GBA clears footpath encroachments: ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇಂದು ಬನಶಂಕರಿ ದೇವಸ್ಥಾನದ ಮುಂಭಾಗದದಲ್ಲಿದ್ದ ನಂದಿನಿ ಪಾರ್ಲರ್ ತೆರವುಗೊಳಿಸುವ ವೇಳೆ ಹೈಡ್ರಾಮಾ ನಡೆದಿದೆ.
GBA clears footpath encroachments ಬನಶಂಕರಿ ಮುಂಭಾಗದ ನಂದಿನಿ ಪಾರ್ಲರ್ ತೆರವು
ಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು 5 ಪಾಲಿಕೆಯ ವ್ಯಾಪ್ತಿಯಲ್ಲೂ ಕಾರ್ಯಾಚರಣೆಗಿಳಿದಿದ್ದಾರೆ. ಅದರಂತೆ ಇಂದು ಬನಶಂಕರಿ ಪಾರ್ಲರ್ ಮುಂಭಾಗದಲ್ಲಿ ಸುಮಾರು ಹತ್ತು ವರ್ಷಗಳಿಂದಲೂ ಇದ್ದ ನಂದಿನಿ ಪಾರ್ಲರ್ ತೆರವುಗೊಳಿಸಿದರು.
28
ಬನಶಂಕರಿ ಮೊದಲ ನಂದಿನಿ ಪಾರ್ಲರ್ ತೆರವು
ನಂದಿನಿ ಪಾರ್ಲರ್ ತೆರವು ವೇಳೆ ಅಂಗಡಿಯ ಮಾಲಕಿ ಸುಮಿತ್ರ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ ಈಗ ಏಕಾಏಕಿ ತೆರವು ಮಾಡಿ ನಮ್ಮನ್ನು ಬೀದಿಗೆ ತರಬೇಡಿ ಎಂದು ಗೋಳಾಡಿದರು. ಇದ್ಯಾವುದರ ಬಗ್ಗೆ ಚಿಂತಿಸದೆ ಅಧಿಕಾರಿಗಳು ಬುಲ್ಡೋಜರ್ ಬಳಸಿ ತೆರವುಗೊಳಿಸಿದರೆ ಈ ವೇಳೆ ಮಾಲಕೀ ಕಣ್ಣೀರು ಹಾಕಿದರು
38
ಬನಶಂಕರಿ ನಂದಿನಿ ಪಾರ್ಲರ್ ತೆರವು: ಪೊಲೀಸರ ವಿರುದ್ಧ ಲಂಚದ ಆರೋಪ!
ಹತ್ತು ವರ್ಷಗಳಿಂದ ವ್ಯಾಪಾರ ನಡೆಸಿದ್ದ ನಂದಿನಿ ಶಾಪ್ ಕಣ್ಮುಂದೆ ತೆರವುಗೊಳಿಸಿದ ಬಳಿಕ ಅಂಗಡಿ ಇದ್ದ ಜಾಗದಲ್ಲಿ ಕುಸಿದು ಕುಳಿತ ಸುಮಿತ್ರ 'ತೆರವುಗೊಳಿಸುವ ಮುಂಚೆ ನಮಗೆ ಪೊಲೀಸರು ಲಂಚ ಕೇಳಿದರು. ನಾವು ಕೊಡಲ್ಲ ಎಂದಿದ್ದಕ್ಕೆ ನಮ್ಮ ಮೇಲೆ ಮೇಲೆ ಟಾರ್ಗೆಟ್ ಮಾಡಿ ತೆರವು ಮಾಡುವ ಮೂಲಕ ನಮ್ಮ ಬೀದಿಗೆ ತಂದಿದ್ದಾರೆ ಎಂದು ಕಣ್ಣೀರು.
ಫುಟ್ಪಾತ್ ತೆರವು ನೆಪದಲ್ಲಿ ಹಣಕ್ಕೆ ಬೇಡಿಕೆ ಇಡ್ತಿದ್ದಾರಾ ಪೊಲೀಸರು?
