ಬಸವೇಶ್ವರನಗರ ಕೋವಿಡ್‌ ನಿಗಾ ಕೇಂದ್ರ ಉದ್ಘಾಟನೆ: ಸೋಂಕು ಲಕ್ಷಣ ಇಲ್ಲದವರಿಗೆ ಇಲ್ಲಿ ಚಿಕಿತ್ಸೆ

First Published | Jul 23, 2020, 7:52 AM IST

ಬೆಂಗಳೂರು(ಜು.23): ನಗರದ ಬಸವೇಶ್ವರ ನಗರದ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಸ್ಥಾಪಿಸಲಾಗಿರುವ ‘ಕೋವಿಡ್‌ ನಿಗಾ ಕೇಂದ್ರ’ ಬುಧವಾರ ಉದ್ಘಾಟನೆಗೊಂಡಿದೆ.  

175 ಹಾಸಿಗೆ ಸಾಮರ್ಥ್ಯದ ಕೋವಿಡ್‌ ನಿಗಾ ಕೇಂದ್ರ ಉದ್ಘಾಟಿಸಿದ ವಸತಿ ಸಚಿವ ವಿ. ಸೋಮಣ್ಣ
ಈ ಭಾಗದಲ್ಲಿ ಎಸಿಮ್ಟಮ್ಯಾಟಿಕ್‌ ಮತ್ತು ಕಡಿಮೆ ಲಕ್ಷಣಗಳಿರುವವರ ಆರೈಕೆಗಾಗಿ ಈ ಆಸ್ಪತ್ರೆ ಉದ್ಘಾಟಿಸಲಾಗಿದೆ. ಯಾವುದೇ ಲಕ್ಷಣಗಳಿಲ್ಲದ ಹಾಗೂ ಕಡಿಮೆ ಲಕ್ಷಣಗಳಿರುವ ಸೋಂಕಿತರು ಮನೆಯಲ್ಲೇ ಆರೈಕೆಯಲ್ಲಿರಬಹುದು. ಒಂದು ವೇಳೆ ಮನೆಯಲ್ಲಿ ಸೂಕ್ತ ಸೌಲಭ್ಯ ಇಲ್ಲದವರನ್ನು ಈ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಲಾಗುತ್ತದೆ ಎಂದು ಹೇಳಿದ ಸಚಿವ ವಿ. ಸೋಮಣ್ಣ
Tap to resize

ಕೊರೋನಾ ಸೋಂಕು ಭಯಾನಕ ಕಾಯಿಲೆಯೇನೂ ಅಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಕೇವಲ ಎಂಟು ದಿನಗಳಲ್ಲಿ ಕೊರೋನಾ ಮುಕ್ತರಾಗಿ ಮನೆಗೆ ಮರಳುವ ಸಾಧ್ಯತೆ ಇರುತ್ತದೆ. ಸರ್ಕಾರ ಯಾವುದೇ ರೋಗಿಗೂ ಸಮಸ್ಯೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಸ್ಥಳೀಯ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

Latest Videos

click me!