ಜಿಯೋ ಆಪ್‌ನಿಂದ ರೀಚಾರ್ಜ್: ರೀಚಾರ್ಜ್ ಮಾಡುವ ಈ ಕೆಲಸಕ್ಕೆ ಆಪ್ ಒಂದರ ಅಗತ್ಯವಿದೆ. JioPOS Lite ಹೆಸರಿನ ಈ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲೂ ಲಭ್ಯವಿದೆ. ಇದರ ಮೂಲಕ ಫೋನ್ ರೀಚಾರ್ಜ್ ಮಾಡಿದರೆ ಶೇ. 4.16ರಷ್ಟು ಕಮಿಷನ್ ಸಿಗುತ್ತದೆ.
ಆಪ್‌ನಲ್ಲಿ ರಿಜಿಸ್ಟರ್ ಮಾಡೋದು ಹೇಗೆ?: ಇದಕ್ಕೆ ಎಲ್ಲಕ್ಕಿಂತ ಮೊದಲು JioPOS Lite ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು. ವಬಳಿಕ ಇದನ್ನು ಓಪನ್ ಮಾಡಿ Allow All ಎಂಬ ಅಯ್ಕೆಯನ್ನು ಕ್ಲಿಕ್ ಮಾಡಬೇಕು. ಇದಕ್ಕೆ SMS, ಕಾಂಟ್ಯಾಕ್ಟ್ ಹಾಗೂ ಲೊಕೇಷನ್ ಆಕ್ಸೆಸ್ ಮಾಡಲು ಅನುಮತಿ ನೀಡಬೇಕು. ಬಳಿಕ ಸೈನ್ ಇನ್ ಹಾಗೂ ಸೈನ್ ಅಅಪ್ ಪೇಜ್ ಕಾಣಿಸಿಕೊಳ್ಳುತ್ತದೆ. ಇಲ್ಲಿ ಸೈನ್ ಅಪ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಇಮೇಲ್ ಐಡಿ ಹಾಗೂ ಜಿಯೋ ನಂಬರ್ ನಮೂದಿಸಿ. ಬಳಿಕ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದಾದ ಕೆಲವೇ ಕ್ಷಣಗಳಲ್ಲಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ.
ಮುಂದಿನ ಪ್ರಕ್ರಿಯೆ: ಒಟಿಪಿ ಸಿಗುತ್ತಿದ್ದಂತೆಯೇ Validate OTP ಮೇಲೆ ಕ್ಲಿಕ್ ಮಾಡಿ. ಬಳಿಕ ಮೊಬೈಲ್ ತನ್ನಿಂತಾನಾಗೇ ಒಟಿಪಿ ಸ್ವೀಕರಿಸುತ್ತದೆ. ಇದಾದ ಬಳಿಕ ಸ್ಕ್ರೀನ್ ಮೇಲೆ ನಿಮ್ಮ ಇಮೇಲ್ ಐಡಿ ಹಾಗೂ ಇತರ ವಿವರ ಕಾಣಿಸಿಕೊಳ್ಳುತ್ತದೆ. ಇಲ್ಲಿ Choose your work location ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅಲ್ಲೊಂದು ಮ್ಯಾಪ್ ಕಾಣುತ್ತದೆ ಇಲ್ಲಿ ನೀವಿದ್ದ ಸ್ಥಳವನ್ನು ಸರಿಯಾಗಿ ನಮೂದಿಸಬೇಕು ಹಾಗೂ Done ಎಂಬುವುದನ್ನು ಕ್ಲಿಕ್ ಮಾಡಬೇಕು. ಇಷ್ಟಾದ ಮೇಲೆ ನಿಮ್ಮ ನಂಬರ್ ರೀಚಾರ್ಜ್ ಮಾಡಲು ನೋಂದಾವಣೆಯಾಗುತ್ತದೆ.. ಇಲ್ಲಿ Done ಎಂಬ ಆಯ್ಕೆ ಬರುತ್ತದೆ. ಇದನ್ನು ಕ್ಲಿಕ್ ಮಾಡಬೇಕು.
