ಹೊಸ ನೀರು ಬಂದಾಗ ಮೀನುಗಳು ಸಾಯೋದು ಸಹಜ. ಆದ್ರೆ ಕಳೆದ ಮೂರು ದಿನಗಳಿಂದ ಚಿತ್ರದುರ್ಗದಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ದಾಟಿದೆ. ಕೆರೆಯಲ್ಲಿನ ನೀರು ಆವಿಯಾಗಿ ಕಡಿಮೆಯಾಗ್ತಿದೆ. ಅಲ್ಲದೇ, ಚಿತ್ರದುರ್ಗದ ಮುರುಘಾ ಮಠದ ಮುಂಭಾಗದಲ್ಲಿರುವ ಮಠದಹಟ್ಟಿ ಕೆರೆಗೆ ಪಕ್ಕದ ಬಡಾವಣೆಯ ಯೂಜಿಡಿ ನೀರು ಹಾಗು ಚರಂಡಿನೀರು ನಿರಂತರವಾಗಿ ಹರಿಯುತಿದ್ದು, ನೀರು ಮಲಿನಗೊಂಡಿದೆ. ಹೀಗಾಗಿ ಕೆರೆಯಲ್ಲಿನ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಕೆರೆಯ ಪಕ್ಕದಲ್ಲೇ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ದಾರಿಹೋಕರು, ಸ್ಥಳಿಯರು ಮತ್ತು ಪ್ರವಾಸಿಗರು ದುರ್ನಾತದಿಂದ ಬಾರಿ ಟಾರ್ಚರ್ ಎದುರಿಸುವಂತಾಗಿದೆ.