ಡಿಜಿಟಲ್ ಪಾವತಿ ವಂಚನೆ:
ಡಿಜಿಟಲ್ ಪಾವತಿಯಲ್ಲಿ UPI ಮೂಲಕ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಈ ಹಬ್ಬದ ತಿಂಗಳಲ್ಲಿ ಡಿಜಿಟಲ್ ಪಾವತಿ ವಂಚನೆಯ ವಿರುದ್ಧ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಡಿಜಿಟಲ್ ಪಾವತಿ ವೇಳೆ ವಂಚನೆ ತಪ್ಪಿಸಲು ಕೆಲವು ಸಲಹೆಗಳನ್ನು ನೀಡಿದೆ. ವಂಚಕರು ಆನ್‌ಲೈನ್ ಮೂಲಕ ಹೇಗೆ ವಂಚಿಸುತ್ತಾರೆ? ಗ್ರಾಹಕರು ವಹಿಸಬೇಕಾ ಮುನ್ನೆಚ್ಚರಿಕೆ ಕ್ರಮಗಳೇನು?
ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳಿಂದಾಗಿ, ಜನರು ಹಬ್ಬದ ಸಮಯದಲ್ಲಿ ಭಾರಿ ಖರೀದಿಗಳನ್ನು ಮಾಡುತ್ತಾರೆ. ಈ ಪೈಪೋಟಿಯಲ್ಲಿ, ಅನೇಕ ಬಾರಿ ಬಳಕೆದಾರರು ಅಮೆಜಾನ್, ಫ್ಲಿಪ್ ಕಾರ್ಟ್ ಹೆಸರಲ್ಲಿ ನಕಲಿ ವೆಬ್‌ಸೈಟ್‌ಗಳಿರಬಹುದು. ಆ ಬಗ್ಗೆ ಜನರು ಪರಿಶೀಲಿಸುವುದನ್ನು ನಿರ್ಲಕ್ಷಿಸಬಹುದು. ಹೀಗಾಗಿ NPCI ಬಳಕೆದಾರರಿಗೆ ಅಂತಹ ಮಾರಾಟಗಾರರ ಬಗ್ಗೆ ಮತ್ತು ಅವರ ವ್ಯವಹಾರವು ವಿಶ್ವಾಸಾರ್ಹವಲ್ಲದವರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಲು ಸಲಹೆ ನೀಡಿದೆ.