Mobile Bluetooth: ನಿಮ್ಮ ಫೋನ್‌ನ ಬ್ಲೂಟೂತ್‌ಗೆ ಈ ಹೆಸರು ಬಂದಿದ್ದು ಹೇಗೆ? ಅಚ್ಚರಿಯ ಕಥೆ ವೈರಲ್!

Published : Jun 23, 2026, 12:38 PM IST

ಪ್ರತಿದಿನ ಬಳಸುವ Smartphone, earbuds, speaker, smartwatch ಸೇರಿದಂತೆ ಅನೇಕ ಸಾಧನಗಳಲ್ಲಿ Bluetooth ತಂತ್ರಜ್ಞಾನ ಅನಿವಾರ್ಯವಾಗಿದೆ. ಆದರೆ ಈ ತಂತ್ರಜ್ಞಾನಕ್ಕೆ "ಬ್ಲೂಟೂತ್" ಎಂಬ ವಿಚಿತ್ರ ಹೆಸರು ಹೇಗೆ ಬಂತು ಎಂದು ಎಂದಾದರೂ ಯೋಚಿಸಿದ್ದೀರಾ?  

PREV
14
ಡೆನ್ಮಾರ್ಕ್‌ನ ರಾಜನಿಂದ ಬಂದ ಹೆಸರು!

ಬ್ಲೂಟೂತ್ ಹೆಸರು 10ನೇ ಶತಮಾನದ ಡೆನ್ಮಾರ್ಕ್ ರಾಜ ಹರಾಲ್ಡ್ "ಬ್ಲೂಟೂತ್" ಗಾರ್ಮ್ಸನ್ ಅವರಿಂದ ಪ್ರೇರಿತವಾಗಿದೆ. ಈ ರಾಜನು ಕ್ರಿ.ಶ. 958ರಲ್ಲಿ ಡೆನ್ಮಾರ್ಕ್ ಮತ್ತು ನಾರ್ವೆಯನ್ನು ಒಂದಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದನು. ಅವರ ಹಲ್ಲುಗಳಲ್ಲಿ ಒಂದು ನೀಲಿ-ಬೂದು ಬಣ್ಣದಲ್ಲಿದ್ದ ಕಾರಣ ಅವರಿಗೆ "Bluetooth" ಎಂಬ ಅಡ್ಡಹೆಸರು ಬಂದಿತ್ತು.

24
ತಂತ್ರಜ್ಞಾನಕ್ಕೆ ಈ ಹೆಸರು ಏಕೆ ಇಡಲಾಯಿತು?

1996ರಲ್ಲಿ ಇಂಟೆಲ್, ಎರಿಕ್ಸನ್ ಮತ್ತು ನೋಕಿಯಾ ಕಂಪನಿಗಳು ಹೊಸ ವೈರ್‌ಲೆಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಭೆ ನಡೆಸಿದ್ದವು. ಈ ವೇಳೆ ಇಂಟೆಲ್‌ನ ಇಂಜಿನಿಯರ್ ಜಿಮ್ ಕಾರ್ಡಚ್ ಈ ಯೋಜನೆಗೆ ತಾತ್ಕಾಲಿಕವಾಗಿ "Bluetooth" ಎಂಬ ಹೆಸರನ್ನು ಸೂಚಿಸಿದರು. ಕಾರಣ, ಹೇಗೆ ರಾಜ ಹರಾಲ್ಡ್ ವಿವಿಧ ರಾಜ್ಯಗಳನ್ನು ಒಂದಾಗಿಸಿದ್ದರೋ, ಅದೇ ರೀತಿ ಈ ತಂತ್ರಜ್ಞಾನವೂ ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಸ್ಪರ ಸಂಪರ್ಕಿಸುವ ಗುರಿ ಹೊಂದಿತ್ತು.

34
ಮೊದಲಿಗೆ ಈ ಹೆಸರು ಶಾಶ್ವತವಾಗಿರಲಿಲ್ಲ!

ಆರಂಭದಲ್ಲಿ ಈ ತಂತ್ರಜ್ಞಾನಕ್ಕೆ RadioWire ಅಥವಾ PAN (Personal Area Networking) ಎಂಬ ಹೆಸರು ಇಡುವ ಯೋಚನೆಯೂ ಇತ್ತು. ಆದರೆ ಟ್ರೇಡ್‌ಮಾರ್ಕ್ ಮತ್ತು ಇತರ ತಾಂತ್ರಿಕ ಕಾರಣಗಳಿಂದ ಕೊನೆಗೆ "Bluetooth" ಎಂಬ ಹೆಸರೇ ಉಳಿದುಕೊಂಡಿತು. ಬಳಿಕ ಇದೇ ಹೆಸರು ಜಗತ್ತಿನಾದ್ಯಂತ ಜನಪ್ರಿಯವಾಯಿತು.

44
ಬ್ಲೂಟೂತ್ ಲೋಗೋದ ಹಿಂದಿರುವ ರಹಸ್ಯ

ನಾವು ಪ್ರತಿದಿನ ನೋಡುವ Bluetooth ಲೋಗೋ ಕೂಡ ವಿಶೇಷವಾಗಿದೆ. ಈ ಚಿಹ್ನೆ ರಾಜ ಹರಾಲ್ಡ್ ಬ್ಲೂಟೂತ್ ಅವರ ಹೆಸರಿನ ಮೊದಲ ಅಕ್ಷರಗಳಾದ H ಮತ್ತು B ಅನ್ನು ಪುರಾತನ ನಾರ್ಡಿಕ್ ರೂನ್ ಚಿಹ್ನೆಗಳ ರೂಪದಲ್ಲಿ ಸಂಯೋಜಿಸಿ ರಚಿಸಲಾಗಿದೆ.

ನಿಮಗೆ ಗೊತ್ತೇ?

ನಮ್ಮ ಫೋನ್, ಲ್ಯಾಪ್‌ಟಾಪ್ ಮತ್ತು ಇಯರ್‌ಫೋನ್‌ಗಳನ್ನು ಸಂಪರ್ಕಿಸುವ ಈ ತಂತ್ರಜ್ಞಾನಕ್ಕೆ ಸಾವಿರ ವರ್ಷಗಳ ಹಿಂದಿನ ಒಬ್ಬ ರಾಜನ ಹೆಸರಿದೆ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ!

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories