Bharat Jodo Yatra; ರಾಹುಲ್ ಗಾಂಧಿ ಸಂವಾದದ ವೇಳೆ ಕಣ್ಣೀರಿಟ್ಟ ಮಹಿಳೆಯರು

First Published Oct 6, 2022, 8:22 PM IST

ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ಸಂಚರಿಸುತ್ತಿದ್ದು, ಈ ಯಾತ್ರೆಯಲ್ಲಿ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಭಾಗವಹಿಸಿದ್ದಾರೆ. ಭಾರತ ಜೋಡೋ ಯಾತ್ರೆ ವೇಳೆ ರೈತರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದು, ಸಂವಾದದ ವೇಳೆ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಸಾಲಬಾಧೆಯಿಂದ  ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದ ಸದಸ್ಯರು ಕಣ್ಣೀರು ಹಾಕಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆಯ ಲಂಚ್ ಬ್ರೇಕ್ ಸಂದರ್ಭದಲ್ಲಿ ರೈತ ಕುಟುಂಬದವರೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್‌ ನ ರಾಹುಲ್ ಗಾಂಧಿ

ರೈತರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದ ರಾಹುಲ್ ಗಾಂಧಿ. ಈ ವೇಳೆ ಬೆಂಬಲ ಬೆಲೆ ಸೇರಿದಂತೆ ರೈತರು ತಮ್ಮ ಸಮಸ್ಯೆಗಳನ್ನ ರಾಹುಲ್ ಜೊತೆ ಹಂಚಿಕೊಂಡಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆಯ ಮಧ್ಯೆ ರೈತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ. ರಾಹುಲ್ ಗೆ ಸಾಥ್ ನೀಡಿದ ಇತರ ಕಾಂಗ್ರೆಸ್ ನಾಯಕರು. 

ಆತ್ಮಹತ್ಯೆ ಘಟನೆ ಬಳಿಕ ಜೀವನ ನಡೆಸಲು ತುಂಬಾ  ಕಷ್ಟವಾಗಿದೆ ಎಂದು ರಾಹುಲ್ ಗಾಂಧಿ ಸಂವಾದದ ವೇಳೆ ಹೇಳಿಕೊಂಡು ಮಹಿಳೆ ಕಣ್ಣೀರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕರಾಡಿಯಾ ಗ್ರಾಮದ ರೈತರ ಕುಟುಂಬದ ಜತೆ ಸಂವಾದ ನಡೆಸಿ ಸಮಸ್ಯೆ ಆಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

 ರೈತರ ಕುಟುಂಬದ ಜತೆಗಿನ  ಸಂವಾದಕ್ಕೆ ಸಾಥ್ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ. ಶಿವಕುಮಾರ್, ಬಿಕೆ ಹರಿ ಪ್ರಸಾದ್  ಮತ್ತಿತರರು.

click me!