ವಿರೋಧದ ನಡುವೆಯೂ ಅಮ್ಮನ ದರ್ಶನ ಪಡೆದು ಅಧಿಕಾರ ಸ್ವೀಕರಿಸಿದ ರೋಹಿಣಿ ಸಿಂಧೂರಿ

First Published Sep 29, 2020, 8:09 PM IST

ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಇಂದು (ಮಂಗಳವಾರ) ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರ ಸಿಬ್ಬಂದಿಯಿಂದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಈ ಹಿಂದಿನ ಡಿಸಿ ಬಿ. ಶರತ್​, ಮೈಸೂರಿನಲ್ಲೇ ಇದ್ದರೂ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥ್‌ ಸ್ವಾಮಿ ಅವರು ರೋಹಿಣಿ ಸಿಂಧೂರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಅಧಿಕಾರ ಸ್ವೀಕಾರಕ್ಕೂ ಮುನ್ನ ಚಾಮುಂಡಿ ಸನ್ನಿಧಿಗೆ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. 

ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಇಂದು (ಮಂಗಳವಾರ) ಅಧಿಕಾರ ಸ್ವೀಕರಿಸಿದರು.
undefined
ಅಧಿಕಾರ ಸ್ವೀಕಾರಕ್ಕೂ ಮುನ್ನ ಚಾಮುಂಡಿ ಸನ್ನಿಧಿಗೆ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು.
undefined
ಈ ವೇಳೆ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಸಹ ಜತೆಯಲ್ಲಿದ್ದರು
undefined
ದೇವಸ್ಥಾನಕ್ಕೆ ಆಗಮಿಸಿದ ರೋಹಿಣಿ ಸಿಂಧೂರಿ ದಂಪತಿಯನ್ನುದೇವಸ್ಥಾನ ಆಡಳಿತ ಮಂಡಳಿಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಎಸ್. ಯತಿರಾಜ್ ಸಂಪತ್ ಕುಮಾರನ್, ವ್ಯವಸ್ಥಾಪಕ ಗೋವಿಂದರಾಜು ಹಾಗೂ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅವರು ಸ್ವಾಗತಿಸಿದರು.
undefined
ಈ ಹಿಂದಿನ ಡಿಸಿ ಬಿ. ಶರತ್​, ಮೈಸೂರಿನಲ್ಲೇ ಇದ್ದರೂ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥ್‌ ಸ್ವಾಮಿ ಅವರಿಂದ ರೋಹಿಣಿ ಸಿಂಧೂರಿ ಅವರಿಗೆ ಅಧಿಕಾರ ಹಸ್ತಾಂತರವಾಯಿತು. ಕಲಬುರಗಿಯಿಂದ ಒಂದು ತಿಂಗಳ ಹಿಂದಷ್ಟೇ ಮೈಸೂರಿಗೆ ವರ್ಗಾವಣೆಯಾಗಿದ್ದ ಶರತ್​ ಅವರನ್ನು ಮತ್ತೆ ವರ್ಗಾವಣೆ ಮಾಡಿರುವುದರಿಂದ ಅಸಮಾಧಾನಗೊಂಡಿದ್ದಾರೆಂದು ತಿಳಿದುಬಂದಿದೆ
undefined
ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲಾಧಿಕಾರಿಯಾಗುವ ಮುನ್ನ ಇದ್ದ ಶರತ್‌ ಅವರನ್ನು ವರ್ಗಾವಣೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲೆಯ ಜನರು ಬಹಿರಂಗವಾಗಿ ತಮ್ಮ ಅಸಮಾಧನವನ್ನು ಹೊರಹಾಕಿದ್ದಾರೆ.
undefined
ಕನ್ನಡಿಗರು ಐಎಎಸ್‌ ಆಗಿ ಇರೋದು ಕಡಿಮೆ, ಇಂತಹ ವೇಳೆಯಲ್ಲಿ ಕನ್ನಡಿಗನನ್ನು ಬರೀ ಒಂದೇ ತಿಂಗಳಿನಲ್ಲಿ ಶಂಕರ್‌ ಅವರನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ಮೈಸೂರಿನಿಂದ ತೆಗೆದಿರುವುದು ಸರಿ ಅಲ್ಲ ಎಂದಿದ್ದಾರೆ.
undefined
click me!