ಸಿಎಸ್ ವಿಜಯಭಾಸ್ಕರ್ ಹುಟ್ಟುಹಬ್ಬ, ನಿವೃತ್ತಿ: ಸನ್ಮಾನಿಸಿದ ಸಿಎಂ ಬಿಎಸ್‌ವೈ
ಬೆಂಗಳೂರು(ಡಿ.28): ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಜನ್ಮದಿನದ ಅಂಗವಾಗಿ ಹಾಗೂ ಇದೇ ಡಿಸೆಂಬರ್ 31 ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಸೋಮವಾರ) ಮುಖ್ಯಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.