Top 10 Richest Temples in Karnataka 2024-25: Kukke Leads Again ಧಾರ್ಮಿಕ ದತ್ತಿ ಇಲಾಖೆಯ ಪ್ರಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸತತ ಮೂರನೇ ಬಾರಿಗೆ ರಾಜ್ಯದ ಅತ್ಯಂತ ಶ್ರೀಮಂತ ದೇಗುಲವಾಗಿ ಹೊರಹೊಮ್ಮಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಪೈಕಿ ಸತತ ಮೂರನೇ ವರ್ಷವೂ ದಕ್ಷಿಣ ಕನ್ನಡದ ಪುರಾಣ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಶ್ರೀಮಂತ ದೇವಸ್ಥಾನ ಎನಿಸಿಕೊಂಡಿದೆ. ಟಾಪ್-10 ಶ್ರೀಮಂತ ದೇವಸ್ಥಾನಗಳ ಪೈಕಿ ಉತ್ತರ ಕರ್ನಾಟಕದ ಎರಡು ದೇವಸ್ಥಾನಗಳು ಸ್ಥಾನ ಪಡೆದುಕೊಂಡಿವೆ.
211
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ನಂಬರ್ 1 ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಿದೆ. 2024-25ರಲ್ಲಿ ಈ ದೇವಸ್ಥಾನದ ಆದಾಯ 155 ಕೋಟಿ ರೂಪಾಯಿ. ಅದಕ್ಕೂ ಹಿಂದಿನ ವರ್ಷ ಅಂದರೆ 2023-24ರಲ್ಲಿ 146 ಕೋಟಿ ರೂಪಾಯಿ, 2022-23ರಲ್ಲಿ 123 ಕೋಟಿ ಆದಾಯ ಗಳಿಸಿತ್ತು.
311
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿದ್ದು, 2024-25ರಲ್ಲಿ 71 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನ ಮೂರನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಒಟ್ಟು 50 ಕೋಟಿ ರೂಪಾಯಿ ಆದಾಯ ಮಾಡಿದೆ.
511
ಶ್ರೀಕಂಠೇಶ್ವರ ದೇವಸ್ಥಾನ
ಮೈಸೂರು ಜಿಲ್ಲೆಯ ಇನ್ನೊಂದು ಪ್ರಸಿದ್ಧ ದೇವಸ್ಥಾನವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ನಾಲ್ಕನೇ ಸ್ಥಾನದಲ್ಲಿದ್ದು 36 ಕೋಟಿ ರೂಪಾಯಿ ಆದಾಯ ಗಳಿಸಿದೆ.
611
ರೇಣುಕಾ ಯಲ್ಲಮ್ಮ
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ ಐದನೇ ಸ್ಥಾನದಲ್ಲಿದ್ದು, 30 ಕೋಟಿ ಆದಾಯ ಗಳಿಸಿದೆ. ಉತ್ತರ ಕರ್ನಾಟಕದ ಶ್ರೀಮಂತ ದೇವಸ್ಥಾನ ಎನಿಸಿಕೊಂಡಿದೆ.
711
ಸಿದ್ಧಲಿಂಗೇಶ್ವರ ದೇವಸ್ಥಾನ
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನ ಆರನೇ ಸ್ಥಾನದಲ್ಲಿದ್ದು, 29 ಕೋಟಿ ರೂಪಾಯಿ ಆದಾಯ ಸಂಪಾದಿಸಿದೆ.
811
ಹುಲಿಗೆಮ್ಮೆ ದೇವಸ್ಥಾನ
ಕೊಪ್ಪಳ ಜಿಲ್ಲೆಯಲ್ಲಿರುವ ಮತ್ತೊಂದು ಪುರಾಣ ಪ್ರಸಿದ್ಧ ಹುಲಿಗೆಮ್ಮ ದೇವಾಲಯ, 2024-25ರಲ್ಲಿ 17 ಕೋಟಿ ರೂಪಾಯಿ ಆದಾಯ ಗಳಿಸಿದೆ.
911
ದುರ್ಗಾಪರಮೇಶ್ವರಿ ದೇವಸ್ಥಾನ
ಉಡುಪಿಯ ಬ್ರಹ್ಮಾವರದ ಮುಂದಾರ್ತಿಯಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನ 8ನೇ ಸ್ಥಾನದಲ್ಲಿದ್ದು, 16 ಕೋಟಿ ರೂಪಾಯಿ ಆದಾಯ ಗಳಿಸಿದೆ.
1011
ಘಾಟಿ ಸುಬ್ರಹ್ಮಣ್ಯ
ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ 9ನೇ ಸ್ಥಾನದಲ್ಲಿದ್ದು 13 ಕೋಟಿ ಆದಾಯ ಗಳಿಸಿದೆ.
1111
ಬನಶಂಕರಿ
ಬೆಂಗಳೂರಿನ ಬನಶಂಕರಿ ದೇವಸ್ಥಾನದೊಂದಿಗೆ ರಾಜ್ಯದ ಟಾಪ್-10 ಶ್ರೀಮಂತ ದೇವಸ್ಥಾನಗಳ ಲಿಸ್ಟ್ ಕೊನೆಯಾಗಿದೆ. 2024-25ರಲ್ಲಿ ಬನಶಂಕರಿ ದೇವಸ್ಥಾನ 11 ಕೋಟಿ ಆದಾಯ ಗಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