ಕಾಸರಗೋಡು ನಗರಕ್ಕಿಂತ 5-6 ಕಿ.ಮೀ. ದೂರದ ವಿದ್ಯಾನಗರ ನೆಲಕ್ಕಳದಲ್ಲಿದೆ ರೇಡಿಯಾಲಜಿಸ್ಟ್ ಡಾ.ಉದಯಶಂಕರ ಭಟ್ ಮನೆ.
ಅವರ ಮನೆ ಪರಿಸರದಲ್ಲಿ ಕೃಷಿ ಕಾರ್ಯ ನಡೆಸದ ಸುಮಾರು 30 ಎಕರೆಯಷ್ಟು ಗದ್ದೆ ಸಹಿತ ಹಡಿಲು ಭೂಮಿಯೂ ಇದೆ.
ಅಲ್ಲಿ ನವಿಲುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ.
ಸುಮಾರು 10 ವರ್ಷಗಳಿಂದೀಚೆಗೆ ನವಿಲುಗಳ ಸಂಸಾರ ಇದೇ ಪರಿಸರದಲ್ಲಿ ಬೀಡು ಬಿಟ್ಟಿದೆ.
ಲಾಕ್ ಡೌನ್ ನ ಈ ಬಿಗುವಿನ ಪರಿಸ್ಥಿತಿಯಲ್ಲಿ ಭಾನುವಾರ ಬೆಳಗ್ಗೆ ವೈದ್ಯರ ಮನೆ ಟೆರೇಸಿನಲ್ಲಿ ನವಿಲಿನ ನರ್ತನ ಕಂಡು ಬಂದದ್ದು ಹೀಗೆ...
ರಾಷ್ಟ್ರ ಪಕ್ಷಿ ಎನ್ನುವ ಕಾರಣಕ್ಕೆ ನವಿಲುಗಳನ್ನು ಹಿಡಿಯುವುದು ಅಪರಾಧ. ಹಾಗಾಗಿ ಕೆಲವೆಡೆ ಇದರ ಸಂತತಿ ಹೆಚ್ಚಾಗುತ್ತಿದೆ.
ಡಾ.ಉದಯಶಂಕರ ಭಟ್ ಅವರ ಮನೆ ಟೆರೇಸು, ಗಾರ್ಡನ್ ಗಳಲ್ಲೂ ನವಿಲುಗಳು ಪ್ರತಿನಿತ್ಯ ಓಡಾಡುತ್ತಿರುತ್ತವೆ.
ಯಾವಾಗಲೂ 10-12 ನವಿಲುಗಳು ಇಲ್ಲಿ ಓಡಾಡುತ್ತಿರುತ್ತವೆ.
ಹಸಿರ ಮಧ್ಯೆ ರಾಷ್ಟ್ರ ಪಕ್ಷಿ ಸೌಂದರ್ಯ ಸವಿಯುವುದೇ ಸುಖ.
ಗರಿ ಬಿಚ್ಚು ತನ್ನ ಸೌಂದರ್ಯದ ಅನಾವರಣ ಮಾಡೋ ಮಯೂರ.
ಮನಸ್ಸಿಗೆ ಏನೋ ಮುದ ಈ ನವಿಲ ನರ್ತನ ನೋಡಿದರೆ.
Suvarna News