ಆರದ ಸಂ'ದೀಪ': ನಿಮ್ಮ ನೆನಪೆಂಬ ಹೆಮ್ಮೆಯೇ ನಮ್ಮ ಭವಿಷ್ಯಕ್ಕೆ ದಾರಿದೀಪ!

First Published | Nov 28, 2019, 3:48 PM IST

ಮೇಜರ್​​ ಸಂದೀಪ್​​ ಉನ್ನಿಕೃಷ್ಣನ್​ ಎಂದರೆ ಯಾರಿಗೆ ಗೊತ್ತಿಲ್ಲ? ಈ ಹುತಾತ್ಮ ಯೋಧನ ಹೆಸರು ಕೇಳಿದ ಕೂಡಲೇ ದೇಶದ ಪ್ರತಿಯೊಬ್ಬ ಭಾರತೀಯನ ಮೈಯೆಲ್ಲಾ ರೋಮಾಂಚನ ಆಗುತ್ತದೆ. ದುರಂತ ಅಂದರೆ, 2008ರಲ್ಲಿ ಮುಂಬೈನ ತಾಜ್​​ ಹೋಟೆಲ್​​​ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೇ ಎದುರಾಳಿಗಳನ್ನು ನೆಲಕ್ಕೆ ಹೊಡೆದುರುಳಿಸಿದ ಸಂದೀಪ್​​ ಉನ್ನಿಕೃಷ್ಣನ್​ ಅದೇ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ, ಹುತಾತ್ಮರಾದರು. ಇಂದು ನವೆಂಬರ್ 28 ಮೇಜರ್​​ ಸಂದೀಪ್​​ ಉನ್ನಿಕೃಷ್ಣನ್​ ಪುಣ್ಯತಿಥಿ. ಹೀಗಿರುವಾಗ ಅವರ ಕುರಿತು ಗೊತ್ತಿರದ ಕೆಲ ವಿಚಾರಗಳು ಇಲ್ಲಿವೆ.

NSG ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ 11 ವರ್ಷಗಳ ಹಿಂದೆ ತಾಜ್ ಹೋಟೆಲ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವ ವೇಳೆ ಗುಂಡೇಟು ತಗುಲಿ ಹುತಾತ್ಮರಾದರು.
1977ರ ಮಾರ್ಚ್ 15 ರಂದು ಜನಿಸಿದ ಸಂದೀಪ್ ಉನ್ನಿಕೃಷ್ಣನ್ ಮೂಲತಃ ಕೇರಳದವರು.
Tap to resize

ನಿವೃತ್ತ ಇಸ್ರೋ ಅಧಿಕಾರಿ ಉನ್ನಿಕೃಷ್ಣನ್ ಹಾಗೂ ಧನಲಕ್ಷ್ಮಿ ದಂಪತಿ ಮಗ ಸಂದೀಪ್.
ಬಾಲ್ಯದಲ್ಲೇ ತಾನು ಸೇನೆಗೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು ಮೇಜರ್ ಸಂದೀಪ್.
ಬೆಂಗಳೂರಿನ ಫ್ರಾಂಕ್ ಆ್ಯಂಟನಿ ಪಬ್ಲಿಕ್ ಸ್ಕೂಲ್‌ಲ್ಲಿ ಶಿಕ್ಷಣ ಪಡೆದ ಸಂದೀಪ್ ಉನ್ನಿಕೃಷ್ಣನ್ ಅತ್ಯಂತ ಚುರುಕು ವಿದ್ಯಾರ್ಥಿಯಾಗಿದ್ದರು.
ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಸಂದೀಪ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಸಂದೀಪ್ ಉನ್ನಿಕೃಷ್ಣನ್
ಸಂದೀಪ್ ಅತ್ಯಂತ ಸರಳ ಹಾಗೂ ಸ್ನೇಹಜೀವಿ ವ್ಯಕ್ತಿ. ಸ್ನೇಹಿತನ ಬರ್ತ್‌ಡೇ ಪಾರ್ಟಿಯಲ್ಲಿ ಸಂದೀಪ್.
1995ರಲ್ಲಿ NDA ಪರೀಕ್ಷೆ ಬರೆದು ಕೆಡೆಟ್ ಆಗಿ ಪುಣೆಯಲ್ಲಿ ಭಾರತೀಯ ಸೇನೆಗೆ ಸೇರಿದ್ದ ಸಂದೀಪ್ ಉನ್ನಿಕೃಷ್ಣನ್. ಅವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಸೇನಾ ಕೇಂದ್ರದಲ್ಲೇ ತರಬೇತಿ ಪಡೆದಿದ್ದರು.
ಅಪ್ರತಿ ಮದೇಶಭಕ್ತ ಹಾಗೂ ಕೊಡುಗೈ ದಾನಿಯಾಗಿದ್ದ ಸಂದೀಪ್ ಉನ್ನಿಕೃಷ್ಣನ್
ಒಂಭತ್ತು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಣವನ್ನೆಲ್ಲಾ ಅನಾಥ ಆಶ್ರಮ ಹಾಗೂ ತನ್ನ ಬೆಟಾಲಿಯನ್‌ನ ಬಡ ಯೋಧರಿಗೆ ನೀಡುತ್ತಿದ್ದ ಸಂದೀಪ್ ಉನ್ನಿಕೃಷ್ಣನ್
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮನೆಯಲ್ಲಿ ತಿಳಿಸದೆ ಏಕಾಏಕಿ ಬರುತ್ತಿದ್ದರು. ಕಾರಣ ಕೇಳಿದರೆ ಇತರ ಸೈನಿಕರಿಗೆ ರಜೆಯಲ್ಲಿದ್ದರೆ ತಿಳಿಸಿದ ಸಮಯಕ್ಕೆ ಬರಲಾಗುವುದಿಲ್ಲ. ಹೀಗಾಗಿ ಏಕಾಏಕಿ ಬರುತ್ತೇನೆ ಎಂಬುವುದಷ್ಟೇ ಉತ್ತರ
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಗೆಳೆಯರೊಂದಿಗೆ ಸಂದೀಪ್ ಉನ್ನಿಕೃಷ್ಣನ್
ಎಲ್ಲರೊಂದಿಗೂ ಲವಲವಿಕೆಯಿಂದ ಬೆರೆತು, ನಗಿಸುತ್ತಿದ್ದ ಸಂದೀಪ್
ಸೇನಾ ತರಬೇತಿ ಪಡೆಯುತ್ತಿದ್ದಾಗ ಗೆಳೆಯನೊಂದಿಗೆ ಸಂದೀಪ್ ಉನ್ನಿಕೃಷ್ಣನ್
ರಜೆಯಲ್ಲಿ ಬಂದಿದ್ದ ವೇಳೆ ತೆಗೆದ ಚಿತ್ರ
1999ರಲ್ಲಿ ಸಂದೀಪ್ ಉನ್ನಿಕೃಷ್ಣನ್ ಬಿಹಾರ್ ರೆಜಿಮೆಂಟ್‌ನ 7ನೇ ಬೆಟಾಲಿಯನ್‌ಗೆ ಲೆಫ್ಟಿನೆಂಟ್‌ ಆದರು.
ಜಮ್ಮು ಕಾಶ್ಮೀರ, ರಾಜಸ್ಥಾನ ಸೇರಿದಂತೆ ದೇಶದ ನಾನಾ ಕಡೆ ಅವರು ಸೇವೆ ಸಲ್ಲಿಸಿದ್ದಾರೆ. ಕಮಾಂಡೋಗಳಿಗೆ ತರಬೇತಿ ನೀಡುತ್ತಿರುವ ಸಂದೀಪ್ ಉನ್ನಿಕೃಷ್ಣನ್
