ಜಿಯೋ ತನ್ನ ಗ್ರಾಹಕರಿಗೆ ಇದೀಗ ವಾರ್ಷಿಕ ಪ್ಲಾನನ್ನು ಬಿಡುಗಡೆಮಾಡಿದೆ.
ಹೊಸ ವಾರ್ಷಿಕ ಪ್ಲಾನ್ 336 ದಿನದ ವ್ಯಾಲಿಡಿಟಿ ಹೊಂದಿದ್ದು, ಬಳಕೆದಾರರಿಗೆ ಪ್ರತಿದಿನ 1.5 ಜಿಬಿ ಡೇಟಾ (ವಾರ್ಷಿಕ 504 ಜಿಬಿ) ಸಿಗಲಿದೆ
ಜಿಯೋ ಟು ಜಿಯೋಗೆ ಅನ್ಲಿಮಿಟೆಡ್ ಕರೆಗಳು, ಜಿಯೋಯೇತರ ನಂಬರ್‌ಗಳಿಗೆ 12000 ನಿಮಿಷಗಳ ಉಚಿತ ಕರೆ
ಮತ್ತು ದಿನಕ್ಕೆ 100 ಉಚಿತ ಎಸ್ಸೆಮ್ಮೆಸ್ ಕೂಡಾ ಈ ಪ್ಲಾನ್‌ನಲ್ಲಿ ಲಭ್ಯವಿದೆ.
ಜೊತೆಗೆ, ಬಳಕೆದಾರರಿಗೆ ಜಿಯೋನ ಇತರ ಆ್ಯಪ್‌ಗಳ ಆ್ಯಕ್ಸೆಸ್ ಕೂಡಾ ಸಿಗಲಿದೆ.
ಈಗ ಪ್ರಕಟಿಸಿರುವ ವಾರ್ಷಿಕ ಪ್ಲಾನ್ ಬೆಲೆ ₹2121 ಆಗಿದೆ.
ಹೊಸ ವರ್ಷದ ಪ್ರಯುಕ್ತ ಜಿಯೋ, ಹ್ಯಾಪಿ ನ್ಯೂ ಇಯರ್ 2020 ಪ್ಲಾನನ್ನು ಪರಿಚಯಿಸಿತ್ತು. ಆ ಪ್ಲಾನ್ ಬೆಲೆ 2020 ಆಗಿತ್ತು.