ಮೈಸೂರು ಪೇಟ ತೊಡಿಸಿ ಉಪರಾಷ್ಟ್ರಪತಿಯನ್ನ ಸ್ವಾಗತಿಸಿದ ಸಿಎಂ

First Published | Aug 16, 2021, 1:24 PM IST

6 ದಿನಗಳ ರಾಜ್ಯ ಪ್ರವಾಸದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಆಗಮಿಸಿದರು.   ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು  ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಪೇಟ ತೊಡಿಸಿ   ಸ್ವಾಗತಿಸಿದರು.

venkaiah naidu

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ಮೈಸೂರು ಪೇಟ ತೊಡಿಸಿ ಸಿಎಂ ಸ್ವಾಗತ ಕೋರಿದರು

venkaiah naidu

ಮೈಸೂರು ಪೇಟ ಹಾಗು ಹಾರ ಹಾಕಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಪ್ರವಾಸಕ್ಕೆ ಸ್ವಾಗತಿಸಿದ ಸಿಎಂ ಬಸವರಾಜ ಬೊಮ್ಮಾಯಿ

Latest Videos


venkaiah naidu

ಉಪ ರಾಷ್ಟ್ರಪತಿ ಅವರ ಸ್ವಾಗತದ  ಸಂದರ್ಭದಲ್ಲಿ ರಾಜ್ಯಪಾಲರಾದ ತಾವರ ಚಂದ್ ಗೆಹ್ಲತ್ , ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ , ಸಂಸದರಾದ ಪಿಸಿ ಮೋಹನ್ ಉಪಸ್ಥಿತರಿದ್ದರು...

venkaiah naidu

6 ದಿನಗಳ ರಾಜ್ಯ ಪ್ರವಾಸದಲ್ಲಿ ನಿಟ್ಟಿನಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸ್ವಾಗತಿಸಿದ್ದು, ನಿಗದಿಯಂತೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಉಪ ರಾಷ್ಟ್ರಪತಿ  ಪಾಲ್ಗೊಳ್ಳಲಿದ್ದಾರೆ. 

venkaiah naidu

ಇಂದು ಜಕ್ಕೂರಿನ  ಜವಹರಲಾಲ್ ನೆಹರು ಅಡ್ವಾನ್ಸ್ಡ್ ಸೈಂಟಿಫಿಕ್ ಸೆಂಟರ್ ರಿಸರ್ಚ್ ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

18 ರಂದು ಉಪ ರಾಷ್ಟ್ರಪತಿ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆಯುವ ಎಫ್ ಕೆಸಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ

venkaiah naidu

20 ರಂದು ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಲಿರುವ ಉಪರಾಷ್ಟ್ರಪತಿ 21 ರಂದು ಹಂಪಿಯಲ್ಲಿ ವಿಶ್ವ ಪರಂಪರೆಯ ತಾಣಗಳ ವೀಕ್ಷಣೆ ಮಾಡಲಿದ್ದಾರೆ. 22 ರಂದು ಹುಬ್ಬಳ್ಳಿಯಿಂದ ವಾಪಸ್ ದೆಹಲಿಗೆ ತೆರಳಲಿದ್ದಾರೆ 

venkaiah naidu

ಬೆಂಗಳೂರಿನ ಜಕ್ಕೂರಿನಲ್ಲಿರುವ   ಜವಾಹರಲಾಲ್ ನೆಹರೂ ಅಭಿವೃದ್ಧಿ ವಿಜ್ಞಾನ ಕೇಂದ್ರಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತೆರಳಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಗೆಹ್ಲೋಟ್ ಉಪಸ್ಥಿತರಿದ್ದಾರೆ.

venkaiah naidu

ಜವಾಹರಲಾಲ್ ನೆಹರೂ ಅಭಿವೃದ್ಧಿ ವಿಜ್ಞಾನ ಕೇಂದ್ರಕ್ಕೆ  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತೆರಳಿದ್ದು, ಇಲ್ಲಿ ಆವಿಷ್ಕಾರ ಮತ್ತು ಅಭಿವೃದ್ಧಿಯ ನೂತನ ಕೇಂದ್ರಕ್ಕೆ ಅಡಿಗಲ್ಲು ನೇರವೆರಿಸಲಿದ್ದಾರೆ.

click me!