ಜೀವದ ಹಂಗನ್ನು ತೊರೆದು ದೇಶದ ಗಡಿಗಳನ್ನು ಕಾಯುವ ಯೋಧರಿಗೆ ಈ ಕಾರ್ಯಕ್ರಮ ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಿದೆ ಎಂದು ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ
ಆತ್ಮವಿಶ್ವಾಸದಿಂದ ದೇಶದ ಉದ್ದಗಲಕ್ಕೂ ಸಂಚರಿಸಿ ಈ ಯಾತ್ರೆ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ಸಂದೇಶ ಯೋಧರು ರವಾನೆ ಮಾಡುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ಯೋಧರಿಗೆ ಮತ್ತಷ್ಟು ಉತ್ತೇಜನ ನೀಡಲಿವೆ. ಈ ಯಾತ್ರೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ ಸಿಎಂ
ವಿಧಾನಸೌಧದ ಪೂರ್ವ ದ್ವಾರದ ಬಳಿ ಭಾನುವಾರ ಗಡಿ ಭದ್ರತಾ ಪಡೆ(ಬಿಎಸ್‌ಎಫ್), ದಿವ್ಯಾಂಗ ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ಆದಿತ್ಯಾ ಮೆಹ್ತಾ ಪ್ರತಿಷ್ಠಾನಗಳು ಜಂಟಿಯಾಗಿ ಆಯೋಜಿದ್ದ ಸೈಕಲಿಂಗ್‌ನಲ್ಲಿ 30ಕ್ಕೂ ಹೆಚ್ಚು ಯೋಧರು ಭಾಗಿಯಾಗಿದ್ದರು. ಸುಮಾರು ದೇಶದ 35 ನಗರಗಳಲ್ಲಿ 43 ದಿನಗಳ ಕಾಲ ಸೈಕ್ಲಿಂಗ್ ಹಮ್ಮಿಕೊಳ್ಳಲಾಗಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯಲಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬಿಎಸ್‌ಎಫ್‌ನ ಐಜಿ ಎಸ್.ಕೆ.ತ್ಯಾಗಿ ಮತ್ತುತರರು ಉಪಸ್ಥಿತರಿದ್ದರು.