ಜಿಯೋ ಟೂ ಇನ್ ಒನ್ ಆಫರ್: ಒಂದೇ ಕನೆಕ್ಷನ್‌ನಲ್ಲಿ 2 ಟಿವಿಗಳು, 800+ ಚಾನೆಲ್‌ಗಳು

First Published | Aug 21, 2024, 1:38 PM IST

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇತ್ತೀಚೆಗೆ ಟು ಇನ್ ಒನ್ ಆಫರ್ ಪರಿಚಯಿಸಿದೆ. ಏನಿದು ಆಫರ್ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ಒಂದು ಕೆನೆಕ್ಷನ್ ಬಳಿ ಇನ್ಮುಂದೆ ಎರಡು ಟಿವಿಗಳನ್ನು ಚಲಾಯಿಸಬಹುದು. ಈ ಒಂದು ಪ್ಲಾನ್‌ನಲ್ಲಿ ನೀವು 800ಕ್ಕೂ ಅಧಿಕ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾನೆಲ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇದರೊಂದಿಗೆ 13 OTT ಅಪ್ಲಿಕೇಶನ್‌ಗಳು ಉಚಿತವಾಗಿ ಲಾಗಿನ್ ಆಗಬಹುದು.

ರಿಲಯನ್ಸ್ ಜಿಯೋ ತನ್ನ  ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಗೆ ಭಾರೀ ಆಫರ್‌ಗಳನ್ನು ಒದಗಿಸುತ್ತಿದೆ. ಜಿಯೋ ಸಿಮ್ ಬಳಕೆದಾರಿಗಾಗಿ ಈಗಾಗಲೇ ಹಲವು ಆಫರ್‌ಗಳನ್ನು ಘೋಷಿಸಲಾಗಿದೆ. ಅಷ್ಟು ಮಾತ್ರವಲ್ಲದೇ ತನ್ನ ಜಿಯೋ ಬಳಕೆದಾರರಿಗೆ ಜಿಯೋ ಟಿವಿ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.

Latest Videos


ಏನಿದು ಯೋಜನೆ?

ರಿಲಯನ್ಸ್ ಜಿಯೋ ಏರ್ ಫೈಬರ್ ಸಂಪರ್ಕ ಹೊಂದಿರುವ ಬಳಕೆದಾರರಿಗೆ ಹೊಸ ಯೋಜನೆ ಘೋಷಣೆ ಮಾಡಲಾಗಿದೆ. Jio TV Plus Two in One ಅದ್ಭುತ ಆಫರ್ ನೀಡುತ್ತಿದೆ. ಈ ಆಫರ್‌ 599 ರೂಪಾಯಿಯಲ್ಲಿ ಲಭ್ಯವಿದೆ. ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ರೂ.899, ಪ್ರಿಪೇಯ್ಡ್ ಗ್ರಾಹಕರಿಗೆ ರೂ.999 ಈ ಯೋಜನೆಗಳನ್ನು ಆಕ್ಟಿವೇಟ್ ಮಾಡಬಹುದಾಗಿದೆ.

Jio TV Plus ಅಪ್ಲಿಕೇಶನ್ ಚಂದಾದಾರಿಕೆಯು ಟು ಇನ್ ಒನ್ ಆಫರ್ ಯೋಜನೆಯಲ್ಲಿ ಲಭ್ಯವಿದೆ. ಇದರೊಂದಿಗೆ, ನೀವು 800 ಡಿಜಿಟಲ್ ಟಿವಿ ಚಾನೆಲ್‌ಗಳು ಮತ್ತು 13 ಜನಪ್ರಿಯ OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯುತ್ತೀರಿ.

ಆದ್ದರಿಂದ ನೀವು Jio TV Plus ಅಪ್ಲಿಕೇಶನ್ ಮೂಲಕ ಹೆಚ್ಚು ಲಾಭಗಳನ್ನು ನಿಮ್ಮದಾಗಿಸಿಕೊಳ್ಳಬಹುದು. 10 ಭಾಷೆಗಳಲ್ಲಿ 20 ವರ್ಗಗಳಾದ್ಯಂತ 800 ಚಾನಲ್‌ಗಳು, ಒಂದೇ ಲಾಗಿನ್‌ನಿಂದ 13 OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಸಿಗುತ್ತದೆ.

