ಕೊಪ್ಪಳದ ಗವಿಮಠ ಶಿಕ್ಷಣಕ್ಕೆ ಹೆಸರುವಾಸಿಯಾದ ಮಠ, ಸಾವಿರಾರು ಮಕ್ಕಳು ಈ ಮಠದ ನೆರಳಲ್ಲಿ ವಿದ್ಯೆ ಕಲಿತಾರೆ. ಇಲ್ಲಿ ಸಾವಿರಾರು ಮಕ್ಕಳು ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ. ಇಂತಹ ಪವಿತ್ರ ಸ್ಥಳದಲ್ಲಿ ಪೂಜ್ಯ ಶ್ರೀಗಳ ಕೈಯಲ್ಲಿ ಮೊದಲ ಅಕ್ಷರ ಬರೆದ ಈ ಪುಠಾಣಿ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗ್ತಾರೆ ಸಮಾಜದ ಗಣ್ಯ ವ್ಯಕ್ತಿಗಳಾಗ್ತಾರೆ ಎನ್ನುವುದು ಈ ಪೊಷಕರ ನಂಬಿಕೆ ಯಾಗಿದೆ.
ವರದಿ - ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್