ಬಳ್ಳಾರಿ: ಸಂಸದ ಸಸಿಕಾಂತ್ ಸೆಂಥಿಲ್ ಅವರು ತನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ಮತ್ತು ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶನಿವಾರ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮತ್ತೆ ಸೆಂಥಿಲ್ ವಿರುದ್ಧ ಧ್ವನಿ ಎತ್ತಿದ್ದಾರೆ. ಇತ್ತೀಚಿನ ಧರ್ಮಸ್ಥಳ ವಿವಾದ, ಅಪಪ್ರಚಾರ ಹಾಗೂ ಸೆಂಥಿಲ್ ಪಾತ್ರದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಅವರು ಹಿಂದೂ ಧಾರ್ಮಿಕ ಭಾವನೆ. ಮೇಲೆ ಎಡಪಂಕ್ತಿಯರು ನಗರ ನಕ್ಸಲ್ ಭಾಗಿಯಾಗಿದ್ದಾರೆ ಎಂದು ಹೇಳಿದ್ದೇ ಅದಕ್ಕೆ ಬದ್ಧ ಎಂದಿದ್ದಾರೆ. ಧರ್ಮಸ್ಥಳ ವಿಚಾರ ರಾಜ್ಯದ ಮಟ್ಟದಲ್ಲಷ್ಟೇ ಅಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಎಂದು ರೆಡ್ಡಿ ಹೇಳಿದರು. “ಇದು ಹಿಂದೂ ಧಾರ್ಮಿಕ ಭಾವನೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಎಡಪಂಥೀಯರು, ನಗರ ನಕ್ಸಲ್‌ಗಳು ಭಾಗಿಯಾಗಿದ್ದಾರೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ” ಎಂದು ಅಭಿಪ್ರಾಯಪಟ್ಟರು. ಬಳ್ಳಾರಿ ಮೂಲದ ಸಮೀರ್, ಸೌಜನ್ಯ ಪ್ರಕರಣಗಳ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯಿತು, ಮಿಲಿಯನ್ ವೀಕ್ಷಣೆ ಗಳಿಸಿ ಅನಗತ್ಯ ಕುತಂತ್ರ ರೂಪಿಸಲಾಯಿತು ಎಂದರು.