ಇಡೀ ಬೆಂಗಳೂರು ತುಂಬಾ ರಸ್ತೆ ಮೇಲೆಯೇ ನಂದಿನಿ ಪಾರ್ಲರ್‌ಗಳಿವೆ. ಇದುವರೆಗೆ ಯಾವ ಪಾರ್ಲರ್ ತೆರವುಗೊಳಿಸಿಲ್ಲ. ಆದರೆ ನಾವು ಲಂಚ ಕೊಡೋಲ್ಲ ಎಂದಿದ್ದಕ್ಕೆ ಪೊಲೀಸರು ಅಧಿಕಾರಿಗಳು ನಮ್ಮ ಟಾರ್ಗೆಟ್ ಮಾಡಿದ್ದಾರೆ. ನಾವಿಲ್ಲಿ ನಿನ್ನೆ ಮೊನ್ನೆಯಿಂದ ಅಂಗಡಿ ತೆರೆದಿಲ್ಲ ಹತ್ತು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಇದರಲ್ಲೇ ನಾವು ಜೀವನ ಕಟ್ಟಿಕೊಂಡಿದ್ವೇವೆ. ಎಂದು ಚೆಲ್ಲಪಿಲ್ಲಿ ಬಿದ್ದ ಅಂಗಡಿ ಸಾಮಾನುಗಳನ್ನು ಕಂಡು ಗದ್ಗದಿತರಾದರು.
58
ನೋಟಿಸ್ ಕೊಡದೇ ನಂದಿನಿ ಪಾರ್ಲರ್ ತೆರವು?
ಫುಟ್ಪಾತ್ ತೆರವು ಕಾರ್ಯಾಚರಣೆ ವೇಳೆ ವ್ಯಾಪಾರಸ್ಥರಿಗೆ ಮೊದಲು ನೋಟಿಸ್ ಜಾರಿ ಮಾಡಬೇಕೆಂದ ನಿಯಮವಿದೆ. ಆದರೆ ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಪೊಲೀಸರು ಲಂಚ ಕೇಳಿದ್ರು. ಆದ್ರೆ ನಾವು ನೋಟಿಸ್ ಕೊಡದೇ ಹೇಗೆ ತೆರವು ಮಾಡ್ತೀರಿ ಲಂಚ ಕೊಡಲ್ಲ ಎಂದೆವು. ಇದೇ ಸಿಟ್ಟಿನಿಂದ ನಮ್ಮನ್ನು ಪೊಲೀಸರು ಟಾರ್ಗೆಟ್ ಮಾಡಿದರು ಎಂದು ಸುವರ್ಣ ನ್ಯೂಸ್‌ಗೆ ಬಳಿ ಸರ್ಕಾರ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.
68
ಲಂಚ ಕೊಟ್ಟಿದ್ರೆ ನಮ್ಮ ಶಾಪ್ ತೆರವು ಮಾಡ್ತಿರಲಿಲ್ಲ...!
