ಫೋಟೋಗಳಲ್ಲಿ: ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕದ ಕ್ಷಣಗಳು

First Published | Apr 23, 2023, 7:17 PM IST

ತುಮಕೂರು (ಏ.23): ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಸರಳವಾಗಿ ನಡೆದಿದೆ.  ಸಿದ್ಧಗಂಗೆಯಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ, ಹಿರಿಯ ಗುರುಗಳು ತಮ್ಮ ಕೊರಳಿನ ರುದ್ರಾಕ್ಷಿ ಮಾಲೆಯನ್ನು ಶಿಷ್ಯರ ಕೊರಳಿಗೆ ಹಾಕಿ ಅನುಗ್ರಹ ಪೂರ್ವಕವಾಗಿ ಆಶೀರ್ವದಿಸುವುದು. ಅದರಂತೆ ಶಿವಕುಮಾರ ಶ್ರೀಗಳು ಮನೋಜ್ ಕುಮಾರ್‌ ಅವರನ್ನು ಆಶೀರ್ವದಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್‌, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿಯಾಗಿ ಹರ್ಷಾ, ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿ ಗೌರಿಶಂಕರ್‌ ಅವರನ್ನ ನೇಮಕ ಮಾಡಲಾಗಿದೆ. ಸಿದ್ದಗಂಗಾ ಮಠದ ಹಳೆ ಮಠದ ಆವರಣದಲ್ಲಿ ಸರಳವಾಗಿ ಪಟ್ಟಾಭಿಷೇಕ   ಕಾರ್ಯಕ್ರಮ ನಡೆದಿದೆ. 

ಕಂಚುಗಲ್‌ ಬಂಡೇಮಠಕ್ಕೂ ಉತ್ತರಾಧಿಕಾರಿ ನೇಮಕ:

ಇದೇ ವೇಳೆ, ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕಂಚುಗಲ್‌ ಬಂಡೇಮಠಕ್ಕೂ ಉತ್ತರಾಧಿಕಾರಿಯನ್ನು ನೇಮಿಸಲಾಗಿದೆ. ಹರ್ಷ ಕೆ.ಎಂ, ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ. ತುಮಕೂರು ತಾಲೂಕಿನ ಕಾಳೇನಹಳ್ಳಿಯ ಹರ್ಷ ಅವರು, ಗ್ರಾಮದ ಮಹಾಂತೇಶ್‌ ಮತ್ತು ಮಲ್ಲಾಜಮ್ಮ ದಂಪತಿಯ ಪುತ್ರರು. ಬಿ.ಎ.,ಬಿ.ಎಡ್‌., ಎಂಎ, ವಿದ್ವತ್‌ (ಸಂಸ್ಕೃತ) ಪದವೀಧರರು.

Tap to resize

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲಹಳ್ಳಿ ಮೂಲದ ಮನೋಜ್‌ ಕುಮಾರ್‌ ಅವರು ಪ್ರಸ್ತುತ ಸಿದ್ಧಗಂಗಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಎಂ.ಎಸ್ಸಿ, ಎಂ.ಎ, ಬಿ.ಎಸ್ಸಿ, ಬಿ.ಎಡ್‌, ವಿದ್ವತ್‌ (ಸಂಸ್ಕೃತ) ಪದವೀಧರರು. ಮನೋಜ್‌ ಕುಮಾರ್‌ ಅವರು, ಮೈಲಹಳ್ಳಿಯ ಷಡಾಕ್ಷರಯ್ಯ ಹಾಗೂ ವಿರುಪಾಕ್ಷಮ್ಮ ದಂಪತಿಯ ಪುತ್ರರು. ತುಮಕೂರು ಮಠದಲ್ಲೇ ಉಳಿದುಕೊಂಡು ವಿದ್ಯಾಭ್ಯಾಸ ಮುಗಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಸವ ಕಲ್ಯಾಣ ಮಠಕ್ಕೆ ಗೌರೀಶ್‌ ಕುಮಾರ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಗೌರೀಶ್‌ ಕುಮಾರ್‌ ಅವರು ಮಂಡ್ಯ ಜಿಲ್ಲೆ ಬಿಳಗುಲಿ ಗ್ರಾಮದ ನಿವಾಸಿಯಾಗಿದ್ದು, ಗಣೇಶ್‌ ಹಾಗೂ ಅಂಬಿಕಾ ದಂಪತಿಯ ಪುತ್ರರಾಗಿದ್ದಾರೆ. ವೇದಾಧ್ಯಯನ ಮಾಡಿದ್ದು, ಸಂಸ್ಕೃತ ವಿದ್ವತ್‌ನಲ್ಲಿ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವಮೂರ್ತಿ ಮಹಾಸ್ವಾಮಿಗಳು ಸೇರಿ ಅನೇಕ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿದೆ.

Latest Videos

click me!