ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!
First Published | Jul 13, 2019, 4:30 PM ISTಎಷ್ಟೇ ಕಠಿಣ ನಿಯಮಗಳನ್ನು ಹೇರಿದರೂ, ಕೆಲವೊಂದು ಅಪಾಯಕಾರಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರೊಳಗೆ ನುಸುಳಿಕೊಳ್ಳುತ್ತವೆ. ಆದರೆ, ಗೂಗಲ್ ಕೂಡಾ ಏನ್ ಕಡಿಮೆಯಿಲ್ಲ, ಅಂಥ ಆ್ಯಪ್‌ಗಳನ್ನು ಪತ್ತೆ ಹಚ್ಚಿ ಹೊರದಬ್ಬೋದು ಕೂಡಾ ಸಾಮಾನ್ಯ. ಮೊನ್ನೆ ನಾವು ಏಜೆಂಟ್ ಸ್ಮಿತ್ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೆವು, ನೆನಪಿದೆಯಲ್ವಾ? ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಭಾರತದ 15 ಮಿಲಿಯನ್ ಮೊಬೈಲ್‌ಗಳೊಳಗೆ ನುಸುಳಿಕೊಂಡು ಇನ್ನಿತರ ಕೆಲವು ಆ್ಯಪ್‌ಗಳನ್ನು ಹಾಳುಮಾಡಿಬಿಟ್ಟಿದೆ. ಇಷ್ಟೇ ಕಥೆ. ಗೂಗಲ್ ತಕ್ಷಣ ತನ್ನ ಪ್ಲೇಸ್ಟೋರನ್ನು ಕ್ಲೀನ್ ಮಾಡ್ಬಿಟ್ಟಿದೆ. ಏಜೆಂಟ್ ಸ್ಮಿತ್‌ನಿಂದ ಬಾಧಿತವಾಗಿರುವ 16 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗುಡಿಸಿ ಹೊರಹಾಕಿದೆ. ಅವುಗಳ ಪಟ್ಟಿ ಇಲ್ಲಿದೆ. ನಿಮ್ಮ ಫೋನ್ ಒಮ್ಮೆ ಚೆಕ್ ಮಾಡ್ಕೊಳ್ಳಿ, ಈ ಆ್ಯಪ್‌ಗಳು ಇದ್ದರೆ ಕೂಡಲೇ ಅನ್‌ಇನ್ಸ್ಟಾಲ್ ಮಾಡ್ಬಿಡಿ.