ಪ್ರತಿಷ್ಠಿತ ದುಬೈ ಎಕ್ಸ್‌ಪೋದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗದ ಮಳಿಗೆ..!

Kannadaprabha News   | Asianet News
Published : Oct 18, 2021, 09:48 AM IST

ಬೆಂಗಳೂರು(ಅ.18): ರಾಜ್ಯದ ಕರಕುಶಲ ನಿಗಮದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

PREV
14
ಪ್ರತಿಷ್ಠಿತ ದುಬೈ ಎಕ್ಸ್‌ಪೋದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗದ ಮಳಿಗೆ..!

ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ದುಬೈ ಎಕ್ಸ್‌ಫೋ’ದಲ್ಲಿ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಾ. ಬೇಳೂರು ರಾಘವೇಂದ್ರ ಶೆಟ್ಟಿ

24

ರಾಜ್ಯದ ಕರಕುಶಲ ಉತ್ಪನ್ನಗಳಿಗೆ ಅಂತಾರಾಷ್ಟ್ರ ಮಟ್ಟದಲ್ಲಿ ಉತ್ತಮ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎಕ್ಸ್‌ಫೋಗಳನ್ನು ಮಳಿಗೆಗಳನ್ನು ತೆರೆದು ಪ್ರಚಾರ ಮಾಡಲಾಗುತ್ತಿದೆ. 

34

ಮುಂದಿನ ದಿನಗಳಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಮಳಿಗೆಗಳನ್ನು ತೆರೆಯುವ ಚಿಂತನೆಯಿದೆ ಎಂದು ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅವರು ಹೇಳಿದರು.

44

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬೃಹತ್‌ ಕೈಗಾರಿಕಾ ಸಚಿವರು, ಎನ್‌ಆರ್‌ಐ ಫೌಂಡೇಷನ್‌ನ ಅಧ್ಯಕ್ಷ ದುಬೈ ಪ್ರವೀಣ್‌ ಶೆಟ್ಟಿ, ದುಬೈನಲ್ಲಿರುವ ಭಾರತೀಯ ಕೌನ್ಸಿಲ್‌ ಜನರಲ್‌ ಡಾ.ಅಮ್‌ ದೀಪ್‌ ಪುರಿ, ಎನ್‌ಆರ್‌ಐನ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಉಪಸ್ಥಿತರಿದ್ದರು.

click me!

Recommended Stories