ಮೋದಿಗೆ ರಾಜಾತಿಥ್ಯ, ಅರಮನೆಯಲ್ಲಿ ಪ್ರಧಾನಿಗೆ ಬಗೆ-ಬಗೆಯ ತಿಂಡಿ

First Published | Jun 21, 2022, 2:06 PM IST

ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ  ಮಾಡಿದ್ರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟದಲ್ಲಿ ಭಾಗಿಯಾದ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು. ತಿಂಡಿ ಮೆನುನಲ್ಲಿ ಏನೆಲ್ಲಾ ಇತ್ತು ಎನ್ನವ ಮಾಹಿತಿ ಇಲ್ಲಿದೆ ನೋಡಿ.

ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ  ಮಾಡಿದ್ರು. 

 ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟದಲ್ಲಿ ಪ್ರಧಾನಿ ನರೇಂದ್ರ ಮೊದಿ ಭಾಗಿಯಾದರು

Latest Videos


ಸ್ಪೆಷಲ್​ ಮೈಸೂರು​ ಪಾಕ್​, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು ಸೇರಿದಂತೆ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಸಿದ್ಧಪಡಿಸಲಾಗಿತ್ತು.

ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು.

ಪ್ರಧಾನಿಗಾಗಿ ಶುದ್ಧ ಸಸ್ಯಹಾರದ ಖಾದ್ಯಗಳನ್ನು ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ತಯಾರಿಸಲಾಗಿತ್ತು.

ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸತತ 45 ನಿಮಿಷ ಕಾಲ ಸಾವಿರಾರು ಯೋಗಪಟುಗಳ ಜತೆ ಯೋಗ ಪ್ರದರ್ಶನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಅಂಬಾವಿಲಾಸ ಅರಮನೆಗೆ ತೆರಳಿದ ಮೋದಿ ಅವರು ರಾಜಮನೆತನದ ಆತಿಥ್ಯ ಸ್ವೀಕರಿಸಿದರು. 

ಪ್ರಧಾನಿ ನರೇಂದ್ರ ಮೋದಿಗಾಗಿ ಸ್ಪೆಷಲ್​ ಮೈಸೂರು​ ಪಾಕ್​, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು​ ಕೂಡ ಈ ಮೆನುವಿನಲ್ಲಿತ್ತು.

ರಾಜವಂಶಸ್ಥರ ಜತೆ ಪ್ರಧಾನಿ ಉಪಹಾರ ಸೇವಿದ್ರು. ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹ ಇದ್ದರು.

ಅರಮನೆಯಲ್ಲಿ ನರೇಂದ್ರ ಮೋದಿ ಅವರು ಮೈಸೂರು ರಾಜವಂಶದ ಜೊತೆ ಒಂದು ಫೋಟ್ ತೆಗೆಸಿಕೊಂಡರು.

ಉಪಹಾರಕ್ಕೆ ಅರಮನೆಗೆ ಆಗಮಿಸಿದ ನರೇಂದ್ರ ಮೊದಿ ಅವರು ಯದವೀರ್ ಅವರ ಪುತ್ರ ಆದ್ಯವೀರ್‌ಗೆ ಹೂವಿನ ಹಾರ ಹಾಕಿದರು.

ಆಹ್ವಾನದ ಮೇರೆ ಅರಮನೆಗೆ ಆಗಮಿಸಿ ಉಪಹಾರ ಸೇವಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಅ ಅವರಿಗೆ ಚಾಮುಂಡೇಶ್ವರಿ ಫೋಟೋ ಫ್ರೇಮ್ ನೀಡಿ ಬೀಳ್ಕೊಟ್ಟರು.

click me!