ಬರೋಬ್ಬರಿ 1 ಕೋಟಿ ಲೀಟರ್ ಗಡಿ ದಾಟಿ ಕೆಎಂಎಫ್ ಹಾಲು ಸಂಗ್ರಹದಲ್ಲಿ ದಾಖಲೆ!

Published : Jun 03, 2025, 03:12 PM ISTUpdated : Jun 03, 2025, 03:13 PM IST

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ದಿನಕ್ಕೆ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಮುಂಗಾರು ಪೂರ್ವ ಮಳೆ ಮತ್ತು ಹಸಿರು ಚಾರದ ಲಭ್ಯತೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಕೆಎಂಎಫ್ 18 ಹೊಸ ಬಗೆಯ ಕೇಕ್ ಮತ್ತು ಮಫಿನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

PREV
15

ಕೆಎಂಎಫ್ (ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ) ರಾಜ್ಯದ ಹಾಲು ಉತ್ಪಾದನೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ರಾಜ್ಯಾದ್ಯಂತ ಮತ್ತೆ ಹಾಲಿನ ಹೊಳೆ ಹರಿದಿದೆ ಎನ್ನುವಂತೆ ನಂಬರ್ 1 ಸ್ಥಾನಕ್ಕೇರಿದೆ. ಇದು ಕರ್ನಾಟಕದ ಹಾಲಿನ ಉತ್ಪನ್ನದ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.

25

ಹಾಲು ಸಂಗ್ರಹದಲ್ಲಿ ದಾಖಲೆ ಮಟ್ಟದ ಏರಿಕೆ

ಮೇ 22ರಿಂದ ಪ್ರತಿ ದಿನದ ಹಾಲು ಸಂಗ್ರಹ 1 ಕೋಟಿ ಲೀಟರ್‌ನ್ನು ಮೀರಿದ್ದು, ದಿನಕ್ಕೆ ಸರಾಸರಿ 1.06 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕಳೆದೊಂದು ವರ್ಷದಲ್ಲಿ ಸಾಧಿಸಲಾದ ಅತ್ಯುನ್ನತ ಮಟ್ಟವಾಗಿದೆ. ಇದಕ್ಕೂ ಮೊದಲು, ಕಳೆದ ವರ್ಷ ಜೂನ್ 28 ರಂದು 1 ಕೋಟಿ ಲೀಟರ್ ಹಾಲು ಸಂಗ್ರಹದ ದಾಖಲೆಯು ಇತ್ತು. ಆ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತು. ಇದೀಗ ಒಂದು ವರ್ಷದ ನಂತರ ಮತ್ತೆ ಅದೇ ಮಟ್ಟದಲ್ಲಿ ಅದಕ್ಕಿಂತಲೂ ಹೆಚ್ಚು ಹಾಲು ಸಂಗ್ರಹ ಸಾಧ್ಯವಾಗಿದೆ.

35

ಹೆಚ್ಚಿದ ಉತ್ಪಾದನೆಗೆ ಕಾರಣವೇನು?

ಮುಂಗಾರು ಪೂರ್ವದಲ್ಲಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ಹೈನುಗಾರಿಕೆಗೆ ಉತ್ತಮ ಪರಿಸ್ಥಿತಿ ಉಂಟಾಗಿದೆ. ಹಸಿರು ಚಾರಲಭ್ಯತೆ ಮತ್ತು ಆರೋಗ್ಯಕರ ಹಸುಗಳಿಗೆ ಹಾಲು ಉತ್ಪಾದನೆಯಲ್ಲಿಯೂ ಸ್ಪಷ್ಟ ಏರಿಕೆಯಾಗಿದೆ ಎಂದು ಕೆಎಂಎಫ್ ತಿಳಿಸಿದೆ. ಕೆಎಂಎಫ್ ಇನ್ನು ಮುಂದೆ ಪ್ರತಿ ದಿನ 1 ಕೋಟಿ ಲೀಟರ್‌ ಹಾಲು ಸಂಗ್ರಹಿಸುವ ಗುರಿಯನ್ನು ಸಾಧಿಸಿರುವುದು ರಾಜ್ಯದ ಹೈನುಗಾರಿಕೆ ಕ್ಷೇತ್ರಕ್ಕೆ ಮಹತ್ವದ ಸಾಧನೆಯಾಗಿದೆ.

45

 18 ವಿಭಿನ್ನ ಮಾದರಿಯ ಕೇಕ್ ಹಾಗೂ ಮಫಿನ್‌ ಮಾರುಕಟ್ಟೆಗೆ

ಇನ್ನು ಕಳೆದ ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ, ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ನಂದಿನಿ ಬ್ರಾಂಡ್‌ನ 18 ವಿಭಿನ್ನ ಮಾದರಿಯ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಖಾಸಗಿ ಬ್ರಾಂಡ್‌ಗಳ ಮಫಿನ್‌ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್‌ಗಳು ಉತ್ತಮ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಿರುತ್ತವೆ ಎಂದು ಕೆಎಂಎಫ್ ತಿಳಿಸಿದೆ.

55

150ಕ್ಕಿಂತ ಹೆಚ್ಚು ಉತ್ಪನ್ನಗಳ ವ್ಯಾಪ್ತಿ

ಈಗಾಗಲೇ ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಸ್ನ್ಯಾಕ್‌ಗಳು, ನಂದಿನಿ ಹಲ್ವಾ, ಬ್ರೆಡ್, ಬನ್, ಐಸ್ ಕ್ರೀಂ ಸೇರಿದಂತೆ 150ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ತಂದಿವೆ.

ಐದು ರುಚಿಗಳ ಕಪ್ ಕೇಕ್

ಈ ಪ್ರಯುಕ್ತ ವೆನಿಲ್ಲಾ, ಚಾಕೊಲೇಟ್, ಪೈನಾಪಲ್, ಸ್ಟ್ರಾಬೆರಿ ಮತ್ತು ಮಾವಾ ರುಚಿಗಳಲ್ಲಿ ಐದು ವಿಭಿನ್ನ ಕಪ್ ಕೇಕ್‌ಗಳನ್ನೂ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಕೇಕ್ 150 ಗ್ರಾಂ ತೂಕದ ಪ್ಯಾಕ್‌ನಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಇಂಪಾದ ಹಾಗೂ ಗುಣಮಟ್ಟದ ನೂತನ ಆಯ್ಕೆಯಾಗಿ ಲಭ್ಯವಿದೆ.

Read more Photos on
click me!

Recommended Stories