Published : Jun 03, 2020, 12:58 PM ISTUpdated : Jun 03, 2020, 01:00 PM IST
ಬೆಂಗಳೂರು(ಜೂ.03): ಮಾರಕ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿಕನ್, ಮಟನ್, ಫಿಶ್, ಪಾನಿಪುರಿ ಅಂಗಡಿ ನಡೆಸುತ್ತಿದ್ದವರ ನೆರವಿಗೆ ಹುಚ್ಚ ವೆಂಕಟ್ ಧಾವಿಸಿದ್ದಾರೆ. ದುಡಿಯಲು ದುಡಿಮೆಯಿಲ್ಲದೆ ಕೈಯಲ್ಲಿ ದುಡ್ಡಿಲ್ಲದೆ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಹುಚ್ಚ ವೆಂಕಟ್ ಮಾನವೀಯತೆ ಮೆರೆದಿದ್ದಾರೆ.