ರವಿವರ್ಮನ ಪೇಂಟಿಂಗ್ ಮಾದರಿಯಲ್ಲಿ ಜನಾರ್ದನ ರೆಡ್ಡಿ ಪತ್ನಿ ಫೋಟೋ ಶೂಟ್ ವೈರಲ್

First Published | May 1, 2022, 7:07 PM IST

ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ರಾಜಕೀಯದಲ್ಲಿ ಮತ್ತು ಗಣಿಗಾರಿಕೆಯಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದಾಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಹಿಡಿದವರೇ ಇಲ್ಲ.. ಸದಾ ಒಂದಿಲ್ಲೊಂದು ಕೆಲಸದಲ್ಲಿ ಬಿಜಿಯಾಗಿರೋ ಜನಾರ್ದನ ರೆಡ್ಡಿ ಕಳೆದ ಹತ್ತು ವರ್ಷಗಳ ಹಿಂದೆ ಜೈಲಿಗೊದ ಬಳಿಕ ಫುಲ್ ಸೈಲೆಂಟ್ ಆದ್ರು.  ಕಳೆದ ಮೂರುನಾಲ್ಕ ವರ್ಷದ ಹಿಂದೆ ಜೈಲಿನಿಂದ ಬಂದ್ರಾದ್ರೂ ಹೆಚ್ಚು  ಕೆಲಸವಿಲ್ಲದ ಕಾರಣ ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ರು. ಮಗಳ‌ ಮದುವೆ, ಮೊಮ್ಮಗಳ ಜೊತೆಗೆ ಆಟ ಇದರ ಜೊತೆಗೆ ಮಗನನ್ನು ಹೀರೋ ಮಾಡೋ ಬಗ್ಗೆ ಹೆಚ್ಚು ಗಮನಸುತ್ತಿದ್ರು ಜನಾರ್ದನ ರೆಡ್ಡಿ..ಆದ್ರೆ ಮೊನ್ನೆ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿಯ ಪೋಟೋ ಶೂಟ್ ಮಾಡಿಸಿದ್ದು ಇದೀಗ ‌ಸಾಮಾಜಿಕ‌ ಜಾಲತಾಣ ಭರ್ಜರಿ ಸದ್ದು ಮಾಡ್ತಿದೆ.

ರಾಜ ಮನೆತನದಲ್ಲಿ ಜನಿಸಿದ ರಾಜ ರವಿವರ್ಮ ಅವರು ಅದ್ಭುತ ಕಲಾವಿದರು.. ತಮ್ಮ ಕುಂಚ ಹಾಗೂ ಕೈಚಳಕದಿಂದ ಬಿಡಿಸಿದ ಅದ್ಭುತ ಚಿತ್ರಗಳ ಮೂಲಕ ವಿಶ್ವದ ಗಮನವನ್ನು ಸೆಳೆದಿದ್ದವು. ಅಂತಹ ವ್ಯಕ್ತಿಯ ಆಯ್ದ  ಚಿತ್ರಪಟವನ್ನು ಮುಂದಿಟ್ಟುಕೊಂಡು ಜನಾರ್ದನ ರೆಡ್ಡಿ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಅವರ ಫೋಟೋ ಶೂಟ್ ಮಾಡಿಸಿದ್ದಾರೆ.‌ 

ರವಿವರ್ಮ ಶೈಲಿಯ ಮಹಿಳೆಯ ಅದ್ಬುತವಾದ ಪೇಂಟಿಂಗ್ ಗಳನ್ನು ಒಂದು ಕಡೆ ಅದೇ ಸ್ಟೈಲ್ ನಲ್ಲಿ ಮತ್ತೊಂದು ಕಡೆ ಅರುಣಾ ಅವರ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.. 

Tap to resize

ಅದಕ್ಕೊಂದಿಷ್ಟು ಬರವಣಿಗೆ ನೀಡೋ ಮೂಲಕ ರವಿವರ್ಮ ಅವರನ್ನು ಹಾಡಿಹೊಗಳಿದ್ದಾರೆ..ಕೈಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸಲು ಕುಳಿತರೆ ರವಿವರ್ಮಾ ಎಂಬ ಕಲಾವಿದರಿಗೆ ರವಿವರ್ಮರೆ ಸಾಟಿ ಎನ್ನುವ ಸಾಲನ್ನು ಹಾಕಿದ್ದಾರೆ..

 ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿಯ ಫೋಟೋ ಶೂಟ್ ಮಾಡಿಸಿದ್ದು ಇದೀಗ ‌ಸಾಮಾಜಿಕ‌ ಜಾಲತಾಣ ಭರ್ಜರಿ ಸದ್ದು ಮಾಡ್ತಿದೆ. ಇದಕ್ಕೆ ಕಾರಣ ಅಥವಾ ಫೋಟೋ ಶೂಟ್ ಯಾವುದಕ್ಕೆ ಮಾಡಿಸಿದ್ದಾರೆ ಅನ್ನೋದು ನೋಡಿದ್ರೇ, ಸ್ವಲ್ಪ ಓವರ್ ಅನಿಸಿದ್ರೂ ಇಂತಹದ್ದೂ  ಐಡಿಯಾವನ್ನು‌ ನಿಜಕ್ಕೂ ಮೆಚ್ಚಲೇಬೇಕೆ ಎನ್ನುತ್ತಿದ್ದಾರೆ ನೆಟ್ಟಿಗರು.. 

ಇನ್ನೂ ತಮ್ಮ ಮಡದಿಯ ಈ ಪೋಟೋಗಳ‌ನ್ನು ರವಿವರ್ಮ ಅವರಿಗೆ ಅರ್ಪಿಸಿದ್ದಾರಂತೆ ಜನಾರ್ದನ ರೆಡ್ಡಿ.. ಗೌರವದ ಪ್ರತೀಕ ಮತ್ತು ಸಾಂಪ್ರದಾಯಿಕ ಉಡುಪಿನೊಂದಿಗೆ ಸುಂದರ ಸ್ತ್ರೀ ಮೂರ್ತಿಗಳ  ಚಿತ್ರಗಳನ್ನು ಬಿಡಿಸಿ ವಿಶ್ವದ ಗಮನ ಸೆಳೆದಿರುವ ರವಿವರ್ಮ ಅವರ ಆಯ್ದ ಕೆಲವು ಚಿತ್ರಗಳ ಪ್ರತಿರೂಪದ ಫೋಟೋಶೂಟ್ ಗಳು ಕಲಾವಿದನ ಕಲೆಗೆ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ಜನಾರ್ದನ ರೆಡ್ಡಿ.

ಒಂದು ಕಾಲದಲ್ಲಿ ನಿಮಿಷಕ್ಕೆ ಕೋಟಿ ದುಡಿಯುತ್ತಾರೆ ಎನ್ನಲಾಗ್ತಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ‌ಮುಟ್ಟಿದ್ದೇಲ್ಲ ಚಿನ್ನಗಾಗಿತ್ತು.ಆದ್ರೇ ಕಾಲ ಬದಲಾಗಿದೆ ರಾಜಕೀಯ ‌ಮತ್ತು ಗಣಿಗಾರಿಕೆಯಿಂದ ಅನಿವಾರ್ಯವಾಗಿ ದೂರ ಉಳಿಯೋ ಕಾಲ ಬಂದಿದೆ. ಹೀಗಾಗಿ ಜನರೊಂದಿಗೆ ನಿರಂತರ ಸಂಪರ್ಕ ಇರಬೇಕು ಎನ್ನುವ ಅಲೋಚನೆಯಿಂದ ತಿಂಗಳಿಗೊಮ್ಮೆಯಾದ್ರೂ ವಿಭಿನ್ನ ಬರವಣಿಗೆ ಮತ್ತು ಪೋಟೋ ಶೂಟ್ ಗಳ ಮೂಲಕ ಜಾಲತಾಣದಲ್ಲಿ ಚರ್ಚೆಯಲ್ಲಿ ಇರುತ್ತಾರೆ..  ಇದೀಗ ರವಿವರ್ಮ ಹುಟ್ಟು ಹಬ್ಬದ ನೆಪದಲ್ಲಿ ‌ಮಾಡಿಸಿದ ಮಡದಿಯ ಫೋಟೋ ಶೂಟ್ ಭರ್ಜರಿ ವೈರಲ್ ಆಗಿದೆ..

Latest Videos

click me!