ಬೆಂಗಳೂರು(ಜು.22): ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೆ ಹೆಚ್ಚಾಗುತ್ತಿವೆ. ಹೀಗಾಗಿ ಕೊರೋನಾ ಆರ್ಭಟವನ್ನ ಹೇಗಾದ್ರೂ ಮಾಡಿ ಕಟ್ಟಿ ಹಾಕಲು ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದಾರೆ. ಹೀಗಾಗಿ ಇಂದು(ಬುಧವಾರ) ಕೋವಿಡ್ ನಿಯಂತ್ರಣ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಸಿಎಂ ಯಡಿಯೂರಪ್ಪ ಮಾಹಿತಿಯನ್ನ ನೀಡಿದ್ದಾರೆ. ಕೇವಲ 12 ನಿಮಿಷದಲ್ಲಿ ರಾಜ್ಯಪಾಲರು ಮತ್ತು ಸಿಎಂ ನಡುವೆ ಮಾತುಕತೆ ಅಂತ್ಯವಾಗಿದೆ.