ದಾವಣಗೆರೆ ಕುಂದೂರು ಗ್ರಾಮದಲ್ಲಿ ಆರ್.ಅಶೋಕ್ ಗ್ರಾಮ ವಾಸ್ತವ್ಯ : ಸಿಎಂ ಉದ್ಘಾಟನೆ

First Published | Oct 16, 2021, 1:57 PM IST

ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಇಂದು ನ್ಯಾಮತಿ ತಾಲ್ಲೂಕಿನಲ್ಲಿ "ಜಿಲ್ಲಾಧಿಕಾರಿಗಳ ನಡೆ - ಹಳ್ಳಿಗಳ ಕಡೆ" ಮತ್ತು 'ಗ್ರಾಮ ವಾಸ್ತವ್ಯ' ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು
 

CM Bommai

 ಕೋವಿಡ್‌ ನಂತರ ಇದೇ ಮೊದಲ ಬಾರಿಗೆ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಇಂದು ಕಂದಾಯ ಸಚಿ​ವರ ಆರ್‌. ಅಶೋಕ್‌ ಗ್ರಾಮ ವಾಸ್ತವ್ಯ ಮಾಡಲಿದ್ದು, ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಇಂದು ನ್ಯಾಮತಿ ತಾಲ್ಲೂಕಿನಲ್ಲಿ "ಜಿಲ್ಲಾಧಿಕಾರಿಗಳ ನಡೆ - ಹಳ್ಳಿಗಳ ಕಡೆ" ಮತ್ತು 'ಗ್ರಾಮ ವಾಸ್ತವ್ಯ' ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು .  

CM Bommai

ನ್ಯಾಮತಿ ತಾ. ಸುರಹೊನ್ನೆ ಗ್ರಾಮದ ಸರ್ಕಾರಿ ಪಪೂ ಮಹಿಳಾ ಕಾಲೇಜು ಆವರಣದಲ್ಲಿ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ವಿತರಣೆ ಸೇರಿ ಇತ​ರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಿಎಂ. ಹೊನ್ನಾಳಿ ತಾ. ಕುಂದೂರಿಗೆ ತೆರಳಿ  ಗ್ರಾಮದ ಕಸ್ತೂರಬಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ’ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಗ್ರಾಮವಾಸ್ತವ್ಯಕ್ಕೆ ಚಾಲನೆ ​ 

Latest Videos


CM Bommai

  ಸಿಎಂ ರಾಜ​ಕೀಯ ಕಾರ್ಯ​ದರ್ಶಿ, ಶಾಸಕ ಎಂ. ಪಿ. ರೇಣು​ಕಾ​ಚಾರ್ಯ, ಶನಿವಾರ ಅವಳಿ ತಾಲೂಕುಗಳಲ್ಲಿ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿಯಾಗಿರಬೇಕು. ನ ಭೋತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಎಲ್ಲ ರೀತಿಯಲ್ಲಿ ಜಿಲ್ಲಾ ಮತ್ತು ತಾಲೂಕು ಅಡಳಿತ ಸಿದ್ಧಗೊಂಡಿವೆ ಎಂದು ಹೇಳಿ​ದರು.

CM Bommai

ಶಾಸಕರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ. ಸಿಎಂ ಜೊತೆ, ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಈಶ್ವರಪ್ಪ, ಆಯನೂರ ಮಂಜುನಾಥ್, ಹಿರಿಯರಾದ ಎಸ್‌.ಎ,ರವಿಂದ್ರನಾಥ್‌, ಶಾಸಕರಾದ ಮಾಡಾಳ್‌ವಿರೂಪಾಕ್ಷಪ್ಪ, ಲಿಂಗಣ್ಣ, ಎಸ್‌.ವಿ.ರಾಮಚಂದ್ರಪ್ಪ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಭಾಗಿ. 

CM Bommai

ನ್ಯಾಮತಿ ತಾಲೂಕಿನ ಸುರಹೊನ್ನೆ ಹಾಗೂ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಗ್ರಾಮ ವಾಸ್ತವ್ಯ ಕಾರ್ಯಕ್ರಮ  ಕಂದಾಯ ಸಚಿವ ಆರ್‌. ಆಶೋಕ ಅವರ ನೇತೃತ್ವದಲ್ಲಿ ಜರುಗುತ್ತಿದೆ. ಕೋವಿಡ್‌ ಕಾರಣದಿಂದ ಸ್ಥಗಿತಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ  ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಮೂಲಕ ಚಾಲನೆ  ನೀಡಲಾಗಿದೆ. 

CM Bommai

 
 ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಂಪೂರ್ಣ ಸಹಕಾರದೊಂದಿಗೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಸಿದ್ದತೆಗಳು ನಡೆಯುತ್ತಿವೆ ಇದಕ್ಕೆ ಅಧಿಕಾರಿಗಳು ಗ್ರಾಮಸ್ಥರ ಸಹಕಾರ ಕೂಡ ಇದೆ ಎಂದ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ   

click me!