mPin ಜನರೇಟ್ ಮಾಡುವ ಪ್ರಕ್ರಿಯೆ: ಬೇರೆಯವರ ಫೋನ್ ರೀಚಾರ್ಜ್ ಮಾಡಲು mPin ಜನರೇಟ್ ಮಾಡಬೇಕಾಗುತ್ತದೆ. ಬಳಕರೆದಾರನಿಗೆ ಪ್ರತಿ ಟ್ರಾನ್ಸಾಕ್ಷನ್ ಮಾನ್ಯಗೊಳಿಸಲು ಇದು ಅಗತ್ಯ. ಇದಕ್ಕಾಗಿ ಮತ್ತೆ ಆಪ್ ಓಪನ್ ಮಾಡಿ ಸೈನ್ ಇನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ ನಿಮ್ಮ ಜಿಯೋ ನಂಬರ್ ನೋಂದಾಯಿಸಿ ಜನರೇಟ್ ಒಟಿಪಿ ಕ್ಲಿಕ್ ಮಾಡಬೇಕು. ಇದಾದ ಬಳಿಕ ಸಿಕ್ಕ ಒಟಿಪಿಯನ್ನು ಅಲ್ಲಿ ನಮೂದಿಸಿ Validate OTP ಯನ್ನು ಕ್ಲಿಕ್ ಮಾಡಬೇಕು. ಈಗ ನಾಲ್ಕು ಸಂಖ್ಯೆಯ mPin ನಮೂದಿಸಿ, ಬಬಳಿಕ ಮತ್ತೊಂದು ಬಾರಿ ನಮೂದಿಸಿ ಕನ್ಫರ್ಮ್ ಮಾಡಿ. ಬಳಿಕ ಮತ್ತೆ ಸೆಟ್‌ಅಪ್ ಮೇಲೆ ಕ್ಲಿಕ್ ಮಾಡಬೇಕು.
ವಾಲೆಟ್‌ಗೆ ಹಣ ಸೇರಿಸುವುದು ಹೇಗೆ?: ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಡಿಜಿಟಲ್ ವಾಲರೆಟ್‌ನಲ್ಲಿ ಣ ಸೇರಿಸಬೇಕು. ಇದಕ್ಕಾಗಿ ಹೋಂ ಪೇಜ್‌ನಲ್ಲಿ ಕಾಣಿಸುವ ವಾಲೆಟ್ ಬ್ಯಾಲೆನ್ಸ್‌ನಲ್ಲಿ Load Money ಯನ್ನು ಕ್ಲಿಕ್ ಮಾಡಬೇಕು. ಬೇಕಾದರೆ ಎಡ ಬದಿಯಲ್ಲಿ ಕಾಣಿಸಿಕೊಳ್ಳುವ ಆಯ್ಕೆಯಿಂದಲೂ ನೀವು ಮಾಡಬಹುದು. ಬಳಿಕ ಡಿಜಿಟಲ್ ವಾಲೆಟ್‌ಗೆ ಹಣ ಸೇರಿಸಬೇಕು. ಇಲ್ಲಿ ಜಾಯ್ನಿಂಗ್ ಫೀಸ್ ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಇದು ನೀವು ಬಳಿಕ ಉಪಯೋಗಿಸಬಹುದು. ಇದಾದ ಬಳಿಕ ಮುಂದೆ ಕಡಿಮೆ ಎಂದರೆ ಇನ್ನೂರು ಗರಿಷ್ಟ ನಿಮಗಿಷ್ಟವಿದ್ದಷ್ಟು ಹಣ ಇರಿಸಬಹುದು.
ಮುಂದೇನು?: ಬ್ಯಾಲೆನ್ಸ್ ಆಯ್ಕೆ ಮಾಡಿಕೊಂಡ ಬಳಿಕ ನೀವು Proceed ಎಂಬ ಆಯ್ಕೆ ಮಾಡಬೇಕು. ಇಲ್ಲಿ ನೀವು ಹಲವಾರು ಮಾಧ್ಯಮಗಳ ಮೂಲಕ ಹಣ ಹಾಕಬಹುದು. UPI, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಜಿಯೋ ಮನಿ, ಪೇಟಿಎಂ ಮೂಲಕ ಹಣ ಹಾಕಬಹುದು. ಇಲ್ಲಿರುವ ಯಾವುದಾದರೂ ಆಯ್ಕೆ ಮೂಲಕ ಹಣ ಹಹಾಕಬಹುದು. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ವಾಲೆಟ್‌ನಲ್ಲಿ ಹಣ ಬಂದಿರುವ ಮೆಸೇಜ್ ಬರುತ್ತದೆ. ಇದಾದ ಬಳಿಕ Done ಆಯ್ಕೆ ಕ್ಲಿಕ್ ಮಾಡಬೇಕು.
ರೀಚಾರ್ಜ್ ಮಾಡೋದು ಹೇಗೆ?: ರೀಚಾರ್ಜ್ ಮಾಡಲು ನೀವು ಹೋಂ ಸ್ಕ್ರೀನ್‌ನಲ್ಲಿ ರೀಚಾರ್ಜ್ ಆಯ್ಕೆ ಕ್ಲಿಕ್ ಮಾಡಬೇಕು. ಇಲ್ಲಿ ಗ್ರಾಹಕರ ಜಿಯೋ ನಂಬರ್ ಹಾಕಿ ಕ್ಲಿಕ್ Submit ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ ಪಟ್ಟಿಯಲ್ಲಿರುವ ಪ್ಲಾನ್ ಆಯ್ಕೆ ಮಾಡಿ Buy ಎಂಬುವುದನ್ನು ಆಯ್ಕೆ ಮಾಡಬೇಕು. ಬಳಿಕ ನಿಮ್ಮ mPin ಹಾಕಿ ವ್ಯಾಲಿಡೆಟ್ ಮಾಡಬೇಕು. ಬಳಿಕ ಟ್ರ್ಆನ್ಸಾಕ್ಷನ್ ಐಡಿ ಜೊತೆ ಮೆಸೇಜ್ ಕಾಣಿಸಿಕೊಳ್ಳುತ್ತದೆ. ಅಂತಿಮವಾಗಿ Done ಮೇಲೆ ಕ್ಲಿಕ್ ಮಾಡಬೇಕು.
ಸಂಪಾದನೆ ಹೀಗೆ ತಿಳ್ಕೊಳ್ಳಿ: ರೀಚಾರ್ಜ್ ಮಾಡಿದ ಬಳಿಕ ನೀವೆಷ್ಟು ಸಂಪಾದನೆ ಮಾಡಿದ್ದೀರಿ ಎಂದು ತಿಳಿಯಲು ಹೋಂ ಸ್ಕ್ರೀನ್ ನಲ್ಲಿ ಕಾಣುವ My Earnings ಮೇಲೆ ಕ್ಲಿಕ್ ಮಾಡಿ. ಇಲ್ಲಿರುವ ಹಣವನ್ನು ನೀವು ವಾಲೆಟ್‌ಗೂ ಸೇರ್ಪಡೆ ಮಾಡಬಹುದು. ಟ್ರಾನ್ಸಾಕ್ಷನ್ ಟ್ರ್ಯಾಕ್ ಮಾಡಲು ಪಾಸ್ ಬುಕ್ ವ್ಯವಸ್ಥೆಯೂ ಇದೆ. ಇಲ್ಲಿ ಇಪ್ಪತ್ತು ದಿನಗಳಲ್ಲಿ ನಡೆಸಿದ ಲೆಕ್ಕಾಚಾರ ಸಿಗುತ್ತದೆ. Load Money ಹಾಗೂ ರೀಚಾರ್ಜ್ ಆಯ್ಕೆಯಲಲ್ಲೂ ನೀವಿದನ್ನು ನೋಡಬಹುದು.