಿನ ಬೇಡಿಕೆಗೆ ಕಾರಣವಾದವರಲ್ಲಿ ಒಬ್ಬರು ಇಂಜಿನಿಯರ್ ಅನ್ಮೋಲ್ ಸಿಂಗ್ ಜಗ್ಗಿ. ಟಾಟಾ ಮೋಟಾರ್ಸ್‌ನಲ್ಲಿ ಪೆಟ್ರೋಲಿಯಂ ಮತ್ತು ಎನರ್ಜಿ ಸ್ಟಡೀಸ್ ವಿಶ್ವವಿದ್ಯಾನಿಲಯದ ಇಂಜಿನಿಯರ್.

ಅನ್ಮೋಲ್ ಸಿಂಗ್ ಜಗ್ಗಿ, ಪ್ರಸ್ತುತ ಉದ್ಯಮಿಯಾಗಿದ್ದು, ರೈಡ್-ಹೇಲಿಂಗ್ ಕಂಪನಿ ಬ್ಲೂಸ್ಮಾರ್ಟ್ ಮತ್ತು ಇವಿ ಉತ್ಪಾದನಾ ಕಂಪನಿ ಜೆನ್ಸೋಲ್ ಇಂಜಿನಿಯರಿಂಗ್‌ನ್ನು ಸ್ಥಾಪಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಇದಕ್ಕೆ ಮುಕೇಶ್ ಅಂಬಾನಿ ಅವರು ಅನ್ಮೋಲ್ ಸಿಂಗ್ ಜಗ್ಗಿ ಅವರ ರೈಡ್-ಹೇಲಿಂಗ್ ಕಂಪನಿಯಲ್ಲಿ ಹೂಡಿಕೆದಾರರಾಗಿದ್ದಾರೆ.

ಕಂಪೆನಿಯ ವಾರ್ಷಿಕ ಆದಾಯ ರನ್ ರೇಟ್ 400 ರೂ. ಕೋಟಿಗಳನ್ನು ದಾಟಿದೆ. ಟಾಟಾ ಮೋಟಾರ್ಸ್ ಬ್ಲೂಸ್ಮಾರ್ಟ್‌ನಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದರೂ, ಇದು ಅನ್ಮೋಲ್ ಸಿಂಗ್ ಜಗ್ಗಿ ಅವರ ಸ್ವಂತ ಎರಡು ಆಸನಗಳ ಇಲೆಕ್ಟ್ರಿಕ್ ವೆಹಿಕಲ್ ಆರಂಭಿಸಲು ಮುಂದಾಗಿದ್ದಾರೆ ಅದು ಟಾಟಾ ಮೋಟಾರ್ಸ್‌ನಿಂದ ಕೆಲವು ಮಾರುಕಟ್ಟೆ ಪಾಲನ್ನು ಪಡೆಯಬಹುದು. 

ಅನ್ಮೋಲ್ ಸ್ಥಾಪಿಸಿದ, ಜೆನ್ಸೋಲ್ ಇಂಜಿನಿಯರಿಂಗ್ ತನ್ನ ಮೊದಲ EVಯ ಟೀಸರ್ ಅನ್ನು ಹೊರತಂದಿದೆ, ಅದು ಮಾರ್ಚ್ 2024ರಲ್ಲಿ ಪಾದಾರ್ಪಣೆ ಮಾಡಲಿದೆ. ಪುಣೆಯ ಚಕನ್‌ನಲ್ಲಿರುವ ಕಂಪನಿಯ ಘಟಕದಲ್ಲಿ ಈ ಕಾರನ್ನು ತಯಾರಿಸಲಾಗುತ್ತಿದೆ.

ಕಂಪನಿಯ ಪ್ರಕಾರ, ಮುಂಬರುವ EV ಒಂದೇ ಚಾರ್ಜ್‌ನಲ್ಲಿ 200 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು ಇನ್-ಕ್ಯಾಬಿನ್ ಡ್ರೈವರ್ ಅಸಿಸ್ಟೆಂಟ್ ಟೆಕ್ನಾಲಜಿ, ಮೂನ್‌ರೂಫ್, ಇತರ ವಿಷಯಗಳನ್ನು ಒಳಗೊಂಡಿರುತ್ತದೆ.

ಅನ್ಮೋಲ್ ಸಿಂಗ್ ಜಗ್ಗಿ, ಸೇನಾ ಅಧಿಕಾರಿಯ ಮಗ. ಇವರ ಕಿರಿಯ ಸಹೋದರ ಪುನಿತ್ ಸಿಂಗ್ ಜಗ್ಗಿ, ಬ್ಲೂಸ್ಮಾರ್ಟ್ ಮತ್ತು ಜೆನ್ಸೋಲ್ ಎಂಜಿನಿಯರಿಂಗ್‌ನಲ್ಲಿ ಪಾಲುದಾರರಾಗಿದ್ದಾರೆ. ಕಂಪನಿ ಬ್ಲೂಸ್ಮಾರ್ಟ್ ಎರಡು ನಗರಗಳಲ್ಲಿನ ಪ್ರಮುಖ ಸ್ಥಳಗಳಲ್ಲಿ 32 ಚಾರ್ಜಿಂಗ್ ಹಬ್‌ಗಳಲ್ಲಿ 3,900 ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. 

ವರದಿಗಳ ಪ್ರಕಾರ, BluSmartನ ಒಟ್ಟು ಮೌಲ್ಯ ಮೇ 5, 2023ರ ಪ್ರಕಾರ, ಸುಮಾರು 2074 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ. ಹೀಗಾಗಿಯೇ ಅಂಬಾನಿ ಹೂಡಿಕೆ ಮಾಡಿರುವ ಈ ಉದ್ಯಮ, ಟಾಟಾ ಮೋಟಾರ್ಸ್‌ಗೆ ಸೆಡ್ಡು ಹೊಡೆದು ಅದನ್ನೂ ಮೀರಿ ಸಕ್ಸಸ್‌ ಆದರೂ ಆಶ್ಚರ್ಯವಿಲ್ಲ.

click me!