Published : Sep 07, 2019, 08:37 AM ISTUpdated : Sep 07, 2019, 10:15 AM IST
ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಆರಂಭದಿಂದಲೂ ಕೊನೆಯ 15 ನಿಮಿಷಗಳು ಅತ್ಯಂತ ಕಷ್ಟದ ಕ್ಷಣಗಳು ಎಂದು ಹೇಳಲಾಗಿತ್ತು. ಸದ್ಯ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆಯಾದರೂ ಇಸ್ರೋ ವಿಜ್ಞಾನಿಗಳು ಮತ್ತೆ ಸಂಪರ್ಕಿಸಲು ಯತ್ನಿಸುತ್ತಿದ್ದಾಋಎ. ಪ್ರಧಾನಿ ಮೋದಿಯೂ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ. ಹಾಗಾದ್ರೆ ಆ ಕಡೆಯ ಕ್ಷಣಗಳು ಹೇಗಿತ್ತು? ಇಲ್ಲಿದೆ ಫೋಟೋ ಜರ್ನಿ