ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದ ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ದಂಪತಿ!

First Published | Jun 27, 2022, 11:56 AM IST

ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಮ್ಮ ಧರ್ಮಪತ್ನಿ ತ್ರಿಷಿಕಾ ಮತ್ತು ಕುಟುಂಬದ ಇನ್ನಿಬ್ಬರು ಸದಸ್ಯರೊಂದಿಗೆ ಸೋಮವಾರ ಬೆಳಗ್ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ರಾಜವಂಶಸ್ಥ ದಂಪತಿ ಬೆಟ್ಟದ 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆದಿದ್ದಾರೆಂಬುವುದು ಉಲ್ಲೇಖನೀಯ. ಹನುಮನಿಗೆ ಪೂಜೆ ಸಲ್ಲಿಸಿದ ಬಳಿಕ ಯುದುವೀರ್ ಅಲ್ಲಿನ ಅರ್ಚಕರು ಮತ್ತು ದೇವಸ್ಥಾನ ಟ್ರಸ್ಟ್ ನ ಕೆಲ ಸದಸ್ಯರೊಂದಿಗೆ ಒಂದೆರಡು ನಿಮಿಷಗಳ ಕಾಲ ಮಾತನಾಡಿದ್ದಾರೆ. ಹಂಪಿಗೆ ಭೇಟಿ ನೀಡಿದ್ದ ಕುಟುಂಬವು ಅಲ್ಲಿಂದ ಅಂಜನಾದ್ರಿ ಬೆಟ್ಟಕ್ಕೆ ತೆರಳಿದೆ.
 

ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್ ಅಂಜನಾದ್ರಿಗೆ ಭೇಟಿ. ಪತ್ನಿ ತ್ರಿಷಿಕಾರೊಂದಿಗೆ ಆಗಮಿಸಿದ ಯಧುವೀರ ಒಡೆಯರ್. 575 ಮೆಟ್ಟಿಲು ಹತ್ತಿ ಆಂಜನೇಯನ ದರ್ಶನ ಪಡೆದ ದಂಪತಿ, ಕುಟುಂಬದ ಇನ್ನಿಬ್ಬರು ಸದಸ್ಯರೂ ಭಾಗಿ.

Anjanedri

 ಸೋಮವಾರ ಬೆಳಗ್ಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಭೇಟಿ, ಆಂಜನೇಯನ ಸಮ್ಮುಖದಲ್ಲಿ ಸ್ವಲ್ಪ ಸಮಯ ಕಳೆದ ಯದುವೀರ ದಂಪತಿ. ಈ ಹಿಂದೆಯೂ ಅನೇಕ ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂಬುವುದು ಉಲ್ಲೇಖನೀಯ. 

Latest Videos


Anjanedri

ಕೆಲ ದಿನಗಳ ಹಿಂದಷ್ಟೇ ಅಂಜನೇದ್ರಿ ಬೆಟ್ಟ ಭಾರೀ ವಿವಾದ ಸೃಷ್ಟಿಸಿತ್ತು. ಆಂಜನೇಯನ ಜನ್ಮಸ್ಥಳದ ವಿಚಾರವಾಗಿ ಈ ವಿವಾದ ಭುಗಿಲೆದ್ದಿತ್ತು ಎಂಬುವುದು ಉಲ್ಲೇಖನೀಯ. ಈ ಹಿಂದೆ ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನ ಜನ್ಮವಾಗಿದೆ ಎಂದು ಟಿಟಿಡಿ ಕ್ಯಾತೆ ತಗೆದಿತ್ತು. ಹೀಗಿರುವಾಗಲೇ ಅತ್ತ ಮಹಾರಾಷ್ಟ್ರ ಕಿರಿಕ್ ತೆಗೆದಿದ್ದು, ಅಂಜನೇರಿ ಆಂಜನೇಯನ ಜನ್ಮಸ್ಥಳ ಎಂದು ವಾದಿಸಿತ್ತು. ಈ ನಡುವೆ ನಮ್ಮ‌ವರು ಮಾತ್ರ ಅಂಜನಾದ್ರಿಯೇ ಆಂಜನೇಯನ‌ ಜನ್ಮಸ್ಥಳ ಎಂದು ಪ್ರತಿಪಾದಿಸಿದ್ದರು. 

Anjanadri

ಆಂಜನೇಯನ ಜನ್ಮಸ್ಥಳದ ವಿವಾದವೇನು?


ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪ್ರದೇಶ ಅಂದರೆ ತಟ್ಟನೆ ನೆನಪಾಗುವುದು ಆಂಜನೇಯನ ಜನ್ಮಸ್ಥಳ ಎಂದು. ಪುರಾಣ ಕಾಲದಿಂದಲೂ ಅಂಜನಾದ್ರಿಯಲ್ಲಿಯೇ ಆಂಜನೇಯನ ಜನ್ಮವಾಗಿದೆ ಎನ್ನುವ ಐತಿಹ್ಯ ಇದೆ. 

anjanadri betta

ಅಷ್ಟೇ ಅಲ್ಲ ಜನರ ನಂಬಿಕೆಯೂ ಸಹ ಇದ್ದು, ಇತಿಹಾಸ ತಜ್ಞರ ಪ್ರಕಾರವೂ ಸಜ ಕಿಷ್ಕಿಂದಾ ಪ್ರದೇಶವಾದ ಅಂಜನಾದ್ರಿಯೇ ಆಂಜನೇಯಮ ಜನ್ಮಸ್ಥಳ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳದ ಕುರಿತು ಪಕ್ಕದ ರಾಜ್ಯಗಳು ಕ್ಯಾತೆ ತೆಗೆಯುತ್ತಿವೆ

ಮೊದಲನೆಯದಾಗಿ ಆಂಧ್ರಪ್ರದೇಶದ ತಿರುಪತಿ ಬಳಿ ಇರುವ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಎಂದು ಟಿಟಿಡಿ ವಾದಿಸಿತ್ತು. ಅಷ್ಟೇ ಅಲ್ಲ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಲು ಟಿಟಿಡಿ ಮುಂದಾಗಿದೆ. ಇದು ಮುಗಿಯುವ ಹೊತ್ತಿಗೆ ಇದೀಗ ಮಹಾರಾಷ್ಟ್ರ ರಾಜ್ಯವೂ ಸಹ ಆಂಜನೇಯನ ಜನ್ಮಸ್ಥಳ ಅಂಜನೇರಿ ಎಂದು ಕ್ಯಾತೆ ತೆಗೆದಿದೆ.‌

ಆದರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ರಾಜ್ಯಗಳ ಈ ವಾದಕ್ಕೆ ರಾಜ್ಯದ ಇತಿಹಾಸಕಾರರು ವಿರೋಧ ವ್ಯಕ್ತಪಡಿಸಿದ್ದು, ಆಂಜನೇಯನ ಜನ್ಮಸ್ಥಳ ನಮ್ಮ‌ ಅಂಜನಾದ್ರಿಯೇ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಈ ವಿವಾದ ಹುಟ್ಟಿಕೊಂಡಿತ್ತು. 

ಜನ್ಮಸ್ಥಳದ ಕುರಿತು ಇರುವ ಐತಿಹ್ಯಗಳು

ಇನ್ನು ಪೌರಾಣಿಕ, ಐತಿಹಾಸಿಕ, ಪ್ರಾಕೃತಿಕ ಕುರುಹುಗಳು ಕರ್ನಾಟಕವೇ ಆಂಜನೇಯ ಜನ್ಮ ಸ್ಥಳ ಎಂದು ದಾಖಲಾಗಿದೆ. ದೇಶ ಇತರ ಕಡೆ ಆಂಜ‌ನೇಯನ ಜನ್ಮ ಸ್ಥಳ ಎಂದು ಹೇಳುತ್ತಾರೆ. ಆದರೆ ಕಿಷ್ಕಿಂದಾ ಇರುವ ಸ್ಥಳ ‌ಹಂಪಿ ಪರಿಸರವಾಗಿದ್ದು,ನಮ್ಮ ಆಂಜನೇಯನನ್ನು ಅಲ್ಲಿ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೇಂದ್ರ ಸರಕಾರವೇ ರಾಮಾಸರ್ಕ್ಯೂಟ್ ನಲ್ಲಿ ನಮ್ಮ ಅಂಜನಾದ್ರಿ ಸೇರಿದೆ ಮುಖ್ಯಮಂತ್ರಿಗಳು ಅಂಜನಾದ್ರಿ ಅಭಿವೃದ್ಧಿ ಯೋಜ‌ನೆ ಘೋಷಿಸಿದ್ದಾರೆ. ಏನೇ ಹೇಳಿದರೂ ಆಂಜನೇಯ ಹುಟ್ಟಿದ್ದು ನಮ್ಮ ಜಿಲ್ಲೆಯಲ್ಲಿ ಎಂಬು ಸಾಬೀತಾಗಿದೆ

click me!