ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ: ಸಿಎಂ ಬಿಎಸ್‌ವೈ
First Published | Jun 21, 2021, 10:34 AM ISTಬೆಂಗಳೂರು(ಜೂ.21): ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ. ವಿಶ್ವದಾದ್ಯಂತ 225 ಹೆಚ್ಚಿನ ದೇಶಗಳಲ್ಲಿ ಇಂದು(ಭಾನುವಾರ) ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಯೋಗವನ್ನು ಮನೆಯಲ್ಲಿಯೇ ಆಚರಿಸಿ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ. ಸಾಂಕ್ರಾಮಿಕ ಉಂಟುಮಾಡಿರುವ ಸಂಕಷ್ಟದಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.