ನೂತನ ಕೊರೋನಾ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ
ರೋಟರಿ, ಅದ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದೊಂದಿಗೆ ಕೇಂದ್ರ ಪ್ರಾರಂಭಿಸಿದ್ದು, ಇಂದಿನಿಂದ(ಗುರುವಾರ) ಕಾರ್ಯ ನಿರ್ವಹಿಸಲಿದೆ.
ಬಸ್ ನಿಲ್ದಾಣದ ಕೆಳ ಮತ್ತು ಮೊದಲ ಮಹಡಿಯಲ್ಲಿ ಸೋಂಕಿತರ ಆರೈಕೆಗಾಗಿ 200 ಹಾಸಿಗೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಶೇ.50 ಹಾಸಿಗೆಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮತ್ತವರ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮೀಸಲಿಡಲಾಗಿದೆ. ಉಳಿದ ಹಾಸಿಗೆಗಳ ಪೈಕಿ ಶೇ.10 ರೋಟರಿ ಮತ್ತು ಟೈಟಾನ್ ಸಂಸ್ಥೆಯಿಂದ ಶಿಫಾರಸು ಮಾಡಲ್ಪಟ್ಟ ರೋಗಿಗಳಿಗೆ ಕಾಯ್ದಿರಿಸಲಾಗಿದೆ.
ಕೇಂದ್ರ ತುರ್ತು ಚಿಕಿತ್ಸಾ ವಾರ್ಡ್ ಮತ್ತು 10 ಹಾಸಿಗೆಗಳ ಐಸಿಯು ಕೂಡ ಹೊಂದಿದೆ