ಚಂದ್ರಯಾನ 3 ಸಕ್ಸಸ್‌ಗಾಗಿ ದೇವಸ್ಥಾನ, ದರ್ಗಾಗಳಲ್ಲಿ ವಿಶೇಷ ಪೂಜೆ

First Published | Aug 23, 2023, 12:02 PM IST

ಬೆಂಗಳೂರು (ಆ.23): ಭಾರತದ ಚಂದ್ರಯಾನ-3 ವಿಕ್ರಮ ಲ್ಯಾಂಡರ್‌ ಇಂದು ಚಂದ್ರನ ಮೇಲೆ ಇಳಿಯಲಿದೆ. ಈ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಯಶಸ್ವಿಗಾಗಿ ದೇಶದ ಎಲ್ಲ ದೇವಸ್ಥಾನ, ಮಸೀದಿಗಳು, ದರ್ಗಾಗಳು ಹಾಗೂ ಚರ್ಚ್‌ಗಳಲ್ಲಿ ವಿಶೇಷವಾಗಿ ಪೂಜೆ ಹಾಗೂ ಪ್ರಾರ್ಥನೆಗಳನ್ನು ಮಾಡಲಾಯಿತು. ಕರ್ನಾಟಕದಲ್ಲಿ ಎಲ್ಲೆಲ್ಲಿ ವಿಶೇಷ ಪೂಜೆ ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದಿಂದ ಚಂದ್ರಯಾನ-3 ಉಡಾವಣೆ ಮಾಡಲಾಗಿದ್ದು, ವಿಕ್ರಮ ಲ್ಯಾಂಡರ್‌ ಇಂದು ಯಶಸ್ವಿಯಾಗಿ ಇಳಿಯಲೆಂದು ದೇವಸ್ಥಾನ, ದರ್ಗಾಗಳಲ್ಲು ಪೂಜೆ ಸಲ್ಲಿಸಲಾಯಿತು.

ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣೇಶ ದೇವಾಲಯದಲ್ಲಿ ವಿಷೇಶ ಪೂಜೆ ಸಲ್ಲಿಸಲಾಯಿತು. ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರದ ಜೊತೆ ವಿಶೇಷ ಪೂಜೆ ಮಾಡಿ ರಾಷ್ಟ್ರಧ್ವಜ ಹಿಡಿದು  ಜೈಕಾರ ಕುಗುತ್ತಾ ತಾಯಿ ಭಾರತ ಮಾತೆಯ ಪೋಟೋಗೆ ಪೂಜೆ ಸಲ್ಲಿಸಲಾಯಿತು. ಮತ್ತೊಂದೆಡೆ, ಗವಿ ಗಂಗಾದರೇಶ್ವರ ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ಅವರ ನೇತೃತ್ವದಲ್ಲಿ ಹೋಮ ಪೂಜೆ ನೆರವೇರಿಸಲಾಯಿತು. ಬನಶಂಕರಿ ದೇಗುಲ‌ ಸಮಿತಿಯಿಂದಲೂ ಚಂದ್ರಯಾನ-3 ರಾಕೆಟ್ ಮಾಡೆಲ್ ಹಾಗೂ ಅಮ್ಮನರ ಹಿಂದೆ ರಾಷ್ಟ್ರಧ್ವಜ‌ ಇಟ್ಟು ವಿಕ್ರಮ ಲ್ಯಾಂಡರ್‌ ಯಶಸ್ವಿಗೆ ಪೂಜೆ ಸಲ್ಲಿಸಲಾಯಿತು.

Tap to resize

ಚಂದ್ರಯಾನ-3 ಸಕ್ಸಸ್ ಗಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸೇರಿ ಅನೇಕ ಮುಸ್ಲಿಂ ಸಮುದಾಯದವರಿಂದ ಹಜರತ್ ಪೀರೇನ್ ಶಾ ವಲಿ ದರ್ಗಾಪೂಜೆ ಸಲ್ಲಿಸಲಾಯಿತು. ಮತ್ತೊಂದೆಡೆ, ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಶಿವಪ್ಪ ನಾಯಕ ವೃತ್ತದಲ್ಲಿರುವ ಹಜರತ್ ಸೈಯದ್ ರಾಜ್ ಬಕ್ಷ್ ವಲಿ ಅಲ್ಲಾಹ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಚಂದ್ರಯಾನ-3 ಯಶಸ್ವಿಗೆ ಸಾಗರದ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಗದಗನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಪೂಜೆ ಚಂದ್ರಯಾನ ಯಶಸ್ವಿಗಾಗಿ ಪೂಜೆ ಸಲ್ಲಿಸಲಾಯಿತು. 

ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮತ್ತೊಂದೆಡೆ ಬೆಳಗಾವಿಯ ಹುಕ್ಕೇರಿ ಪಟ್ಟಣದ ಹಿರೇಮಠದ ಯಾಗ ಶಾಲೆಯಲ್ಲಿ 108 ವೇದ ವಟುಗಳು ದೇಶದ ಧ್ವಜ‌ ಹಿಡಿದು ಮಂತ್ರ ಪಠಣ ಹಾಗೂ ಹೋಮ ಮಾಡಿದರು.

ಚಂದ್ರಯಾನ-3 ಗೆ ರಂಭಾಪುರಿ ಶ್ರೀಗಳು ಶುಭಹಾರೈಸಿದರು. ನಮ್ಮ ವಿಜ್ಞಾನಿಗಳ ಈ ಕೆಲಸ ವಿಶ್ವಕ್ಕೆ ಮಾದರಿಯಾಗಲಿ. ಇಂದು ಇಡೀ ಜಗತ್ತೆ ಭಾರತದತ್ತ ಮುಖ ಮಾಡಿದೆ. ವಿಜ್ಞಾನಿಗಳಿಗೆ ಬೆನ್ನುಲುಬಾಗಿ ನಿಂತ ಪ್ರಧಾನಿ ಮೋದಿಗೂ ಅಭಿನಂದನೆಗಳು. ಸಾವಿರಾರು ವಿಜ್ಞಾನಿಗಳ ತಂಡದಲ್ಲಿ ಬಾಳೆಹೊನ್ನೂರು ಮಹಿಳೆ ಇರುವುದು ನಮ್ಮ ಹೆಮ್ಮೆ. ಇಸ್ರೋ ವಿಜ್ಞಾನಿಗಳ ಮುಂದಿನ ಭವಿಷ್ಯವೂ ಸುಖಕಾರವಾಗಿರಲಿ-ಸಾಧನೆಗೈಯುವಂತಿರಲಿ ಎಂದು ಹಾರೈಸಿದರು.

Latest Videos

click me!