ಪತ್ನಿ ಜೊತೆ ಸಂಸದ ತೇಜಸ್ವಿ ಸೂರ್ಯ 10 ಕಿ.ಮೀ ಓಟ: ಬೆಂಗಳೂರಿನ ರಸ್ತೆಯಲ್ಲಿ ಮಿಂಚಿದ 'ಪವರ್ ಕಪಲ್'!

Published : Apr 26, 2026, 04:04 PM IST

ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವರ್ಲ್ಡ್ 10ಕೆ ಓಟದಲ್ಲಿ ಸಂಸದ ತೇಜಸ್ವಿ ಸೂರ್ಯ ತಮ್ಮ ಪತ್ನಿ ಶಿವಶ್ರೀ ಸ್ಕಂದ ಅವರೊಂದಿಗೆ ಭಾಗವಹಿಸಿದರು. ತಮ್ಮ ಪತ್ನಿಯ ಮೊದಲ 10ಕೆ ಓಟದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಬೆಂಗಳೂರು ಭಾರತದ 'ಓಟದ ರಾಜಧಾನಿ'ಯಾಗಿ ಬೆಳೆಯುತ್ತಿರುವುದನ್ನು ಶ್ಲಾಘಿಸಿದರು.

PREV
16
ಟಿಸಿಎಸ್ ವರ್ಲ್ಡ್ 10ಕೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ತಂತ್ರಜ್ಞಾನದ ರಾಜಧಾನಿಯಲ್ಲ, ಅದು ಈಗ ಭಾರತದ 'ಓಟದ ರಾಜಧಾನಿ' (Running Capital) ಆಗಿ ಹೊರಹೊಮ್ಮುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾನುವಾರ ನಡೆದ ಪ್ರತಿಷ್ಠಿತ 'ಟಿಸಿಎಸ್ ವರ್ಲ್ಡ್ 10ಕೆ' (TCS World 10K) ಓಟದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಭಾಗವಹಿಸಿ ಸಾವಿರಾರು ಜನರನ್ನು ಹುರಿದುಂಬಿಸಿದರು. ಈ ಬಾರಿ ಅವರ ಓಟಕ್ಕೆ ವಿಶೇಷ ಮೆರುಗು ನೀಡಿದ್ದು ಅವರ ಪತ್ನಿ ಶಿವಶ್ರೀ ಸ್ಕಂದ.

26
ಪತ್ನಿಯ ಮೊದಲ 10ಕೆ ಓಟ - ಹೆಮ್ಮೆ ಹಂಚಿಕೊಂಡ ತೇಜಸ್ವಿ:

ಈ ಬಾರಿಯ ಓಟ ತೇಜಸ್ವಿ ಸೂರ್ಯ ಅವರಿಗೆ ವೈಯಕ್ತಿಕವಾಗಿ ಬಹಳ ವಿಶೇಷವಾಗಿತ್ತು. ಏಕೆಂದರೆ ಇದು ಅವರ ಪತ್ನಿ ಶಿವಶ್ರೀ ಸ್ಕಂದ ಅವರ ಮೊದಲ 10 ಕಿಲೋಮೀಟರ್ ಓಟವಾಗಿತ್ತು. ಓಟ ಮುಗಿಸಿದ ನಂತರ ಪತ್ನಿಯೊಂದಿಗೆ ಇರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ‘ಈ ಬಾರಿಯ ಓಟ ತುಂಬಾ ವಿಶೇಷ.

36
ಶಿವಶ್ರೀ ಸ್ಕಂದ ಅವರ ಮೊದಲ 10ಕೆ ರನ್

ಇದು ನನ್ನ ಪತ್ನಿ ಶಿವಶ್ರೀ ಸ್ಕಂದ ಅವರ ಮೊದಲ 10ಕೆ ರನ್. ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.

