ನವದೆಹಲಿ(ಸೆ. 02) ಆಟದಲ್ಲಿ ಮೋಸ ಮಾಡುತ್ತಿದ್ದಾರೆ, ಹ್ಯಾಕ್ ಮಾಡಿ ಗೆಲ್ಲುತ್ತಿದ್ದಾರೆ ಎಂಬ ಕಾರಣಕ್ಕೆ ಪಬ್ ಜಿ ಒಂದೇ ವಾರದಲ್ಲಿ 22 ಲಕ್ಷ ಆಟಗಾರರನ್ನು ಬ್ಯಾನ್ ಮಾಡಿತ್ತು. ಆದರೆ ಈಗ ಪಬ್ ಜಿ ಯನ್ನೇ ಬ್ಯಾನ್ ಮಾಡಲಾಗಿದೆ! ಗಡಿಯಲ್ಲಿ ಚೀನಾ ಕ್ಯಾತೆ ತೆಗೆದ ಮೇಲೆ ಕೇಂದ್ರ ಸರ್ಕಾರ ಡಿಜಿಟಲ್ ವಾರ್ ಆರಂಭಿಸಿತ್ತು. ಮೊದಲ ಹಂತದಲ್ಲಿ ಟಿಕ್ ಟಾಕ್ ಸೇರಿ 59 ಅಪ್ಲಿಕೇಶನ್ ಗಳಿಗೆ ಮುಕ್ತಿ ಕಾಣಿಸಲಾಗಿತ್ತು. ಹಲೋ, ಶೇರ್ ಚಾಟ್ ನಂತಹ ಅಪ್ಲಿಕೇಶನ್ ಗಳು ಬ್ಯಾನ್ ಆಗಿದ್ದವು. ಡೇಟಾವನ್ನು ತಮ್ಮ ಅನಕೂಲಕ್ಕೆಚೀನಾ ಬಳಸಿಕೊಳ್ಳುತ್ತಿದ್ದು ಇದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಭಾರತದಲ್ಲಿ ಮೂರು ಕೋಟಿಗೂ ಅಧಿಕ ಪಬ್ ಜಿ ದಾಸರಿದ್ದು ಚೀನಾಕ್ಕೆ ಟಿಕ್ ಟಾಕ್ ನಂತರ ಇದು ಮತ್ತೊಂದು ಭಾರೀ ಹೊಡೆತ. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿಯೂ ಟಿಕ್ ಟಾಕ್ ನಿಷೇಧದ ಮಾತುಗಳು ಚಾಲ್ತಿಯಲ್ಲಿವೆ. ಆಟಗಾರರನ್ನು ಚೀಟ್ ಮಾಡುತ್ತಾರೆ ಎಂದು ಆರೋಪಿಸಿ ಬ್ಯಾನ್ ಮಾಡಿದ್ದ ಪಬ್ ಜಿಯೇ ಬ್ಯಾನ್ ಆಗಿ ಹೋಗಿದೆ. ಆಟಗಾರನ್ನು ಬ್ಯಾನ್ ಮಾಡಿದ್ದ ಪಬ್ಜಿಯೇ ಬ್ಯಾನ್, ಈಗ ಮಜಾ ಬಂತು! After tiktok India banned more than 100 mobile applications including the hugely popular mobile game PUBG.