ಬೆಂಗಳೂರು ಅಬಕಾರಿ ಇಲಾಖೆಯಿಂದ ₹39 ಲಕ್ಷ ಮೌಲ್ಯದ ಫಾರಿನ್ ಬ್ರ್ಯಾಂಡ್ ಮದ್ಯ ನಾಶ

Published : Jun 13, 2025, 07:54 PM ISTUpdated : Jun 13, 2025, 08:00 PM IST

ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹39 ಲಕ್ಷ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ 516 ಲೀಟರ್ ಮದ್ಯ, ಖಾಲಿ ಬಾಟಲಿಗಳು ಮತ್ತು ಸಿಗರೇಟು ಬಾಕ್ಸ್‌ಗಳನ್ನು ನಾಶಪಡಿಸಲಾಗಿದೆ.

PREV
13

ಬೆಂಗಳೂರು (ಜೂನ್ 13): ಅಕ್ರಮವಾಗಿ ಸಾಗಣೆ ಮಾಡಲಾಗಿದ್ದ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ, ಅದನ್ನು ನಾಶಪಡಿಸಿರುವ ಮೂಲಕ ಅಬಕಾರಿ ಇಲಾಖೆ ಬೃಹತ್ ಮಟ್ಟದ ಕಾನೂನು ಅನುಷ್ಠಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

23

ಈ ಮೂಲಕ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹30 ಲಕ್ಷ ನಷ್ಟವಾಗುವದು ತಡೆಯಲ್ಪಟ್ಟಿದೆ. ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಜಂಟಿ ಆಯುಕ್ತ ಫಿರೋಜ್ ಖಾನ್ ಖಿಲ್ಲೇದಾರ್, ನಗರ ಜಿಲ್ಲೆ-3ರ ಉಪ ಆಯುಕ್ತ ಡಾ. ಕೆ.ಎಸ್. ಮುರಳಿ, ಉಪವಿಭಾಗ 05ರ ಉಪ ಅಧೀಕ್ಷಕ ಸಿ. ಲಕ್ಷ್ಮೀಶ, ಕೆ.ಎಸ್.ಬಿ.ಸಿ.ಎಲ್, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಜೂನ್ 12ರಂದು ಈ ಮದ್ಯವನ್ನು ನಾಶಪಡಿಸಲಾಯಿತು.

33

ಈ ಸಂದರ್ಭದಲ್ಲಿ ಅಲೈಡ್ ಬ್ಲೆಂಡರ್ಸ್ ಅಂಡ್ ಡಿಸ್ಟಿಲರೀಸ್ ಪರಾಂಗಣದಲ್ಲಿ ವಿದೇಶಿ ಮದ್ಯದ 516 ಬಾಟಲಿಗಳಲ್ಲಿ ಇದ್ದ 516 ಲೀಟರ್ ಮದ್ಯವನ್ನು ನಾಶಪಡಿಸಲಾಯಿತು. ಜೊತೆಗೆ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಖಾಲಿ ಬಾಟಲ್‌ಗಳು ಹಾಗೂ ಸಿಗರೇಟು ಬೋಕ್ಸ್‌ಗಳನ್ನು ಸಹ ನಾಶಪಡಿಸಲಾಯಿತು. ನಾಶಪಡಿಸಿದ ವಸ್ತುಗಳ ಒಟ್ಟು ಮೌಲ್ಯ ರೂ. 39 ಲಕ್ಷ ಆಗಿದೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಮಾನವನ ಸೇವನೆಗೆ ಸೂಕ್ತವಲ್ಲದ 362.14 ಲೀಟರ್ ಮದ್ಯ, ವೈನ್ ಮತ್ತು ಬಿಯರ್ ಅನ್ನು ಸಹ ನಾಶಪಡಿಸಲಾಗಿದೆ ಎಂದು ನಗರ ಜಿಲ್ಲೆ-3ರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read more Photos on
click me!

Recommended Stories