46
ಬೆಂಗಳೂರು: ಭಾರತದ ಓಟದ ರಾಜಧಾನಿ:

ಓಟದ ನಂತರ ಮಾತನಾಡಿದ ಸಂಸದರು, ಈ ಈವೆಂಟ್‌ನಲ್ಲಿ ಸುಮಾರು 30,000ಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದು ನಗರದ ಕ್ರೀಡಾ ಪ್ರೇಮವನ್ನು ಎತ್ತಿ ತೋರಿಸುತ್ತದೆ ಎಂದರು. "ನೂರಾರು ರನ್ ಕ್ಲಬ್‌ಗಳು ಮತ್ತು ಜಾಗತಿಕ ಮಟ್ಟದ ಸಹಭಾಗಿತ್ವವು ಬೆಂಗಳೂರು ಈಗ ಭಾರತದ ಓಟದ ರಾಜಧಾನಿಯಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿ. ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸ್ಟಾರ್ಟ್ ಲೈನ್‌ಗೆ ಬಂದು ನಿಂತ ಪ್ರತಿಯೊಬ್ಬರಿಗೂ ಅಭಿನಂದನೆಗಳು" ಎಂದು ಅವರು ಹರ್ಷ ವ್ಯಕ್ತಪಡಿಸಿದರು.

56
'ಯೂತ್ ಫಾರ್ ಸೇವಾ' ಮತ್ತು 'ಫಿಟ್ ಇಂಡಿಯಾ':

ತೇಜಸ್ವಿ ಸೂರ್ಯ ಅವರು ಕೇವಲ ವೈಯಕ್ತಿಕ ಫಿಟ್‌ನೆಸ್‌ಗಾಗಿ ಓಡುವುದಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಅವರು 'ಯೂತ್ ಫಾರ್ ಸೇವಾ' (Youth For Seva) ಎಂಬ ಎನ್‌ಜಿಒ ಪರವಾಗಿ ಓಟ ನಡೆಸಿದ್ದಾರೆ. ಈ ಸಂಸ್ಥೆಯು ಯುವ ವೃತ್ತಿಪರರನ್ನು ಸಮಾಜ ಸೇವೆಗೆ ಪ್ರೇರೇಪಿಸುತ್ತದೆ. ಓಟದಲ್ಲಿ ಜನರ ಈ ಪ್ರಮಾಣದ ಭಾಗವಹಿಸುವಿಕೆ ಪ್ರಧಾನಿ ಮೋದಿಯವರ 'ಫಿಟ್ ಇಂಡಿಯಾ' (Fit India) ಅಭಿಯಾನದ ಯಶಸ್ಸನ್ನು ಸಾರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

66
ಜಯನಗರ ಜಾಗ್ವಾರ್ಸ್ ಮತ್ತು ಟೀ ಶರ್ಟ್ ಲಾಂಚ್:

ಶನಿವಾರವಷ್ಟೇ ಸಂಸದರು ಬೆಂಗಳೂರಿನ ಹೆಸರಾಂತ ರನ್ನಿಂಗ್ ಕ್ಲಬ್ ಆಗಿರುವ 'ಜಯನಗರ ಜಾಗ್ವಾರ್ಸ್' (Jayanagar Jaguars) ಆಯೋಜಿಸಿದ್ದ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. "ಬೆಂಗಳೂರಿನಲ್ಲಿ ನೂರಾರು ರನ್ನಿಂಗ್ ಕ್ಲಬ್‌ಗಳಿದ್ದು, ಅವು ಕೇವಲ ಪ್ರೇರಣೆ ನೀಡುವುದು ಮಾತ್ರವಲ್ಲದೆ, ಜನರು ಫಿಟ್‌ನೆಸ್‌ನಲ್ಲಿ ಸ್ಥಿರವಾಗಿರಲು ರಚನಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತಿವೆ. ಜಯನಗರ ಜಾಗ್ವಾರ್ಸ್ ಈ ರನ್ನಿಂಗ್ ಕ್ರಾಂತಿಯ ಆರಂಭಿಕ ಸಂಸ್ಥೆಯಾಗಿದೆ" ಎಂದು ಅವರು ಕೊಂಡಾಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories