Published : May 28, 2020, 10:51 AM ISTUpdated : May 28, 2020, 11:07 AM IST
ಬೆಂಗಳೂರು(ಮೇ.28): ಮಹಾಮಾರಿ ಕೊರೋನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಇದರಿಂದ ದೇಶದ ಜನತೆ ಬಹಳಷ್ಟು ಕಷ್ಟ, ನಷ್ಟಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಬಡ ಜನರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಇನ್ನಿಲ್ಲದ ತೊಂದರೆಗಳನ್ನ ಎದುರಿಸಿದ್ದಾರೆ. ಹೀಗಾಗಿ ಜನರ ಪರ ಧ್ವನಿ ಎತ್ತಲು ಕಾಂಗ್ರೆಸ್ ಆನ್‌ಲೈನ್ ಅಭಿಯಾನ ಆರಂಭಿಸಿದೆ.