ಟು-ಇನ್-ಒನ್ ಆಫರ್‌ನ ಮತ್ತೊಂದು ವಿಶೇಷ ಅಂದ್ರೆ ಒಂದೇ ಕನೆಕ್ಷನ್‌ನಿಂದ ಎರಡು ಟಿವಿ ಆನ್ ಮಾಡಿಕೊಳ್ಳಹುದು. ಜಿಯೋ ಏರ್ ಫೈಬರ್ ಸಂಪರ್ಕ ಹೊಂದಿರುವ ಬಳಕೆದಾರರು ಈ ಆಫರ್ ಮೂಲಕ ಎರಡು ಟಿವಿಗಳಲ್ಲಿ ತಮ್ಮ ಆಯ್ಕೆಯ ವಾಹಿನಿ ವೀಕ್ಷಿಸಬಹುದು. ಒಂದೇ ಕುಟುಂಬದಲ್ಲಿ ಬೇರೆ ಬೇರೆ ಕಾರ್ಯಕ್ರಮ ವೀಕ್ಷಿಸುವವರಿಗೆ ಈ ಆಫರ್ ಲಾಭವಾಗಲಿದೆ.

ಅಸ್ತಿತ್ವದಲ್ಲಿರುವ ಎಲ್ಲಾ ಸ್ಮಾರ್ಟ್ ಟಿವಿಗಳಲ್ಲಿ ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಒಮ್ಮೆ ನೀವು ಸೈನ್ ಇನ್ ಮಾಡಿದರೆ, ಎಲ್ಲಾ ಆಯ್ಕೆಗಳು ತರೆದುಕೊಳ್ಳುತ್ತವೆ.

ಕ್ಯಾಚ್ ಆನ್ ಟಿವಿ ವೈಶಿಷ್ಟ್ಯವನ್ನು ಬಳಸಿಕೊಂಡು ಪ್ರಸ್ತುತ ಪ್ರಸಾರವಾಗುವ ಕಾರ್ಯಕ್ರಮಗಳು ಮಾತ್ರವಲ್ಲದೆ ಈ ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಬಹುದು. ವೈಯಕ್ತಿಕ ಆಸಕ್ತಿಯ ಆಧಾರದ ಮೇಲೆ ಚಾನಲ್‌ಗಳು, ಶೋಗಳು ಮತ್ತು ಚಲನಚಿತ್ರಗಳನ್ನು ಶಿಫಾರಸು ಮಾಡುತ್ತದೆ. ಮಕ್ಕಳಿಗಾಗಿ ಮಕ್ಕಳ ಸುರಕ್ಷಿತ ವಿಭಾಗವನ್ನು ಸಹ ನೀಡಲಾಗಿದೆ.

ಈ Jio TV Plus ಅಪ್ಲಿಕೇಶನ್ ಮೂಲಕ ನೀವು ಸುದ್ದಿ, ಕ್ರೀಡೆ, ಸಂಗೀತ, ವ್ಯಾಪಾರ, ಮನರಂಜನೆಯ ಜೊತೆಗೆ ಭಕ್ತಿಯಂತಹ ಎಲ್ಲಾ ಚಾನಲ್‌ಗಳನ್ನು ವೀಕ್ಷಿಸಬಹುದು. ಪೋಗೊ, ಕಾರ್ಟೂನ್ ನೆಟ್‌ವರ್ಕ್, ಡಿಸ್ಕವರಿ ಕಿಡ್ಸ್‌ನಂತಹ ಮಕ್ಕಳ ನೆಚ್ಚಿನ ಚಾನಲ್‌ಗಳು ಸಹ ಲಭ್ಯವಿದೆ. 

ಟು-ಇನ್-ಒನ್ ಆಫರ್ ಪಡೆಯಲು, ನಿಮ್ಮ ಸ್ಮಾರ್ಟ್ ಟಿವಿ ಆಪ್ ಸ್ಟೋರ್‌ನಿಂದ ನೀವು ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಿಮ್ಮ ನೋಂದಾಯಿತ ಜಿಯೋ ಫೈಬರ್ ಅಥವಾ ಜಿಯೋ ಐನ್ ಫೈಬರ್ ಮೊಬೈಲ್ ಸಂಖ್ಯೆಯೊಂದಿಗೆ ನೀವು ಲಾಗಿನ್ ಮಾಡಬಹುದು ಮತ್ತು ಈ ಕೊಡುಗೆಯಿಂದ ಒದಗಿಸಲಾದ ಸೇವೆಗಳನ್ನು ಪಡೆಯಬಹುದು. 

click me!