1999ರ ಜುಲೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಆಪರೇಷನ್ ವಿಜಯ್‌ನಲ್ಲೂ ಸಂದೀಪ್ ಉನ್ನಿಕೃಷ್ಣನ್ ಭಾಗಿಯಾಗಿದ್ದರು.
ತನ್ನ ಮೇಲಾಧಿಕಾರಿಗಳೊಂದಿಗೆ ಸಂದೀಪ್ ಉನ್ನಿಕೃಷ್ಣನ್
ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಮೇಲೆ ನಡೆದಿದ್ದ ದಾಳಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಸೈನಿಕರಿಗೆ ಸೂಚನೆ ನಿಡುತ್ತಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್
'ಯಾರೂ ಒಳಗೆ ಬರಬೇಡಿ, ನಾನಿವರನ್ನು ನೋಡಿಕೊಳ್ಳುತ್ತೇನೆ..' ಎಂಬ ಆದೇಶ ನೀಡಿ ಉಗ್ರರ ವಿರುದ್ಧ ಎದೆಯೊಡ್ಡಿ ನಿಂತು ಅನೇಕರನ್ನು ರಕ್ಷಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮರಳಿ ಬರಲೇ ಇಲ್ಲ.
ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅಂತಿಮ ದರ್ಶನದ ಒಂದು ದೃಶ್ಯ. ದುಃಖದ ಮಡುವಿನಲ್ಲೂ 'ಸಂದೀಪ್ ಉನ್ನಿಕೃಷ್ಣನ್ ಅಮರ್ ರಹೇ' ಎಂಬ ಘೋಷವಾಕ್ಯ ಎಲ್ಲರ ಬಾಯಲ್ಲೂ ಅನುಕರಿಸಿತ್ತು
ಪುತ್ರನನ್ನು ಕಳೆದುಕೊಂಡ ದುಖಃಕ್ಕಿಂತ, "ಒಬ್ಬ ವೀರ ಯೋಧನನ್ನು ನಾಡಿಗೆ ನೀಡಿದ ಹೆಮ್ಮೆ" ಇದು ಅಪ್ರತಿಮ ದೇಶಭಕ್ತ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆತ್ತವರ ಮಾತು.
ದೇಶದ ನಾಳೆಗಾಗಿ ತನ್ನ ಭವಿಷ್ಯವನ್ನು ಮುಡಿಪಾಗಿಟ್ಟ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಲಿದಾನ ಈ ದೇಶ ಎಂದೆಂದಿಗೂ ನೆನಪಿಟ್ಟುಕೊಳ್ಳುತ್ತದೆ.
ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ.
ತಾನು ಕಂಡ ಹಲವಾರು ಕನಸುಗಳಲ್ಲಿ ದೇಶದ ಭದ್ರತೆಗೆ ಆದ್ಯತೆ ನೀಡಿ ಉಗ್ರರನ್ನು ಸದೆಬಡಿದ ಉನ್ನಿಕೃಷ್ಣನ್ ನೆನಪು ಯಾವತ್ತಿಗೂ ಅಜರಾಮರ
ಪ್ರತಿ ವರ್ಷ ಮಾರ್ಚ್ 15 ರಂದು ಪ್ರತಿ ವರ್ಷವೂ ಸಂದೀಪ್ ಉನ್ನಿಕೃಷ್ಣನ್ ಅಭಿಮಾನಿಗಳೆಲ್ಲಾ ಸೇರಿ ಅವರ ಹುಟ್ಟುಹಬ್ಬ ಆಚರಿಸುತ್ತಾರೆ.
31 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ಸಂದೀಪ್ ಉನ್ನಿಕೃಷ್ಣನ್‌ರವರಿಗೆ ಅಶೋಕ ಚಕ್ರ ನೀಡಿ ಗೌರವಿಸಲಾಯ್ತು. 2009ರ ಜನವರಿ 26ರಂದು, ಅಂದಿನ ರಾಷ್ಟ್ರಪತಿ ಪ್ರತಿಭಾ ಪಟೇಲ್‌ರಿಂದ ದೇಶದ ಅತ್ಯುನ್ನತ ಶಾಂತಿ ಪ್ರಶಸ್ತಿ ಅಶೋಕ ಚಕ್ರಸ್ವೀಕರಿಸಿದ ಸಂದೀಪ್ ತಾಯಿ.

Latest Videos

click me!