Massive Cyberattack Hits Tata Electronics Apple and Tesla ಟಾಟಾ ಎಲೆಕ್ಟ್ರಾನಿಕ್ಸ್‌ನ ವ್ಯವಸ್ಥೆಗಳು ಸೈಬರ್ ದಾಳಿಯಿಂದ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ, ಇದರ ಪರಿಣಾಮವಾಗಿ 630 GB ಗಿಂತ ಹೆಚ್ಚು ಡೇಟಾ ಸೋರಿಕೆಯಾಗಿದೆ.
ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪನಿಗಳಲ್ಲಿ ಒಂದಾದ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ಮೇಲೆ ಸೈಬರ್ ದಾಳಿ ನಡೆದಿರುವುದಾಗಿ ವರದಿಯಾಗಿದೆ.cಈ ಫೈಲ್‌ಗಳಲ್ಲಿ ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳಾದ Apple ಮತ್ತು Teslaಗೆ ಸಂಬಂಧಿಸಿದ ರಹಸ್ಯ ದಾಖಲೆಗಳೂ ಸೇರಿವೆ ಎನ್ನಲಾಗಿದೆ.
630 GBಕ್ಕೂ ಹೆಚ್ಚು ಡೇಟಾ ಸೋರಿಕೆ?
ಸೈಬರ್ ಭದ್ರತಾ ತಜ್ಞರ ಪ್ರಕಾರ, World Leaks ಎಂಬ ರಾನ್ಸಮ್‌ವೇರ್ ಗುಂಪು ಸುಮಾರು 630 GB ಗಾತ್ರದ 2 ಲಕ್ಷಕ್ಕೂ ಹೆಚ್ಚು ಫೈಲ್‌ಗಳನ್ನು ಡಾರ್ಕ್ ವೆಬ್‌ನಲ್ಲಿ ಪ್ರಕಟಿಸಿದೆ. ಇದರಲ್ಲಿ ಉತ್ಪನ್ನ ವಿನ್ಯಾಸಗಳು, ತಾಂತ್ರಿಕ ವಿವರಗಳು, ಇ-ಮೇಲ್‌ಗಳು, ಉದ್ಯೋಗಿಗಳ ಪಾಸ್‌ಪೋರ್ಟ್ ಪ್ರತಿಗಳು ಹಾಗೂ ಹಲವು ವರ್ಷಗಳ ಲಾಗ್ ಫೈಲ್‌ಗಳು ಸೇರಿವೆ ಎನ್ನಲಾಗಿದೆ.
24
Apple ಮತ್ತು Tesla ದಾಖಲೆಗಳೂ ಲೀಕ್?
ಹ್ಯಾಕರ್‌ಗಳು ಬಿಡುಗಡೆ ಮಾಡಿರುವ ಕೆಲವು ದಾಖಲೆಗಳಲ್ಲಿ Appleನ ಕಾರ್ಖಾನೆ ಮಾಹಿತಿ, iPhone ಕಾಂಪೊನೆಂಟ್ ಗುಣಮಟ್ಟ ಪರೀಕ್ಷಾ ದಾಖಲೆಗಳು ಹಾಗೂ Tesla ವಾಹನಗಳ ಭಾಗಗಳಿಗೆ ಸಂಬಂಧಿಸಿದ "Trade Secret" ಎಂದು ಗುರುತಿಸಲಾದ ದಾಖಲೆಗಳು ಕಂಡುಬಂದಿವೆ ಎಂದು ಸೈಬರ್ ಸಂಶೋಧಕರು ತಿಳಿಸಿದ್ದಾರೆ. ಆದರೆ ಈ ದಾಖಲೆಗಳ ನೈಜತೆಯನ್ನು ಸ್ವತಂತ್ರವಾಗಿ ಇನ್ನೂ ದೃಢೀಕರಿಸಲಾಗಿಲ್ಲ.
34
ಟಾಟಾಗೆ ಹಣದ ಬೇಡಿಕೆ?
ಈ ಸೈಬರ್ ದಾಳಿಯ ಸಂಬಂಧ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ಹ್ಯಾಕರ್‌ಗಳು ರಾನ್ಸಮ್ (ಪಣದ ಹಣ) ಬೇಡಿಕೆ ಇಟ್ಟಿರುವುದಾಗಿ ವರದಿಯಾಗಿದೆ. ಆದರೆ ಕಂಪನಿ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
44
ಟಾಟಾ ಏನು ಹೇಳಿದೆ?
ಟಾಟಾ ಎಲೆಕ್ಟ್ರಾನಿಕ್ಸ್ ತನ್ನ ಕೆಲವು ಸಿಸ್ಟಂಗಳಲ್ಲಿ ಕೆಲವು ವಾರಗಳ ಹಿಂದೆ ಸೈಬರ್ ಭದ್ರತಾ ಘಟನೆ ನಡೆದಿರುವುದನ್ನು ದೃಢಪಡಿಸಿದೆ. ಆದರೆ ಈ ಘಟನೆಯಿಂದ ಕಂಪನಿಯ ಕಾರ್ಯಾಚರಣೆಗೆ ಯಾವುದೇ ಪರಿಣಾಮ ಬೀರಿಲ್ಲ ಮತ್ತು ಎಲ್ಲ ವ್ಯವಹಾರಗಳು ಸಾಮಾನ್ಯವಾಗಿ ಮುಂದುವರಿದಿವೆ ಎಂದು ಕಂಪನಿ ತಿಳಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.