ಅಲ್ಲ ಸ್ವಾಮಿ ಇದೇ ಜಾಗದಲ್ಲಿ, ಇದೇ ನಗರದಲ್ಲಿ ಎಷ್ಟೋ ನಂದಿನಿ ಪಾರ್ಲರ್‌ಗಳಿವೆ. ಅವೆಲ್ಲ ಎಲ್ಲಿ ತೆರವು ಮಾಡಿದ್ರಿ? ನಮ್ಮ ನಂದಿನಿ ಅಂಗಡಿನೇ ಆಗಬೇಕಿತ್ತಾ? ಅವರು ಕೇಳಿದಷ್ಟು ನಾವು ಲಂಚ ಕೊಟ್ಟಿದ್ದರೆ ತೆರವು ಮಾಡ್ತಿರಲಿಲ್ಲ. ಆದರೆ ನಾವು ಲಂಚ ಕೊಡಲಿಲ್ಲ, ನೋಟಿಸ್ ಕೇಳಿದ್ದೇವೆ. ತೆರವು ಮಾಡುವ ಮುಂಚೆ ನಮಗೆ ನೋಟಿಸ್ ಯಾಕೆ ಕೊಡ್ಲಿಲ್ಲ ಎಂದು ಪ್ರಶ್ನಿಸಿದ್ದೇವೆ ಇದಕ್ಕಾಗಿ ಪೊಲೀಸರು, ಅಧಿಕಾರಿಗಳು ನಮ್ಮ ಟಾರ್ಗೆಟ್ ಮಾಡಿದರು. ಇದೇ ವ್ಯಾಪಾರವನ್ನು ನಂಬಿಕೊಂಡು ಬದುಕುತ್ತಿದ್ದ ನಾವೀಗ ಬೀದಿಗೆ ಬಿದ್ದಿದ್ದೇವೆ ಎಂದು ಗೋಳು ತೋಡಿಕೊಂಡರು.
78
ಅಧಿಕಾರಿಗಳ ಮೇಲೆ ಹಿಡಿಶಾಪ
ನೋಟಿಸ್ ನೀಡದೆ ದಿಢೀರ್ ಬಂದು ನಮ್ಮ ನಂದಿನಿ ಶಾಪ್ ತೆರವುಗೊಳಿಸಿದ್ದಾರೆ. ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಸ್ವಾಮಿ, ನಮಗೆ ಇದೆಲ್ಲ ಜುಜುಬಿ ಎನಿಸಿದೆ. ಇಷ್ಟೊಂದು ಹಣ ನಮಗೆ ಯಾರು ಕೊಡ್ತಾರೆ ಸ್ವಾಮಿ. ನಮಗೆ ನೋಟಿಸ್ ಕೊಟ್ಟಿದಿದ್ದರೆ ನಾವೇ ತೆರವು ಮಾಡುತ್ತಿದ್ದೇವು. ನಮಗೆ ನೋಟಿಸ್ ಕೊಡುವ ಬದಲು ನಮ್ಮ ಬಳಿ ಲಂಚ ಕೇಳಿದ್ರು. ನಾವು ಪೊಲೀಸರು ಕೇಳಿದಷ್ಟು ಲಂಚ ಕೊಡಲು ಶಕ್ತರಲ್ಲ. ಹೀಗಾಗಿ ತೆರವು ಮಾಡಿಕೊಳ್ಳುತ್ತೇವೆ, ಲಂಚ ಕೊಡಲ್ಲ ಎಂದೆವು. ಆದರೆ ಯಾವುದಕ್ಕೂ ಅವಕಾಶ ನೀಡದೆ ಈಗ ಎಲ್ಲ ನಾಶ ಮಾಡಿ ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು.
88
ಬೀದಿಬದಿ ವ್ಯಾಪಾರಿಗಳು ಆಕ್ರೋಶ
ನೋಟಿಸ್ ನೀಡದೆ ದಿಢೀರ್ ನಂದಿನಿ ಪಾರ್ಲರ್ ತೆರವು ಮಾಡಿದ ಅಧಿಕಾರಿಗಳ ವಿರುದ್ಧ ಬೀದಿ ವ್ಯಾಪಾರಿಗಳು ಸ್ಥಳೀಯರು ಪೊಲೀಸರು, ಜಿಬಿಎ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ರಾಜಾಕಾಲುವೆ ಎಷ್ಟು ಕುಳಗಳು ಬಿಲ್ಡರ್‌ಗಳು ಒತ್ತುವರಿ ಮಾಡಿಕೊಂಡಿದ್ದಾರೆ ಸ್ವಾಮಿ, ನೀವು ಮೊದಲು ಅವರನ್ನ ತೆರವುಗೊಳಿಸಿ. ಬೀದಿಬದಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡ ಬಡವರ ಮೇಲೆ ನಿಮ್ಮ ಅಧಿಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